ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ಇಂದು ಅಭಿಯಾನ
ಸಮಾವೇಶ ಮಂಗಲ
ಅಧ್ಯಕ್ಷತೆಯ ನುಡಿ ವಿ.ಎಸ್. ಪಾಟೀಲ ಅವರಿಂದ.
ಅಭಿಯಾನದ ಯಶಸ್ವಿಗೆ ಶ್ರಮಿಸಿದ ಸಂಘಟನೆಗಳು, ಸಮಾಜದ ಮುಖಂಡರುಗಳಿಗೆ ಸತ್ಕಾರ ನಡೆಯಿತು.
ಅಭಿಯಾನ ಯಶಸ್ವಿಗೊಳಿಸಿದ ಅಭಿಯಾನ ಸಮಿತಿ ಗೌರವಾಧ್ಯಕ್ಷೆ ಬಸವೇಶ್ವರಿ ಮಾತಾಜಿ ಅವರನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸನ್ಮಾನಿಸಲಾಯಿತು.
ಜಯಕಲ್ಯಾಣ ಗೀತೆಯೊಂದಿಗೆ ಸಮಾವೇಶ ಮಂಗಲಗೊಂಡಿತು.
ಆಶೀರ್ವಚನ
ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಡಾ. ಗಂಗಾ ಮಾತಾಜಿ ಅವರಿಂದ ಆಶೀರ್ವಚನ.
‘ಶರಣರ ಸಮಸಮಾಜ’
ಚಿಂತಕ ಅಶೋಕ ಬರಗುಂಡಿ ಅವರಿಂದ ಅನುಭಾವ.

‘ಶರಣರ ವಚನಗಳಲ್ಲಿ ಸೂತಕದ ವಿವರಣೆ’
ಡಾ. ಗಂಗಾಂಬಿಕ ಅಕ್ಕ ಅವರಿಂದ ಅನುಭಾವ.

ಸಭಾಂಗಣದ ಹೊರಗೂ ಜನ
ಸಭಾಂಗಣದ ಒಳಗೆ ಆಸನಗಳು ತುಂಬಿ ಹೊರಗೂ ಜನ ನೆರೆದಿದ್ದಾರೆ.
ಸಮಾವೇಶದ ಮುಖ್ಯಾಂಶಗಳು
ಎಲ್.ಟಿ. ಪಾಟೀಲ ಅವರು ಸರ್ವರನ್ನೂ ಸ್ವಾಗತಿಸಿದರು. ಶಾಸಕ ಶಿವರಾಮ ಹೆಬ್ಬಾರ ಅವರು ಮಾತನಾಡಿದರು. ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಅವರಿಂದ ಆಶಯ ನುಡಿ.



ಸಂಜೆಯ ಸಮಾವೇಶ ಆರಂಭ
ಬಸವ ಪುತ್ಥಳಿಗೆ ಪುಷ್ಪಾರ್ಪಣೆ. ಶಿವಸಂಚಾರ ಕಲಾವಿದರಿಂದ ವಚನ ಪ್ರಾರ್ಥನೆ




ಮುಂಡಗೋಡ ಪಟ್ಟಣದಲ್ಲಿ ಬೃಹತ್ ಬಸವ ಯಾತ್ರೆ

ಮೆರವಣಿಗೆಯ ಮೆರಗು ಹೆಚ್ಚಿಸಿದ ಲಂಬಾಣಿಗರು

ಸಂತೋಷ ಅಂಗಡಿ, ಶೇಖರ ಇಂಗಳದಾಳ ಧನ್ಯವಾದ
ಫೋಟೋ, ವಿಡಿಯೋ ಮಾಹಿತಿಗೆ ನಮ್ಮ ಧನ್ಯವಾದ
ಅಭಿಯಾನ ಮೆರವಣಿಗೆ – ಫೋಟೋ, ವಿಡಿಯೋ








ಸಾಮರಸ್ಯ ನಡಿಗೆ
ಪಿಡಬ್ಲ್ಯುಡಿ ಐಬಿಯಿಂದ ಬಸವನ ಬೀದಿ ಮೂಲಕ ಸಂತೆ ಮಾರ್ಕೆಟ್ ವರೆಗೆ ಮೆರವಣಿಗೆ.



ದೃಶ್ಯಗಳಲ್ಲಿ ಸಂವಾದ






ಸಂವಾದ ಮುಕ್ತಾಯ
ಕಾರ್ಯಕ್ರಮ ಕಲ್ಯಾಣ ಗೀತೆಯೊಂದಿಗೆ ಮಂಗಲಗೊಂಡಿತು.
ಪ್ರಬಂಧ ಸ್ಪರ್ಧೆ ಬಹುಮಾನ ವಿತರಣೆ
ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಶ್ನೆ: ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ವಚನ ಸಾಹಿತ್ಯ ನೆರವಾಗಬಹುದೆ?
ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುವ ಅನೇಕ ವಚನಗಳಿವೆ. ಅವುಗಳನ್ನು ಮಕ್ಕಳು ಓದಬೇಕು. ಅಂತಹ 500 ವಚನಗಳಿರುವ ಬಸವೇಶ್ವರ ವಚನಾಮೃತ ಪುಸ್ತಕವನ್ನು ಪ್ರಕಟಿಸಿದ್ದೇವೆ. ಅದು ಕೇವಲ 10 ರುಪಾಯಿಗೆ ಲಭ್ಯವಿದೆ. ಅದರ ಪ್ರಯೋಜನ ಪಡೆದುಕೊಳ್ಳಿ.
(ಉತ್ತರ ಶೇಗುಣಸಿ ಶ್ರೀ)
ಪ್ರಶ್ನೆ: ಪ್ರಾರ್ಥನಾ, ಧ್ವಜ ಗೀತೆ ಒಂದೇ ರೀತಿ ಯಾಕೆ ಹಾಡುತಿಲ್ಲ?
ಮೊದಲು ಮಠಗಳಲ್ಲಿ ವೇದ, ಉಪನಿಷತ್ತುಗಳನ್ನು ಮಠದಲ್ಲಿ ಹಾಡಲಾಗುತ್ತಿತ್ತು. ಈಗ ಎಲ್ಲ ಕಡೆ ವಚನಗಳನ್ನು ಪಠಿಸಲಾಗುತ್ತಿದೆ.
ಅಭಿಯಾನದ ನಂತರ ಎಲ್ಲರೂ ಸೇರಿ ಏಕರೂಪ ಪ್ರಾರ್ಥನೆ ತರ್ತೀವಿ.
(ಉತ್ತರ ಭಾಲ್ಕಿ ಶ್ರೀ )
ಪ್ರಶ್ನೆ: ಲಿಂಗಾಯತ ಜಾತಿಯೇ, ಧರ್ಮವೇ?
ಜಾತಿಯೆಂದರೆ ಕತ್ತಲೆ, ಧರ್ಮವೆಂದರೆ ಜ್ಯೋತಿ. ಲಿಂಗಾಯತ ಜಾತಿಯಲ್ಲ, ಬಸವಣ್ಣನವರು ಸ್ಥಾಪಿಸಿದ ಪರಿಪೂರ್ಣ ಧರ್ಮ.
(ಉತ್ತರ ಭಾಲ್ಕಿ ಶ್ರೀ)
ಪ್ರಶ್ನೆಗಳು: ಅಕ್ಕ ಕಲ್ಯಾಣ ಪ್ರವೇಶಿಸಿದ ರೀತಿ, ಲಿಂಗಾಯತ ಪಂಗಡಗಳು ಮೀಸಲಾತಿಗೆ ಹೊರಡುವುದು ಸರಿಯೇ, ಬಸವಣ್ಣನವರಿಗಿಂತ ಮುಂಚೆ ವಿಭೂತಿ ಧರಿಸುತ್ತಿದ್ದರೆ? ಬಸವಣ್ಣನವರು ಅಸಮಾನತೆ ಹೋಗಲಾಡಿಸಲು ಸಾಹಿತ್ಯವನ್ನು ಯಾಕೆ ಬಳಸಿಕೊಂಡರು?
ಭಾಲ್ಕಿ ಶ್ರೀಗಳು, ಗಂಗಾಂಬಿಕೆ ಅಕ್ಕ, ಗದಗ ಶ್ರೀಗಳು, ಅಥಣಿ ಶ್ರೀಗಳು ಉತ್ತರಿಸಿದರು
ಪ್ರಶ್ನೆ: ಲಿಂಗಾಯತ, ವೀರಶೈವ ಒಂದೆಯೇ?
ಮೌಢ್ಯತೆಯನ್ನು ಬಹಿಷ್ಕರಿಸಿ, ಇಷ್ಟಲಿಂಗ ಸಂಶೋಧಿಸಿದ ಬಸವಣ್ಣನವರಿಂದ ಬಂದದ್ದು ಲಿಂಗಾಯತ ಧರ್ಮ. ವೀರಶೈವ ಶೈವದ ಶಾಖೆ. ಮೊದಲು ಎರಡೂ ಒಂದೇ ಎನ್ನುವ ಭಾವನೆಯಿತ್ತು. ಆದರೆ ಈಗ ಬೇರೆ ಬೇರೆ ಅಂತ ಅರ್ಥವಾಗಿದೆ.
(ಉತ್ತರ: ಸಾಣೇಹಳ್ಳಿ ಶ್ರೀ)
ಪ್ರಶ್ನೆ: ಜಾತಿಗೊಂದು ಪೀಠ ಬೇಕೇ?
ನಮಗೆ ಬಸವಣ್ಣನವರ ವಿಚಾರ ಅರ್ಥವಾಗಿದ್ದರೆ ಈ ಪ್ರಶ್ನೆ ಕೇಳುವ ಪ್ರಮೇಯ ಬರುತ್ತಿರಲಿಲ್ಲ. ಪೀಠದ ಸ್ವಾಮೀಜಿಗಳೂ ಲಿಂಗಾಯತ ಪರಂಪರೆಯ ಶ್ರೀಗಳೇ. ಆಯಾ ಸಮುದಾಯಕ್ಕೆ ಉಸ್ತುವಾರಿಯಷ್ಟೇ.
(ಉತ್ತರ ಗದಗ ಶ್ರೀ)
ಪ್ರಶ್ನೆ: ಬಸವಣ್ಣ ಬೇಕು, ಬಸವತತ್ವ ಬೇಡ ಅನ್ನೋ ಮನಸ್ಥಿತಿಯಿದೆ
ಬರೀ ನಾಮ ಸ್ಮರಣೆಯಿಂದ ಲಾಭವಿಲ್ಲ, ತತ್ವದ ಆಚರಣೆಯಿಂದಲೇ ತೃಪ್ತಿ. ಈ ಸಂದೇಶವನ್ನ ಜನರಿಗೆ ತಲುಪಿಸಲು ಅಭಿಯಾನ ನಡೆಯುತ್ತಿದೆ.
(ಉತ್ತರ ಭಾಲ್ಕಿ ಶ್ರೀ)
ಪ್ರಾಸ್ತಾವಿಕ ನುಡಿ, ತುಂಬಿದ ಸಭಾಂಗಣ
ಪ್ರಾಸ್ತಾವಿಕ ನುಡಿ ಶೇಗುಣಸಿ ಮಹಾಂತಪ್ರಭು ಸ್ವಾಮಿಗಳಿಂದ.
ವಿಕಾಸದ ಬದಲು ವಿಕಾರ ಹೊಂದುತ್ತಿರುವ ಮಕ್ಕಳು. ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಜನಮಾನಸಕ್ಕೆ ಮುಟ್ಟಿಸಲು ಈ ತಲುಪಿಸುವ ಅಭಿಯಾನವಿದು.



ವಚನ ಸಂವಾದ
ಪೂಜ್ಯರು, ಗಣ್ಯರು ಬಸವ ಪುತ್ಥಳಿಗೆ ಪುಷ್ಪಾರ್ಪಣೆ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ. ಮುಂಡಗೋಡ ಅಕ್ಕನ ಬಳಗದಿಂದ ವಚನ ಗಾಯನ.


ಸಂವಾದಕ್ಕೆ ವೇದಿಕೆ ಸಜ್ಜು



ಇಂದಿನ ಕಾರ್ಯಕ್ರಮ
ಸಂವಾದ
ಮುಂಜಾನೆ 11 ಗಂಟೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಮುಂಡಗೋಡ.
ಮೆರವಣಿಗೆ
ಮಧ್ಯಾಹ್ನ 3:30 ಗಂಟೆಗೆ ಪಿಡಬ್ಲ್ಯುಡಿ ಐಬಿಯಿಂದ ಅಂಬೇಡ್ಕರ್ ಓಣಿ ಮಾರ್ಗವಾಗಿ ಬಸವನ ಬೀದಿ ಮೂಲಕ ಸಂತೆ ಮಾರ್ಕೆಟ್ ವರೆಗೆ ಪಾದಯಾತ್ರೆ.
ಸಾರ್ವಜನಿಕ ಸಮಾವೇಶ
ಸಂಜೆ 6 ಗಂಟೆಗೆ ವಿವೇಕಾನಂದ ಬಯಲು ರಂಗಮಂದಿರ.
ಡಾ. ಗಂಗಾಂಬಿಕಾ ಅಕ್ಕ ಅವರಿಂದ ‘ಶರಣರಲ್ಲಿ ಸೂತಕದ ವಿವರಣೆ’ ಮತ್ತು ಅಶೋಕ ಬರಗುಂಡಿ ಅವರಿಂದ ‘ಶರಣರ ಸಮಸಮಾಜ’ ವಿಷಯವಾಗಿ ಅನುಭಾವ.
ನಾಟಕ
ರಾತ್ರಿ 8 ಗಂಟೆಗೆ ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ.
ಕಾರ್ಯಕ್ರಮದ ನಂತರ ಪ್ರಸಾದ ದಾಸೋಹ.
ಮುಂಡಗೋಡ