ಕಲಬುರ್ಗಿ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ವತಿಯಿಂದ ಆಯೋಜಿತವಾಗಿರುವ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದಲ್ಲಿ ರವಿವಾರ ಎರಡು ಪುಸ್ತಕಗಳು ಬಿಡುಗಡೆಯಾದವು.
ಡಾ.ಮೀನಾಕ್ಷಿ ಬಾಳಿ ರಚಿಸಿದ ‘ವಚನ ನಿಜದರ್ಶನ’ ಕೃತಿಯನ್ನು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಶಾಸಕ ಬಿ.ಆರ್. ಪಾಟೀಲ ಲೋಕಾರ್ಪಣೆ ಮಾಡಿದರು. ಜಡದಲ್ಲಿ ಜಂಗಮ ಕೃತಿಯನ್ನು ಪರಿಷತ್ ಕೇಂದ್ರ ಅಧ್ಯಕ್ಷ ಡಾ. ಸಿ. ಸೋಮಶೇಖರ ಬಿಡುಗಡೆ ಮಾಡಿದರು.
ಈ ಮುಂಚೆ ಬಸವ ಮೀಡಿಯಾದ ಜೊತೆ ಮಾತನಾಡುತ್ತ ಸಂಘ ಪರಿವಾರ ಹೊರತಂದಿರುವ “ವಚನ ದರ್ಶನ” ಪುಸ್ತಕಕ್ಕೆ ಒಂದು ಉತ್ತರ ಕೊಡಲು, ‘ವಚನ ನಿಜ ದರ್ಶನ’ ಬರೆಯಲಾಗಿದೆ ಎಂದು ಮೀನಾಕ್ಷಿ ಬಾಳಿ ಹೇಳಿದರು.
‘ವಚನ ದರ್ಶನ’ ಶರಣರ ತತ್ವ ತಿರುಚುವ, ಹುಸಿ ಅಭಿಮಾನ ತೋರುವ, ಮುಗ್ದ ಭಕ್ತರನ್ನು ದಾರಿ ತಪ್ಪಿಸುವ ಪ್ರಯತ್ನ. ಶರಣರ ವೈಚಾರಿಕತೆ, ಸಾಮಾಜಿಕ ಕಳಕಳಿ, ಕ್ರಾಂತಿಕಾರಕ ಚಳುವಳಿಯನ್ನು ಅದು ನಿರಾಕರಿಸುತ್ತದೆ.
ಅದರ ಪೊಳ್ಳುತನ, ವಿರೋಧಾಭಾಸವನ್ನು ಬೆಳಕಿಗೆ ಹಿಡಿಯಲು ‘ವಚನ ನಿಜ ದರ್ಶನ’ ಬರುತ್ತಿದೆ ಎಂದರು.
‘ವಚನ ನಿಜ ದರ್ಶನ’ ಎಲ್ಲರೂ ಬೇಗನೆ ಓದಿ ಅರ್ಥ ಮಾಡಿಕೊಳ್ಳಬಹುದಾದ ಸರಳ ಭಾಷೆಯಲ್ಲಿರುವ 60 ಪುಟಗಳ ಪುಟ್ಟ ಪುಸ್ತಕ. ಮೊದಲು ಬರೆದದ್ದು ಇನ್ನೂ ದೊಡ್ಡ ಪುಸ್ತಕವಾಗಿತ್ತು.
ಎಲ್ಲರೂ ಓದಲು ಸುಲಭವಾಗಲಿ ಎಂದು 60 ಪುಟಗಳಿಗೆ ಇಳಿಸಿದೆ. ಸಂಘ ಪರಿವಾರದ ‘ವಚನ ದರ್ಶನ’ದ ಸಮಸ್ಯೆ, ಅಜೆಂಡಾ, ವಿರೋಧಾಭಾಸಗಳ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಮುಖ್ಯ ಉದ್ದೇಶ ಎಂದರು ಮೀನಾಕ್ಷಿ ಬಾಳಿ.
‘ವಚನ ದರ್ಶನ’ ಒಂದು ಸಾಮಾನ್ಯ ಪುಸ್ತಕ, ಆದರೆ ಅದನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೇರೆ ಬೇರೆ ಜಿಲ್ಲೆಗಳಲ್ಲಿ ಸಂಘ ಪರಿವಾರದವರು ಬಿಡುಗಡೆ ಮಾಡಿದ್ದಾರೆ. ನಮ್ಮಲ್ಲಿ ಅಷ್ಟು ಹಣವಿಲ್ಲದಿದ್ದರೂ, ಅಷ್ಟೇ ಪರಿಣಾಮಕಾರಿಯಾಗಿ ಬಿಡುಗಡೆ ಮಾಡಲಾಗುವುದು.
ಬೇರೆ ಬೇರೆ ಜಿಲ್ಲೆಗಳಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಪುಸ್ತಕ ಬಿಡುಗಡೆ ಮಾಡಲು ಕೈಜೋಡಿಸುತ್ತಿವೆ. ಎಲ್ಲ ಕಡೆ ಹೋಗಿ ನಾನೆ ಮಾತನಾಡುತ್ತೇನೆ, ಬೇರೆಯವರೂ ಮಾತನಾಡುತ್ತಾರೆ. ವಿದ್ಯಾರ್ಥಿಗಳನ್ನು, ಮಕ್ಕಳನ್ನು ಮುಟ್ಟಲು ಬೇರೆ ಯೋಜನೆ ಸಿದ್ಧವಾಗುತ್ತಿದೆ. ಒಂದು ಕಾರ್ಯಪಡೆ ಪುಸ್ತಕದ ಪ್ರಚಾರ ಮತ್ತು ಬಿಡುಗಡೆ ಕಾರ್ಯವನ್ನು ಆಯೋಜಿಸುತ್ತಿದೆ. ಅವರಿಗಿಂತ ಹೆಚ್ಚಿನ ಶ್ರಮ ಹಾಕಿ ಪುಸ್ತಕವನ್ನು ಜನರಿಗೆ ಮುಟ್ಟಿಸುತ್ತೇವೆ, ಎನ್ನುತಾರೆ.
ಕ್ರಿಯಾ ಪ್ರಕಾಶನ ಹೊರ ತಂದಿರುವ ಪುಸ್ತಕಕ್ಕೆ 70 ರುಪಾಯಿ ಬೆಲೆ. ಹೆಚ್ಚಿನ ಪ್ರತಿಗಳನ್ನು ತೆಗೆದುಕೊಂಡರೆ 30% ರಿಯಾಯತಿ.
ಪುಸ್ತಕಕ್ಕೆ ಬಿಡುಗಡೆಗೆ ಮುಂಚೆ ಬೇಡಿಕೆ ಬಂದಿದೆ ಎಂದರು. ನಾವು ಕಲಬುರ್ಗಿಯಲ್ಲಿ ಪ್ರತಿಭಟನೆ ಮಾಡಿದ ಮೇಲೆ ರಾಜ್ಯ ಪೂರ್ತಿ ಪ್ರತಿಭಟನೆ ಆರಂಭವಾಯಿತು. ಎಲ್ಲೆಲ್ಲಿ ಪ್ರತಿಭಟನೆ ಅಯಿತೊ ಅಲ್ಲೆಲ್ಲ ಬೇಡಿಕೆ ಬರುತ್ತಿದೆ ಎಂದು ಮೀನಾಕ್ಷಿ ಬಾಳಿ ಹೇಳಿದರು.
ಡಾ. ಮೀನಾಕ್ಷಿ ಬಾಳೆಯವರ ಈ ಧರ್ಮ ಸೇವೆ ಚಿರಸ್ಮರಣೀಯ. ಸನಾತನ ವೈದಿಕರು ಇದುವರೆವಿಗು ವಚನಸಾಹಿತ್ಯ ನಾಶಮಾಡಿ,ತಿರುಚಿ, ವಿರೂಪಗೊಳಿಸಿದರೂ ವಚನಸಾಹಿತ್ಯ ಇನ್ನೂ ಉಳಿದಿರುವುದಲ್ಲದೆ ಮುಂಬರುವ ದಿನಗಳಲ್ಲಿ ಅದು ವಿಶ್ವಪ್ರಖ್ಯಾತವಾಗುವ ಹೆದರಿಕೆ ಇಂದ ಹೊಸನಾಟಕ ಶುರುಮಾಡಿದ ಸನಾತನಿ ವೈಧಿಕರಿಗೆ ಶರಣ ಪರಂಪರೆಯ ಒಂದು ಹೆಣ್ಣು ಮಗಳು ಅಧಾರ ಸಹಿತ ಉತ್ತರ ಕೊಟ್ಟಿರುವುದು ಅಂದಿನ ವಚನ ಚಳುವಳಿಯ ಸಾರ್ಥಕತೆ ಇಂದು ತೋರಿಸಿದೆ.
Correct.
ಶರಣೆ ಮೀನಾಕ್ಷಿ ಬಾಳಿಯಂಥಾ ಹೋರಾಟಗಾರ್ತಿ ತಾಲೂಕಿಗೆ ಒಬ್ಬೊಬ್ಬರು ಇದ್ದರೂ ಸಾಕು ವಚನಸಾಹಿತ್ಯ ಇದ್ದಹಾಗೆ ಪ್ರಚಾರ ಆಗುತ್ತದೆ. ವಚನಸಾಹಿತ್ಯಕ್ಕೆ ಚ್ಯುತಿ ಬಾರಲು ಈ ತಾಯಿ ಬಿಡುವುದಿಲ್ಲ
ಶರಣು ಶರಣಾರ್ಥಿ
ಮೀನಾಕ್ಷಿ ಬಾಳಿಯವರಿಂದ ಅದ್ಭುತವಾದ ಸಾಂದರ್ಭಿಕ ಕೆಲಸ. ಧನ್ಯವಾದಗಳು.