ಆರೋಗ್ಯ ಮತ್ತು ಸಮಯ ಯಾರು ಪಡೆದಿರುತ್ತಾರೋ, ಅವರೇ ನಿಜವಾದ ಶ್ರೀಮಂತರು. ಬರೀ ಹಣ ಮತ್ತು ಬುದ್ಧಿ ಗಳಿಸುವವರು ದೊಡ್ಡವರೆನಿಸಿಕೊಳ್ಳುವುದಿಲ್ಲ. ದೇವರು ಕೊಟ್ಟಿರುವ ಸಮಯ ಮತ್ತು ಪ್ರಕೃತಿ ಕೊಟ್ಟಿರುವ ಆರೋಗ್ಯವನ್ನು ಸದ್ಬಳಕೆ ಮಾಡಿಕೊಂಡರೆ ಮರ್ತ್ಯಲೋಕಕ್ಕೆ ಬಂದ ನಮ್ಮ ಜೀವನ ಸಾರ್ಥಕಗೊಳ್ಳುತ್ತದೆ ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಂಗಳವಾರ ಹೇಳಿದರು.
ಮುಂಡರಗಿ ಪಟ್ಟಣದ ತೋಂಟದಾರ್ಯ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಆಷಾಢ ಮಾಸದ ಅನುಭಾವ ದರ್ಶನ ಪ್ರವಚನ ಮಾಲಿಕೆ, ಶಿವಶರಣ ಹಡಪದ ಅಪ್ಪಣ್ಣ ಹಾಗೂ ಶರಣೆ ಹಡಪದ ಲಿಂಗಮ್ಮನವರ ಸ್ಮರಣೋತ್ಸವ ಹಾಗೂ 57ನೇ ತ್ರೈಮಾಸಿಕಾ ಶಿವಾನುಭವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಬೇಲೂರಿನ ಮಹಾಂತ ಸ್ವಾಮೀಜಿ, ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ ಮಾತನಾಡಿದರು.
ರೈತ ಈಶ್ವರಪ್ಪ ಹಂಚಿನಾಳ, ಮುಖ್ಯಮಂತ್ರಿ ಪದಕ ವಿಜೇತ ಆರ್.ಎಫ್.ಓ ವೀರೇಂದ್ರ ಮರಿಬಸಣ್ಣವರ, ಕೆಎಂಎಫ್ ನೂತನ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಪ್ರವಚನ ಸಮಿತಿ ಅಧ್ಯಕ್ಷ ಎಸ್.ಎಸ್.ಗಡ್ಡದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೊಟ್ರೇಶ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಕವಿತಾ ಉಳ್ಳಾಗಡ್ಡಿ, ಹೆಚ್. ವಿರುಪಾಕ್ಷಗೌಡ್ರ, ಈರಣ್ಣ ಹಡಪದ, ಹೇಮ ಗಿರೀಶ ಹಾವಿನಾಳ, ಓಂ ಪ್ರಕಾಶ ಲಿಂಗ ಶೆಟ್ಟರ, ಅಡಿವಪ್ಪ ಚಲವಾದಿ, ವೀರೇಂದ್ರ ಅಂಗಡಿ, ಶಿವಕುಮಾರ್ ಬೆಟಿಗೇರಿ, ವಿಶ್ವನಾಥ್ ಉಳ್ಳಾಗಡ್ಡಿ ಮತ್ತಿತರರು ಉಪಸ್ಥಿತರಿದ್ದರು.