ವಚನ ಮಾಂಗಲ್ಯದಲ್ಲಿಆಡಂಬರಕ್ಕಿಂತ ಆದರ್ಶ ಹೆಚ್ಚಿರುತ್ತೆ. ಎಲ್ಲರಿಗೂ ಆದರ್ಶದ ಬಾಳು ಮುಖ್ಯ.: ಪೂಜ್ಯ ಮುರುಘರಾಜೇಂದ್ರ ಸ್ವಾಮೀಜಿ
ಚಾಮರಾಜನಗರ:
ತಾಲೂಕಿನ ಮರಿಯಾಲದ ಶ್ರೀಮಠದಲ್ಲಿ ಗ್ರಾಮದ ‘ಶಿವಕುಮಾರಸ್ವಾಮಿ’ ಹಾಗೂ ‘ಮಮತಾ’ ನೂತನ ವಧು-ವರರ ಕಲ್ಯಾಣ ಮಹೋತ್ಸವ ಬಸವತತ್ವದ ಅಡಿಯಲ್ಲಿ ಅತ್ಯಂತ ಸರಳವಾಗಿ ನಡೆಯಿತು.

ಕಲ್ಯಾಣೋತ್ಸವದ ಕಾರ್ಯಕ್ರಮದಲ್ಲಿ ಮರಿಯಾಲ ಮಠದ ಪೂಜ್ಯ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳು, ಚಾಮರಾಜನಗರ ವಿರಕ್ತ ಮಠದ ಚನ್ನಬಸವ ಸ್ವಾಮಿಗಳು, ಮೂಡುಗೂರು ಮಠದ ಶ್ರೀ ಉದ್ಯಾನಸ್ವಾಮಿಗಳು, ಹಣಕೊಳ ಮಠದ ಶ್ರೀ ಚಿದ್ಗನ ಶಿವಾಚಾರ್ಯ ಸ್ವಾಮಿಗಳು, ಮೇಲಾಜಿಪುರ ಬಸವಾನುಭವ ಮಂಟಪದ ಶಿವಬಸವ ಸ್ವಾಮಿಗಳು, ಮತ್ತಿತರ ಹರಗುರು ಚರಮೂರ್ತಿಗಳ ದಿವ್ಯ ಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮರಿಯಾಲದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು ಅನುಭಾವ ನುಡಿಗಳನ್ನಾಡುತ್ತಾ, ವಚನ ಮಾಂಗಲ್ಯದಲ್ಲಿಆಡಂಬರಕ್ಕಿಂತ ಆದರ್ಶ ಹೆಚ್ಚಿರುತ್ತೆ. ಎಲ್ಲರಿಗೂ ಆದರ್ಶದ ಬಾಳು ಮುಖ್ಯ. ಈ ಕಲ್ಯಾಣ ಮಹೋತ್ಸವವು ಶರಣ ಪರಂಪರೆಯಂತೆ ವಚನ ಮಾಂಗಲ್ಯವಾಗಿದೆ. ವಧು-ವರರು ಪರಸ್ಪರ ವಿಶ್ವಾಸ, ತ್ಯಾಗ, ಸೇವೆ, ಸಮರಸತೆ, ಕಾಯಕ, ದಾಸೋಹ ತತ್ವಗಳನ್ನು ಪಾಲಿಸಬೇಕು. ನೈತಿಕ ಮತ್ತು ಸಂತೃಪ್ತಿಯ ಜೀವನ ರೂಪಿಸುವ ಪವಿತ್ರ ಬಂಧವೇ ಈ ವಚನ ಕಲ್ಯಾಣ ಎಂದರು. ಕಾರ್ಯಕ್ರಮವನ್ನು ಶಿವಬಸವಸ್ವಾಮಿಗಳು ಹಾಗೂ ಕಾಳನಹುಂಡಿ ಕುಮಾರ ಸ್ವಾಮಿಗಳು ನೆರವೇರಿಸಿಕೊಟ್ಟರು.


ಮೊದಲಿಗೆ ಗುರುಗಳ ಪಾದಪೂಜೆ, ಸಟಸ್ಥಲ ಧ್ವಜಾರೋಹಣ, ಲಿಂಗಪೂಜೆ ಮಾಡಿ, ರುದ್ರಾಕ್ಷಿ ಕಂಕಣ ಕಟ್ಟಿ ನಂತರ ಮಾಂಗಲ್ಯ ಧಾರಣೆ ಮಾಡಲಾಯಿತು.


ಭಜನಾ ಸಂಘದವರು ಬಸವಾದಿ ಶರಣರ ವಚನಗಳನ್ನು ಅತ್ಯಂತ ಭಕ್ತಿಪೂರ್ವಕವಾಗಿ ಹಾಡಿದರು. ಎರಡೂ ಕುಟುಂಬಗಳ ಬಂಧುಗಳು, ಗ್ರಾಮಸ್ಥರು, ಬಸವಭಕ್ತರು, ಬಸವ ಸಂಘಟನೆಗಳವರು ಉಪಸ್ಥಿತರಿದ್ದು, ನೂತನ ದಂಪತಿಗೆ ಶುಭಕೋರಿದರು. ಅರ್ಥಪೂರ್ಣ, ಸರಳ ಕಲ್ಯಾಣ ಉತ್ಸವ ಇದಾಗಿತ್ತು.

ಉತ್ತಮ ಕಾರ್ಯಕ್ರಮ. ಈ ರೀತಿಯ ಕಾರ್ಯಕ್ರಮವನ್ನ ಪ್ರಸ ರ ಮಾಡುತ್ತಿರುವ ಬಸವ ಮೀಡಿಯಾದವರಿಗೆ ಅನಂತ ಧನ್ಯವಾದ
ROLE MODEL FOR UPCOMING GENERATION