ಧಾರವಾಡ
ಮುರುಘೇಂದ್ರ ಶಿವಯೋಗಿಗಳು ನಮ್ಮನ್ನು ಉದ್ಧರಿಸಲು ಭುವಿಗೆ ಇಳಿದು ಬಂದ ಮಹಾಮಹಿಮರು. ಅವರು “ಬಸವ” ಮಾರ್ಗದಲ್ಲಿಯೇ ನಡೆದು, “ಬಸವ” ಮಾರ್ಗದಲ್ಲಿಯೇ ದುಡಿದು, ಬಸವಾದರ್ಶದ ಪರಿಭಾಷೆಯಲ್ಲಿಯೇ ಸತ್ವಪೂರ್ಣ ಬದುಕು ಸವೆಸಿ ಬಸವಾದಿ ಪ್ರಮಥರಂತೆ ಬದುಕಿದರು ಎಂದು ಅಥಣಿ ಗುರುಲಿಂಗದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಶ್ರೀ ಮಧಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ಯ ಏರ್ಪಡಿಸಿದ ಶರಣ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣರ ಬದುಕು ಅತ್ಯಂತ ಸರಳ ಹಾಗೂ ದೇವ ಪಥದಿಂದ ಕೂಡಿತ್ತು. ಇದು ನಮಗೆಲ್ಲ ಮಾದರಿಯಾಗಬೇಕು. ಆಧುನಿಕ ಪ್ರಪಂಚದ ವಿಷಮ ವಾತಾವರಣದಲ್ಲಿ ಯುವಜನತೆ ಸರಳ ಬದುಕನ್ನು ಆಯ್ದುಕೊಂಡು ಶರಣತತ್ವದ ಕಡೆಗೆ ಹೆಜ್ಜೆ ಹಾಕಬೇಕಿದೆ ಅಂದಾಗ ಮಾತ್ರ ಧರ್ಮ ಸಂಸ್ಖೃತಿ ಸಂಸ್ಕಾರ ಉಳಿಸಲು ಸಾದ್ಯ ಎಂದರು.
ಮುಂಡರಗಿ ತೊಂಟದಾರ್ಯ ಮಠದ ಶ್ರೀ ನಿಜಗುಣಪ್ರಭು ತೊಂಟದಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಮತನಾಡಿ, ಆತ್ಮಕಲ್ಯಾಣ, ಲೋಕಕಲ್ಯಾಣ ಎರಡನ್ನು ಸಾಧಿಸಿ ಮರ್ತ್ಯಕ್ಕೆ ಮಹತ್ತನ್ನ ತಂದುಕೊಟ್ಟ ವಚನ ಸಾಹಿತ್ಯ ಸೀಮೆಯನ್ನು ಎತ್ತರದತ್ತ ಸಾಗುವಂತೆ ಮಾಡಿದೆ. ವಚನ ಸಾಹಿತ್ಯ ಹಾಗೂ ಶರಣರ ಚರಿತ್ರೆ, ಮಹಿಮೆಗಳು ಸಮಸ್ತ ಜನಕ್ಕೆ ದೀಪಾಂಕುರವಾಗಿವೆ. ಅವರ ಸ್ಮರಣೆ ಮಾರ್ಗದರ್ಶನ ನಮಗೆ ನಿತ್ಯ ಬದುಕಿನ ಸೂತ್ರವಾಗಬೇಕು. ಶರಣರ ಬದುಕು ಆಚಾರ ವಿಚಾರ ನಿಂತ ನೀರಾಗದೆ ಹರಿಯುವ ನಿರಾಗಿ ಜ್ಞಾನ ಹಂಚಿಕೆ ಆಗಬೇಕು ಎಂದರು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಸಮ್ಮುಖವಹಿಸಿದ್ದರು. ಮಾಜಿ ಶಾಸಕಿ ಸೀಮಾ ಮಸೂತಿ, ಬಸವೇಶ್ವರ ರೂರಲ್ ಸಂಸ್ಥೆ ಅಧ್ಯಕ್ಷ ಶರಣಪ್ಪ ಕೊಟಗಿ, ಪಾಲಿಕೆ ಸಹಾಯಕ ಆಯುಕ್ತ ಅರವಿಂದ ಜಮಖಂಡಿ, ನಾಗರಾಜ ಪಟ್ಟಣಶೆಟ್ಟಿ, ಡಿ. ಬಿ. ಲಕಮನಹಳ್ಳಿ ವೇದಿಕೆ ಮೇಲಿದ್ದರು.