ನಾನು ಲಿಂಗಾಯತ, ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸ್ತೀನಿ: ಎಂ.ಬಿ ಪಾಟೀಲ್‌

ಬಸವ ಮೀಡಿಯಾ
ಬಸವ ಮೀಡಿಯಾ

‘ವೀರಶೈವರು ಲಿಂಗಯತದ ಒಂದು ಭಾಗ. ಆದರೆ ವೀರಶೈವರ ಆಚರಣೆಗಳು ಬೇರೆ ಲಿಂಗಾಯತರ ಆಚರಣೆಗಳು ಬೇರೆ.’

ಬೆಂಗಳೂರು

ನಾನು ಬಸವ ಧರ್ಮದ ಪರ ಇರುವವನು, ಧರ್ಮದ ಕಾಲಂ ನಲ್ಲಿ ಲಿಂಗಾಯತ ಧರ್ಮ ಅಂತನೇ ಬರೆಸ್ತೀನಿ ಎಂದು ಸಚಿವ ಎಂ.ಬಿ ಪಾಟೀಲ್‌ ಶನಿವಾರ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾವು ಲಿಂಗಾಯತರು. ನಾನು ಯಾವತ್ತೂ ಕೂಡ differ ಆಗಿಲ್ಲ (ಬೇರೆ ಕರೆದುಕೊಂಡಿಲ್ಲ), ಆಗುವುದೂ ಇಲ್ಲ, ಎಂದರು.

“ವೀರಶೈವರು ಲಿಂಗಾಯತದ ಒಂದು ಭಾಗ. ನಾವು ಹೇಗೆ ಬಸವ ಧರ್ಮ ಸ್ವೀಕಾರ ಮಾಡಿದ್ದೇವೆ ಅವರೂ ಸ್ವೀಕಾರ ಮಾಡಿದ್ದಾರೆ. ಆದರೆ ಲಿಂಗಾಯತರು ವೀರಶೈವರ ಮಧ್ಯ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ವೀರಶೈವರ ಆಚರಣೆಗಳು ಬೇರೆ ಲಿಂಗಾಯತರ ಆಚರಣೆಗಳು ಬೇರೆ. ಬಸವಣ್ಣ ಹೇಳಿದ್ದು ಬೇರೆ, ಇವರು ಹೇಳೋದು ಬೇರೆ… ಬ್ರಾಹ್ಮಣರಲ್ಲೂ ನೂರೆಂಟು ಭಿನ್ನಾಭಿಪ್ರಾಯಗಳಿವೆ,” ಎಂದು ಹೇಳಿದರು.

“2017-18ರಲ್ಲಿ ಸ್ವತಂತ್ರ ಧರ್ಮದ ಹೋರಾಟ ನಡೆದಾಗ ಲಿಂಗಾಯತರ ಮತ್ತು ವೀರಶೈವರ ಬಗ್ಗೆ ಜನರಿಗೆ ಹೆಚ್ಚು ತಿಳಿದಿರಲಿಲ್ಲ. ಈಗ ಜನರಿಗೆ ಅರ್ಥವಾಗುತ್ತಿದೆ.

ಮೈಸೂರಿನ 1871 ಸೆನ್ಸಸ್ ಲಿಂಗಾಯತರು ಹಿಂದೂ ಚಾತುರ್ವರ್ಣದ ಭಾಗವಾಗಿರಲಿಲ್ಲ ಎಂದು ಹೇಳಿದೆ. ಮದ್ರಾಸ್ ಸೆನ್ಸಸ್ ನಲ್ಲಿ ಶೈವರು, ವೈಷ್ಣವರು ಮತ್ತು ಲಿಂಗಾಯತರು ಎಂದು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗಿದೆ. ಸಿಖ್, ಜೈನ, ಬೌದ್ಧರಂತೆ ಲಿಂಗಾಯತರೂ ಪ್ರತ್ಯೇಕ ಧರ್ಮೀಯರು. ಸ್ವಾತಂತ್ರ್ಯ ನಂತರ ಇಂಡಿಕ್‌ ರಿಲೀಜಿಯನ್ಸ್ ಗಳಿಗೆ ಮಾನ್ಯತೆ ಸಿಕ್ಕಿದೆ. ಜೈನರಿಗೆ ಯುಪಿಎ ಸರ್ಕಾರದ ಅವಧಿಯಲ್ಲೇ ಮಾನ್ಯತೆ ಸಿಕ್ಕಿದೆ ಎಂದು ವಿವರಿಸಿದರು.

ಪ್ರತಾಪ ಸಿಂಹ

ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಅವರ ಮೇಲೆ ಬಂದ ಪ್ರಶ್ನೆಯನ್ನು ಉತ್ತರಿಸುತ್ತಾ, ಪ್ರತಾಪ ಸಿಂಹ ಅವರದು ನೋಡಿಕೊಳ್ಳಲಿ, ನಮ್ಮದರಲ್ಲಿ ಯಾಕೆ ತಲೆ ಹಾಕ್ತಾರೆ, ಎಂದು ಕೇಳಿದರು.

ಪ್ರತ್ಯೇಕ ಧರ್ಮ ಕೇಳುತ್ತಿರುವ ಲಿಂಗಾಯತರ ಸ್ವಾಮಿಗಳ ದೇವರು ಯಾರು ಅಂತ ಪ್ರತಾಪ ಸಿಂಹ ಪ್ರಶ್ನಿಸಿದ್ದು ದೊಡ್ಡ ವಿವಾದವಾಗಿದೆ.

ಆ ಪ್ರಶ್ನೆಗೆ ಉತ್ತರಿಸುತ್ತಾ ನಮಗೆ ಬಸವವಣ್ಣನವರು ತೋರಿಸಿದಂತೆ ಇಷ್ಟ ಲಿಂಗವೇ ದೇವರು, ದೇಹವೇ ದೇಗುಲ. ದೇವಸ್ಥಾನಕ್ಕೆ ಹೋಗೋದಿಕ್ಕೆ ಜನರಿಗೆ ಅವಕಾಶವಿರಲಿಲ್ಲ. ಅದಕ್ಕೆ ಬಸವಣ್ಣ ಪ್ರತ್ಯೇಕ ಧರ್ಮ ಸ್ಥಾಪನೆ ಮಾಡಿದರು. ಪ್ರತಾಪ ಸಿಂಹರಿಗೆ ಇಷ್ಟೂ ಗೊತ್ತಿಲ್ಲ ಅಂದರೆ ಹೇಗೆ, ಎಂದು ಎಂ.ಬಿ ಪಾಟೀಲ್‌ ಕೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BvguxN7Z0AG9g7Il7l5Lzh

Share This Article
7 Comments
  • ಅದ್ಭುತವಾಗಿ ಮತ್ತು ಸ್ಪಷ್ಟ ನಿಲುವನ್ನು ಹೊಂದಿದ ತಮ್ಮಂತ ಜನ ನಾಯಕರಿಗೆ ಅಭಿನಂದನೆಗಳು ಧನ್ಯವಾದ ಈ ನಿಲುವು ಒಬ್ಬ ನಿಜ ಲಿಂಗಾಯತ ನಿಲುವಾಗಿದೆ

  • ನಮ್ಮ ಹೆಮ್ಮೆಯ ಲಿಂಗಾಯತ ಧರ್ಮದ ನಾಯಕರಾದ , ಹಾಗೂ ಹಾಲಿ ಕರ್ನಾಟಕ ರಾಜ್ಯ ಸರ್ಕಾರದ ಹಿರಿಯ ಮಂತ್ರಿಗಳಾದ ಮಾನ್ಯ ಶ್ರೀ ಶರಣರಾದ ಎಂ ಬಿ ಪಾಟೀಲ್ ಅವರು,ನಾನು ಲಿಂಗಾಯತ ಧರ್ಮೀಯರಾಗಿದ್ದು ,ಈಗಿನ ಸಮೀಕ್ಷೆಯಲ್ಲಿ ಧರ್ಮದ ಇತರೆ ಕಾಲಂ ನಲ್ಲಿ ಲಿಂಗಾಯತ ಎಂದು ಬರೆಸುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದು ,ತುಂಬಾ ಸತ್ಯ ವಾಸ್ತವ ಸಂಗತಿ ತಿಳಿಸಿದ್ದಾರೆ, ಬಸವಾದಿ ಶರಣರ ವಚನ ತತ್ವ ಸಿದ್ಧಾಂತ ಕೆ ಬದ್ಧವಾಗಿದೆ ,ಮತ್ತು ಈಗಿನ ಸಮೀಕ್ಷೆಯಲ್ಲಿ ನಮ್ಮ ಲಿಂಗಾಯತ ಜನರಲ್ಲಿ ಧರ್ಮದ ಹೆಸರು ಬರೆಸಲಿಕೆ ವೀರಶೈವ ಮಹಾಸಭಾದವರ ಹೇಳಿಕೆ ವೀರಶೈವ ಲಿಂಗಾಯತ ಎಂದು ಬರೆಸಲು ಗೊಂದಲದ ಹೇಳಿಕೆ ಕೊಟ್ಟಿದ್ದರಿಂದ , ನಮ್ಮ ಜನರು ಗೊಂಡಲದಲ್ಲಿದ್ದೂರು ,ಈಗ ,ಮಾನ್ಯ ಶ್ರೀ ಎಂ ಬೀ ಪಾಟೀಲ್ ಅವರ ಸ್ಪಷ್ಟ ಹೇಳಿಕೆ ಯಿಂದ ಜನರ ಗೊಂದಲ ನಿವಾರಣೆ ಯಾಗಿವೆ , ಕಾರಣ ಅವರಿಗೆ ಅನಂತ ಧನ್ಯವಾದಗಳು , ಶರಣು ಶರಣಾರ್ಥಿ, ಮಲ್ಲಿಕಾರ್ಜುನ ನಾಗಶೆಟ್ಟಿ ಅಧ್ಯಕ್ಷರು ರಾಷ್ಟೀಯ ಬಸವ ದಳ,.ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕ ಘಟಕ .ಮೊಬೈಲ್ ನಂಬರ್ 9449585572

  • ವೀರಶೈವ ಹಾಗು ಲಿಂಗಾಯತ ನಡುವೆ ಇರುವ ಸೈದ್ಧಾಂತಿಕ್ ಭಿನ್ನ ಆಚರಣೆಗಳು ಎನಎಂಬುದನ್ನು m. ಬಿ ಪಾಟೀಲರು ತಿಳಿಸಬೇಕು

  • You are on the right path sir, Lord basava will bless you by all means, other lingayat politicians are playing a game for getting vote. Veerashaiva is different from lingayat, if they want to join lingayat always welcome for them. Jai m b patil.

  • ಎಂ ಬಿ. ಪಾಟೀಲ್ ಸರ್ ಅವರು ನುರಿತ ಅನುಭವಿ ರಾಜಕಾರಣಿ ಒಳ್ಳೆಯ ಜನಪರ ಸೇವೆಗೈದ ಜನಾನುರಾಗಿ
    ಲಿಂಗಾಯತ ಧರ್ಮದ ಬಗ್ಗೆ ತಾತ್ತ್ವಿಕ ಸ್ಪಷ್ಟನೆ ಹೊಂದಿದವರು ತಮ್ಮ ಅಭಿಪ್ರಾಯವನ್ನು ಬಿಚ್ಚು ಮನಸ್ಸಿನಿಂದ ನನ್ನ ಧರ್ಮ ಲಿಂಗಾಯತ ಆದುದರಿಂದ
    ನಾನು ಜಾತಿ ಜನಗಣತಿಯ ಧರ್ಮದ ಕಾಲಂನಲ್ಲಿ “ಲಿಂಗಾಯತ ಧರ್ಮ” ಎಂದು ಬರೆಯುತ್ತೆನೆ.
    ಲಿಂಗಾಯತರು ಧರ್ಮದ ಕಾಲಂನಲ್ಲಿ
    ” ಲಿಂಗಾಯತ ಧರ್ಮ” ಎಂದು ಬರೆಸಲು ಹೇಳುತ್ತೆನೆ
    ಎನ್ನುವ ತಮ್ಮ ಮಾತು ಸಮಾಜಕ್ಕೆ ಸ್ಪೂರ್ತಿಯಾಗಿದೆ.
    ಈ ಹೇಳಿಕೆ ಉಳಿದ ಲಿಂಗಾಯತ ರಾಜಕಾರಣಿಗಳಿಗೆ
    ಮಾದರಿಯಾಗಲಿ. ಎಂ ಬಿ. ಪಾಟೀಲರು ರಾಜಕೀಯ ಧುರೀಣರಾಗಿ ಧರ್ಮದ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿದ್ದಕ್ಕಾಗಿ ತುಂಬು ಹೃದಯದ ಅಭಿನಂದನೆಗಳು.

  • ಎಂ. ಬಿ. ಪಾಟೀಲರ ಸ್ಪಷ್ಟತೆ ಅದು ಜನರ ಧ್ವನಿಯಾಗಿದೆ, ಅವರಿಗೆ ಸೈಧ್ದಾಂತಿಕ ಭದ್ದತೆಯಿದೆ, ಸೈದ್ದಾಂತಿಕ ಭದ್ದತೆಯಿರುವ ಸಿದ್ದರಾಮಯ್ಯನವರು ಹೇಗೆ ಜನಪ್ರೀಯತೆ ಹೊಂದಿ ಎರಡು ಬಾರಿ ಮುಖ್ಯಮಂತ್ರಿಯಾಗಿದಾರೋ, ಅದೇ ರೀತಿಯಲ್ಲಿ ಎಂ.ಬಿ. ಪಾಟೀಲರ ಸ್ಪಷ್ಟ ಸೈದ್ದಾಂತಿಕ ನಿಲುವು ಅವರನ್ನು ಉನ್ನತ ಸ್ಥಾನಕ್ಕೇರಿಸಲಿದೆ ಇದರ ಬಗ್ಗೆ ಅನುಮಾನವೇ ಬೇಡ. ಇನ್ನೊಂದು ಉದಾಹರಣೆ ತೆಗೆದುಕೊಳ್ಳಿ, ರಾಜಕಾರಣದಲ್ಲಿ ಸೈದ್ದಾಂತಕ‌ಗೊಂದಲದಿಂದ ವಿಜಯ ಸಂಕೇಶ್ವರ ಹೇಗೆ ಮೂಲೆಗುಂಪಾದರು ಎನ್ನುವುದಕ್ಕೆ ಅವರ ಸೈಧ್ದಾಂತಿಕ ಧ್ವಂಧವೇ ಕಾರಣವಾಯಿತು, ಕೈಯಲ್ಲಿ ವಿಜಯವಾಣಿ ಎಂಬ ಪತ್ರಿಕೆಯನ್ನಿಟ್ಟುಕೊಂಡು ಅತ್ಯಧಿಕ ಸಂಖೆಯಲ್ಲಿ ಲಿಂಗಾಯತ ಓದುಗರನ್ನು ಹೊಂದಿಯೂ ಲಿಂಗಾಯತ ಅಸ್ಮಿತೆ, ಆಚರಣೆ ವಿರೋಧಿಸುತ್ತ, ತಮ್ಮ ಅಸ್ಮಿತೆ ಕಳೆದುಕೊಂಡು ವೀರಶೈವರ ಓಲೈಕೆ ಮಾಡುತ್ತ ತಮ್ಮ ಅಸ್ತಿತ್ವ ಕಳೆದುಕೊಂಡರು , ಹಾಗಾಗಿ ಸೈದ್ದಾಂತಿಕ ಸ್ಪಷ್ಟತೆ ಇಂದು ಬಹು ಮುಖ್ಯವಾಗಿದೆ

Leave a Reply

Your email address will not be published. Required fields are marked *