ಜಾತಿಗೆ ಅವಕಾಶವಿಲ್ಲ; ಇದು ಬಸವ ತತ್ವದ ಮಠ: ಆಡಳಿತಾಧಿಕಾರಿ ಶಿವಯೋಗಿ ಕಳಸದ
ಚಿತ್ರದುರ್ಗ
ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠಕ್ಕೆ ಜಂಗಮ ಪರಂಪರೆಯ ಶ್ರೀಗಳನ್ನು ಉಸ್ತುವಾರಿಯನ್ನಾಗಿ ನೇಮಿಸಲು ಬೇಡಿಕೆ ಬಂದಿದೆ.
‘ನಮ್ಮ ಸಮಾಜದ ಜಂಗಮ ಗುರುಗಳನ್ನ ಆಡಳಿತ ಮಂಡಳಿಗೆ ಸೇರಿಸಿಕೊಳ್ಳಿ’ ಎಂದು ಶಾಸಕ ಕೆ. ಸಿ. ವೀರೇಂದ್ರ ಅವರಿಗೆ ಚಿತ್ರದುರ್ಗ ಜಿಲ್ಲಾ ಜಂಗಮ ಸಮಾಜ ಸಂಸ್ಥೆ ಮನವಿ ಸಲ್ಲಿಸಿದೆ.
ಜಂಗಮ ಸಮಾಜ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್. ಷಡಾಕ್ಷರಯ್ಯ “ಮುರುಘಾಮಠ ಜಂಗಮ ಪರಂಪರೆಯ ಮಠ, ಹಿಂದಿನ ಪರಂಪರೆ ಮುಂದುವರೆಸಿಕೊಂಡು ಹೋಗಬೇಕು ಎನ್ನುವುದು ನಮ್ಮ ಮುಖ್ಯ ಬೇಡಿಕೆ,” ಎಂದು ಬಸವ ಮೀಡಿಯಾಗೆ ಹೇಳಿದರು.
“ಇಲ್ಲಿಯವರೆಗೆ 25 ಜನ ಪೀಠಾಧಿಪತಿಗಳು ಆಗಿದ್ದರಲ್ಲ, ಅವರೆಲ್ಲ ಯಾರು ಅಂತ ದಾಖಲೆ ಕೊಡ್ತೀವಿ, ಅದೇ ಪರಂಪರೆ ಮುಂದುವರೆಯಬೇಕು. ಅದಕ್ಕೆ ಜಂಗಮರನ್ನೇ ಮಠಕ್ಕೆ ಉಸ್ತುವಾರಿ ಮಾಡಿ ಅಂತ ಕೇಳಿದ್ದೀವಿ,” ಎಂದು ಹೇಳಿದರು.
ಸಂವಿಧಾನ ಎಲ್ಲಾ ಪರಂಪರೆಗಳು ಹಾಗೆಯೇ ಉಳಿಯಬೇಕು ಅಂತ ಹೇಳಿದೆ. ಮುಸ್ಲಿಮರು ಮುಸ್ಲಿಮರಾಗಿಯೇ ಉಳಿಬೇಕು, ಬ್ರಾಹ್ಮಣರು ಬ್ರಾಹ್ಮಣರಾಗಿಯೇ ಉಳಿಬೇಕು ಅಂತ ಹೇಳಿದೆ. ಅದಕ್ಕೆ ಮುರುಘಾಮಠ ಜಂಗಮ ಪರಂಪರೆಯ ಮಠವಾಗಿಯೇ ಉಳಿಯಬೇಕು,” ಎಂದು ಹೇಳಿದರು.
…ಬ್ರಾಹ್ಮಣರು ಬ್ರಾಹ್ಮಣರಾಗಿಯೇ ಉಳಿಬೇಕು… ಮುರುಘಾಮಠ ಜಂಗಮ ಪರಂಪರೆಯ ಮಠವಾಗಿಯೇ ಉಳಿಯಬೇಕು,
ಶ್ರೀ ಮಠದ ಆಶ್ರಯದಲ್ಲಿರುವ ಯಾವುದಾದರು ಜಂಗಮ ಮಠದ ಶ್ರೀಗಳನ್ನು ಆಡಳಿತ ಮಂಡಳಿಗೆ ಸೇರಿಸಿಕೊಳ್ಳಬೇಕು ಎಂದು ಹೇಳಿದರು.
ಮಾರ್ಚ್ 26ರಂದು ಶಾಸಕರಿಗೆ ಕೊಟ್ಟಿರುವ ಜಂಗಮ ಸಮಾಜದ ಮನವಿ ಪತ್ರದಲ್ಲಿ ಮಠದ ‘ಜಂಗಮ ಪರಂಪರೆಯ’ ಬಗ್ಗೆ ಎರಡು ಮಾಹಿತಿಯಿದೆ.
‘ಜಂಗಮ ಪರಂಪರೆಯ’ ವಿಧಿ ವಿಧಾನ, ಪೂಜೆ ಪುರಸ್ಕಾರ, ಹಬ್ಬ ಹರಿದಿನಗಳ ಆಚರಣೆಗಳು ಇಲ್ಲಿಯವರೆಗೆ ಜಂಗಮ ಮೂರ್ತಿಯ ಸಾನಿಧ್ಯದಲ್ಲಿ ನಿರಂತರವಾಗಿ ನಡೆದು ಬಂದಿದೆ, ಎಂದು ಪತ್ರದಲ್ಲಿ ಹೇಳಲಾಗಿದೆ.
ನಮ್ಮ ಸನಾತದ ಹಿಂದೂ ಪಂಚಾಂಗ ಪದ್ಧತಿಯಂತೆ” ವರ್ಷದ ಮೊದಲ ಹಬ್ಬವಾದ ಯುಗಾದಿಯಂದು ಭಕ್ತರು ಜಂಗಮ ಶ್ರೀಗಳ ದರ್ಶನ ಮತ್ತು ಆಶೀರ್ವಾದ ಪಡೆಯುವುದು ಭಾವನಾತ್ಮಕ ಸಂಪ್ರದಾಯವಾಗಿದೆ ಎಂದೂ ಹೇಳಲಾಗಿದೆ.

ಇದು ಬಸವ ತತ್ವದ ಮಠ: ಶಿವಯೋಗಿ ಕಳಸದ
ಜಂಗಮ ಶ್ರೀಗಳನ್ನು ನೇಮಿಸಲು ಬಂದಿರುವ ಬೇಡಿಕೆಗೆ ಮಠದ ಆಡಳಿತಾಧಿಕಾರಿ ಶಿವಯೋಗಿ ಕಳಸದ ಅವರು ಬಸವ ಮೀಡಿಯಾಗೆ ಪ್ರತಿಕ್ರಿಯೆ ನೀಡಿದರು.
ಮುರುಘಾಮಠ ಬಸವ ತತ್ವದ ಪರಂಪರೆಯ ಮಠವಾಗಿದೆ. ಆ ಪರಂಪರೆಯಂತೆ ಮಠವನ್ನು ಮುನ್ನಡೆಸಿಕೊಂಡು ಹೋಗಬೇಕು ಹೋಗುತ್ತಿದ್ದೇವೆ, ಎಂದು ಹೇಳಿದರು.
ಮುರುಘಾಮಠ ಬಸವ ತತ್ವದ ಪರಂಪರೆಯ ಮಠವಾಗಿದೆ. ಆ ಪರಂಪರೆಯಂತೆ ಮಠವನ್ನು ಮುನ್ನಡೆಸಿಕೊಂಡು ಹೋಗಬೇಕು ಹೋಗುತ್ತಿದ್ದೇವೆ
ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರವು ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದೆ. ಸರ್ಕಾರದ ವ್ಯವಸ್ಥೆಯಲ್ಲಿ ಯಾವುದೇ ಜಾತಿ ಆಧಾರಿತವಾಗಿ ಆಡಳಿತ ನಡೆಸಲು ಬಾರದು, ಎಂದು ಹೇಳಿದರು.
“ಜಂಗಮ ಸಮಾಜ ಅಥವಾ ಇನ್ನಾವುದೇ ಸಮಾಜ ತಮ್ಮ ಬೇಡಿಕೆಯನ್ನು ಸಲ್ಲಿಸಲು ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ನಾವು ಸುಪ್ರೀಂಕೋರ್ಟ್ ಮತ್ತು ಸರ್ಕಾರದ ನಿರ್ದೇಶನದಂತೆ ಆಡಳಿತ ನಡೆಸಿಕೊಂಡು ಹೋಗುತ್ತಿದ್ದೇವೆ, ಎಂದು ಹೇಳಿದರು.
ತಪ್ಪು ಜಾತಿಯಲ್ಲಿ ಹುಟ್ಟಿದ ಡಾ ಬಸವ ಕುಮಾರ್ ಶ್ರೀ
ಮುರುಘಾಮಠದಲ್ಲಿ ಪ್ರಮುಖ ಸ್ಥಾನದಲ್ಲಿರುವ ಮತ್ತೊಬ್ಬರು ಹೆಸರು ಹಾಕಬೇಡಿ ಎಂಬ ಷರತ್ತಿನ ಮೇಲೆ ವಿವಾದದ ಬಗ್ಗೆ ಮಾತನಾಡಿದರು.
“ಈಗ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ ಬಸವ ಕುಮಾರ ಶ್ರೀ ಹುಟ್ಟು ಜಂಗಮರಲ್ಲ. ಅವರು ತಪ್ಪು ಜಾತಿಯಲ್ಲಿ ಹುಟ್ಟಿದ್ದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ,” ಎಂದು ಹೇಳಿದರು.
ಡಾ ಬಸವಕುಮಾರ ಶ್ರೀ ಬಹಳ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತವೂ ದಕ್ಷವಾಗಿ ನಡೆಯುತ್ತಿದೆ. ಇದೂ ಕೂಡ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ, ಎಂದು ಹೇಳಿದರು.
ಡಾ ಬಸವಕುಮಾರ ಶ್ರೀ ಬಹಳ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತವೂ ದಕ್ಷವಾಗಿ ನಡೆಯುತ್ತಿದೆ. ಇದೂ ಕೂಡ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಇವರ ಹಿಂದಿನ ಶಿವಮೂರ್ತಿ ಮುರುಘಾ ಶರಣರು ಹುಟ್ಟು ಜಂಗಮರಾಗಿದ್ದರು. ಆದರೂ ಅವರು ಎಂದೂ ಜಾತಿ ಜಂಗಮರಂತೆ ವರ್ತಿಸದೆ ಪ್ರಕರಣಕ್ಕೆ ಮುನ್ನ ಜಾತ್ಯತೀತ ಸ್ವಾಮೀಜಿಯಾಗಿಯೇ ಗುರುತಿಸಿಕೊಂಡಿದ್ದರು. ಅವರು ಜೈಲಿಗೆ ಹೋಗಿ ಬಸವ ಕುಮಾರ ಶ್ರೀ ಇವರ ಸಮಸ್ಯೆ ಶುರುವಾಗಿದೆ.
ಆಡಳಿತ ಮಂಡಳಿ ಮತ್ತು ಕೆಲವು ಪ್ರಬಲ ಮುಖಂಡರು ಬಸವಕುಮಾರ ಶ್ರೀಗಳ ಪರ ನಿಂತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.


ಮುರುಗಾ ಪರಂಪರೆ ಬಸವತತ್ವದ ಪರಂಪರೆಯ ವಿರಕ್ತಮಠವಾಗಿದೆ. ವಿರಕ್ತ ಎಂಬ ಪದವೇ ಹೇಳುತ್ತದೆ ಅಲ್ಲಮ ಪ್ರಭುದೇವರ ಪರಂಪರೆಯ, ಯಡಿಯೂರು ಸಿದ್ದಲಿಂಗೇಶ್ವರರ ಮಹಾಮಾರ್ಗದಲ್ಲಿ ಬಂದಂತಹ ಮಠ. ರಕ್ತ ಮಠಗಳಿಗೆ ಶಕ್ತಿಕೇಂದ್ರವೇ ಬಸವ ಮತ್ತು ಅಲ್ಲಮರು. ಹಾಗಾಗಿ ಅಲ್ಲಮ ಪ್ರಭುದೇವರು ಸಾಧನೆಯಿಂದ ಜಂಗಮ ಪುಂಗವರೆ ಹೊರತು ಜಾತಿಯಿಂದ ಅಲ್ಲ. ಬಸವ ಪರಂಪರೆಯ ಮಠಗಳಿಗೆ ಜಾತಿ ಮುಖ್ಯವಲ್ಲ ಸಾಧನೆ ಮುಖ್ಯ . ಹಾಗಾಗಿ ಲಿಂಗಾಯತ ಧರ್ಮದ ಸಮರ್ಥ ಸಾಧಕರನ್ನು ಶ್ರೀ ಮಠದ ಆಡಳಿತ ಅಧಿಕಾರಿಯನ್ನಾಗಿ ನೇಮಿಸಲಿ . ಬಸವ ತತ್ವದ ಪರಂಪರೆ ಜಾತಿರಹಿತವಾಗಿರುವುದರಿಂದ … ಸಕಲ ಸದ್ಭಕ್ತರು ಮೆಚ್ಚುವಂತಹ ಮಹಾಸಾಧಕನನ್ನು ಮಾತ್ರ ಶ್ರೀ ಮಠದ ಆಡಳಿತ ಅಧಿಕಾರಿಯನ್ನಾಗಿ ನೇಮಿಸಬೇಕು . ಸಂವಿಧಾನಬದ್ಧವಾಗಿ ಬಸವ ತತ್ವದ ಪರಂಪರೆ ಸಂಸ್ಕೃತಿ ಉಳಿಸಿಕೊಂಡು ಹೋಗಲು ಅವಕಾಶ ನೀಡಬೇಕು . ರಕ್ತ ಮಠಗಳಿಗೆ ಯಾವುದೇ ಒಂದು ಜಾತಿಯ ವ್ಯಕ್ತಿಗಳನ್ನು ಮಾತ್ರ ಕೂಡಿಸಬಾರದು. ಸಾಧಕನ ಅನುಷ್ಠಾನ, ವಚನ ಅಧ್ಯಯನ, ಬಸವ ತತ್ವ ನಿಷ್ಠೆ, ವ್ಯಕ್ತಿತ್ವ, ಪಾಂಡಿತ್ಯ, ಆಚರಣೆ, ಬಸವ ತತ್ವ ಪ್ರಚಾರಕ್ಕೆ ಬದ್ಧತೆ, ನಿರಹಂಕಾರಿ, ವಿನಯ ಶೀಲ, ನಿಜ ಜಂಗಮ ಸ್ವರೂಪಿ, ಮಹಾಭಕ್ತ, ಮಹಾ ಮಹೇಶ, ಬಸವ ತತ್ವದ ಗಣಾಚಾರಿ ಭೃತ್ಯಾಚಾರಿ ಸೇವಕ, ಸದ್ಭಾವಗಳನ್ನು ಮಾನದಂಡವಾಗಿ ಇಟ್ಟುಕೊಂಡು ನಾಡಿನ ಭಕ್ತರ ಅಭಿಪ್ರಾಯದ ಮೇರೆಗೆ ಆ ಶ್ರೀಮಠದ ಆಡಳಿತ ಅಧಿಕಾರಿಯನ್ನು ಅಥವಾ ಮಠಾಧೀಶರನ್ನು ನೇಮಕ ಮಾಡಬೇಕೆಂದು ಕೋರಿಕೆ 🙏🙏🙏
ಬಸವಕುಮಾರ ಶ್ರೀಗಳು ಬದ್ಧತೆಯಿಂದ ತಾತ್ವಿಕ ನೆಲೆಗಟ್ಟಿನ ಮೇಲೆ ನಿಷ್ಠೆಯಿಂದ ಆಚಾರವಂತರಾಗಿ ಕಾರ್ಯ ನಿರ್ವಹಿಸುತ್ತಿರುವಾಗ …. ಮತ್ತೋರ್ವ ಆಡಳಿತ ಅಧಿಕಾರಿಗಳನ್ನು ನೇಮಿಸುವುದು ಅನುಚಿತ .
ಶ್ರೀ ಬಸವಕುಮಾರ ಸ್ವಾಮಿಗಳಿಗೆ ಜಂಗಮ ಧೀಕ್ಷೆ ಎಲ್ಲಿ ಯಾರು ಕೊಟ್ಟರು? ಧೀಕ್ಷೆ ನಂತರ ಶಾಖಾ ಮಠದ ಉಸ್ತುವಾರಿ ಕೊಟ್ಟಿದ್ದವರು ಯಾರು?
ಜಗದ್ಗುರುಗಳಲ್ಲೊರ್ವರು ಪಟ್ಟಾಧಿಕಾರದ ನಂತರ ಭಕ್ತರಿಗೆ ಕೈಮುಗಿದು ಶರಣುಶರಣಾರ್ಥಿ ಸಲ್ಲಿಸಿದ ಮೊದಲಿಗರು ಶ್ರೀ ಶಿವಮೂರ್ಥಿ ಮುರುಘಾ ಶರಣರು. ಶರಣ ಸಂಸ್ಕೃತಿ ಅರಿಯಲು ವಚನ ಸಾಹಿತ್ಯ ಮಾತ್ರ ಸಾಕು, ಅದಕ್ಕೆ ಸಂಸ್ಕೃತ ಕಲಿಕೆಯ ಅವಶ್ಯಕತೆ ಇಲ್ಲ ಎಂಬ ನಿಲುವುಳ್ಳಿ ಮಠದಲ್ಲಿಯೇ ಸಾದಕ ಹಾಗು ಪ್ರಚಾರಕರಿಗಾಗಿ ಬಸವತತ್ವ ಮಹಾವಿಧ್ಯಾಲಯ ಆರಂಬಿಸಿ ಜಾತಿರಹಿತವಾಗಿ ಎಲ್ಲ ಆಕಾಂಕ್ಷಿಗಳಿಗೆ ಸಮಾನ ಅವಕಾಶ ನೀಡಿ ತರಭೇತಿ ನೀಡಿ ಜಂಗಮ ಧೀಕ್ಷೆನೀಡುವ ಮೂಲಕ ಮುರುಘಾಮಠವನ್ನು ನಿಜ ಶೂನ್ಯ ಪೀಠಮಾಡಿದರು.
ಅವರ ಅಧಿಕಾರ ಸಮಯದಲ್ಲಿದ್ದ ಹಲವು ಸಣ್ಣ ಪುಟ್ಟ ವೈದಿಕ ದೋಷಗಳನ್ನು ಹೊರಹಾಕಿ ಸಂಪೂರ್ಣ ಅವೈಧಿಕ ವ್ಯವಸ್ಥೆಯನ್ನು ಪರಂಪರೆಯ ಮಠಗಳು ಅಳವಡಿಸಿಕೊಂಡು ಸಾಗುವಂತೆ ಮಾಡಿ ಸಮುದಾಯ ಮೂಲ ಮಾರ್ಗದಲ್ಲಿ ಮುನ್ನಡೆಯಲು ಪ್ರೇರೇಪಿಸಿದರು. ಕೆಲವೊಂದು ಕಾರಣ ಗಳಿಂದಾಗಿ ಅವರು ತಾತ್ಕಾಲಿಕವಾಗಿ ಶ್ರೀ ಮಠದ ಆಡಳಿತದಿಂದ ದೂರ ಇದ್ದಾರೆ. ಸರಕಾರ ತಾತ್ಕಾಲಿಕ ವಾಗಿ ಆಡಳಿತವನ್ನು ಒಂದು ತತ್ಕಾಲಿಕ ಸಮಿತಿ ರಚಿಸಿ ಮಠದ ಆಡಳಿತವನ್ನು ಯಶಸ್ವಿಯಾಗಿ ಯಾವುದೇ ಲೋಪದೋಷಗಳಿಲ್ಲದೆ ಜನಪ್ರಿಯವಾಗಿ ನಡೆಸುತ್ತಿರುವುದು ಭಕ್ತರಿಗೆ ಸಂತಸ ಹಾಗು ಸಮಾದಾನ ತಂದಿದೆ. ಹಾಲಿ ಆಡಳಿತ ಮಂಡಲಿಯು ಸಂಬಂದ ಪಡದವರ ಯಾವುದೇ ಟೀಕೆಗಳನ್ನು ಲೆಕ್ಕಿಸದೆ ಮುಂದುವರೆಯಲಿ.
ಜಗದ್ಗುರುಗಳು ಆಗಬೇಕಾದವರು ಪ್ರಾಣೇಶ್ವರರಾಗಬಾರದು. ಪ್ರಾಣಲಿಂಗಿ ಶರಣ ರಾಗಿರಬೇಕು.
ಪೀಠದಲ್ಲಿ ಭಕ್ತ ಮಾಹೇಶ್ವರ,ಪ್ರಸಾದಿ, ಪ್ರಾಣಲಿಂಗಿ ಪ್ರಜ್ಞೆ ಮೂಡಿಸುವ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು. ಈ ಪ್ರಜ್ಞೆ ಮೂಡಿದವರಿಗೆ ಜಂಗಮ ದೀಕ್ಷೆ ಕೊಟ್ಟು ೧೨ ವರ್ಷ ಚರರಾಗಿ ಧರ್ಮ ಸಂದೇಶ ಬಿತ್ತುವ ಕಾರ್ಯದಲ್ಲಿ ತೊಡಗಿಸಬೇಕು.. ಮುಂದೆಯಾದರೂ ಷಟ್ಸ್ಥಲ ಪ್ರಜ್ಞೆಯುಳ್ಳ ಶರಣರು ಜಗದ್ಗುರುಗಳಾಗಲಿ.
ಮುರಘೆ ಮಠದ ಸಂಸ್ಥಾಪಕರು ಜಾತಿ ಜಂಗಮರೆ?
ಮಠ ಸ್ಥಾಪನೆ ಮಾಡಿದವರೇ ವೀರಶೈವರು (ಜಾತಿ ಜಂಗಮರು) ಅಲ್ಲ.
ಗೆದ್ದಿಲು ಪರಿಶ್ರಮ ಪಟ್ಟು ಗೂಡು ಹುತ್ತ ಕಟ್ಟಿದಾಗ, ನಿರಾಯಾಸವಾಗಿ ಒಳ ಹೊಕ್ಕ ವಿಷ ಪೂರಿತ ಹಾವು, ಹುತ್ತ ತನ್ನದು ಎದಂತೆ ಈ ಜಾತಿ ಜಂಗಮರು, ಲಿಂಗಾಯತ ಧರ್ಮ ಪ್ರಸಾರಕ್ಕಾಗಿ ಆಸ್ತಿ ದಾನ ಮಾಡಿದ ಲಿಂಗಾಯತರ ಆಸ್ತಿ ಹೊಡೆಯಲು, ಅನುಭವಿಸಲು ಈ ಜಾತಿ ಜಂಗಮರು ಹೂಡಿದ ನಾಟಕ ಇದು.
ಆಸ್ತಿ ಇಲ್ಲದ ಅನೇಕ ಮಠ ಇವೆ, ಅವಕ್ಕೆ ಈ ಜಾತಿ ಜಂಗಮರು ಮಠಾಧೀಶರು ಆಗಲು ತಯ್ಯಾರು ಇದ್ದಾರೆಯೇ?
ರೇಣುಕಾಚಾರ್ಯನ ಚಿತ್ರದ ಜಾತಿಜಂಗಮರ ಮನವಿಯನ್ನು ತಿರಸ್ಕರಿಸಿ ಬಸವನಿಸ್ಟೆಯುಳ್ಳವರನ್ನು ಮಠದ ಪರಂಪರೆಗೆ ನೇಮಕಮಾಡಬೇಕು.
ಈ ಜಂಗಮರು ತಮ್ಮ ಚಾಳಿ ಬಿಡುವುದಿಲ್ಲ. ಎರಡು ಕಾಲಿನ ಜಂಗಮರ ಉದರದಿಂದ ಬಂದವರೇ ಜಂಗಮರಲ್ಲ. ಬಸವ ಕುಮಾರ ಇಂಥದೇ ಜಾತಿಯಲ್ಲಿ ಹುಟ್ಟಿ ಬರಬೇಕೆಂದು ಅರ್ಜಿ ಹಾಕಿದ್ದರೇ ! ಅಥವಾ ನೀವೇನಾದರೂ ಅರ್ಜಿಹಾಕಿಕೊಂಡು ಹುಟ್ಟಿದ್ದೀರಾ ? ಈ ಸುಮಾರು ಬುದ್ಧಿಯೇ ನಿಮಗೀಗ ಎದುರಾಗಿದೆ. ಎಲ್ಲರೂ ಹುಟ್ಟಬೇಕಾದಲ್ಲಿಯೇ ಹುಟ್ಟಿದ್ದಾರೆ. ನೀವೇನು ಹುಟ್ಟುತ್ತಲೇ ಕಿರೀಟ ಹೊತ್ತುಕೊಂಡು ಬಂದಿರಾ ? ಲಿಂಗಾಯತ ಜನಕ್ಕೆ ಬಸವಾದಿ ಶರಣರನ್ನೂ ಅವರ ವಚನಗಳನ್ನೂ ಹೇಳಿದರೆ,ಎಲ್ಲಿ ಅವರಿಗೆ ತಿಳುವಳಿಕೆಯುಂಟಾಗಿ ನಮ್ಮನ್ನು ಕೈ ಬಿಟ್ಟಾರೆಂಬ ಭಯದಿಂದ ಇದುವರೆಗೆ ಆ ಅಮೂಲ್ಯವಾದ ಜ್ಞಾನವನ್ನು . ಈಗ ಅವರೇ ಅವರಾಗಿ ಈ ಜ್ಞಾನ ನಿಧಿಯನ್ನು ಹುಡುಕಿಕೊಂಡಿದ್ದಾರೆ. ಬಸವನೆಂಬ ಬಳ್ಳಿ ಕೇವಲ ಕರ್ನಾಟಕವಲ್ಲ ಅದರಾಚೆಗೆ ಹಬ್ಬಿದೆ. ಮಹಾರಾಷ್ಟ್ರ,ತೆಲಂಗಾಣ,ಕೇರಳ,ತಮಿಳುನಾಡಿನಲ್ಲೆಲ್ಲಾ. ಅದಕ್ಕೇನೇ ಕೆಲವರಿಗೆ ಹೊಟ್ಟೆಯುರಿ. ವೈದಿಕರಂತೆಯೇ ಈ ಜಂಗಮರು “ತನ್ನ ತಾನರಿದವಂಗೆ ತಾನೇ ಗುರು ನೋಡಾ ” ಎಂಬುದನ್ನು ಸಾಮಾನ್ಯರಾಗಿಯೇ ಅಸಾಮಾನ್ಯ ‘ಅರಿವು’ಕೊಟ್ಟ ತಾಯಿ-ಮುಕ್ತಾಯಕ್ಕ.ಇಂಥವೆಲ್ಲ ನಿಮಗೆ ತಿಳದಿರುವುದಿಲ್ಲ-ಬಿಡಿ.ಓದಿದರಲ್ಲವೇ ತಿಳಿಯುವುದು. ಅಯ್ಯ್ನಾರ ಹೊಟ್ಟೆಯಲ್ಲಿ ಹುಟ್ಟಿದ್ದೇವೆ ಹಾಗಾಗಿ ಜಂಗಮ ಎನ್ನುತ್ತೀರಿ. ಜಂಗಮ ಅಂದರೆ ಜಗಭರಿತ ಅರಿವು. ಅನೇಕ ಬ್ರಹ್ಮಾಂಡಗಳನ್ನು ಒಳಗೊಂಡ ಅದ್ಭುತ-ಬಯಲು,ಚೈತನ್ಯ = ಪರಮಾತ್ಮ = ವಿಶ್ವ ಶಕ್ತಿ. ಹೋಗಲಿ ಅಷ್ಟಾವರಣ,ಪಂಚ ಆಚಾರ,ಷಟ್ಸ್ಥಲ ಇವೆಲ್ಲ ಬರೀ ತಿಳಿಯುವುದಲ್ಲ. ಆಚರಿಸಬೇಕು. ಆಚಾರವೇ ‘ಲಿಂಗ’,ಅನುಭಾವವೇ ಜಂಗಮ. ಅತಿ ತಳ ಸಮುದಾಯದ ಜನ,ತಿಳಿದು,ಆಚರಿಸಿ ಅನುಭವಿಸಿ,ವಚನ ರಚನೆ ಮಾಡಿದರು.ಅವರೆಲ್ಲ ಶರಣರಾದರು. ನಿಮಗೆ ಇದೆಲ್ಲ ಗೊತ್ತಿತ್ತೇ ? ಹಾಗಾದರೆ ಜನರಿಗೆ ಏಕೆ ತಿಳಿಸಲಿಲ್ಲ. ಅಥವಾ ಇವರೆಲ್ಲ ಅಜ್ಞಾನದಲ್ಲಿಯೇ ಇರಲಿ ಎಂದಿರಬಹುದು. ಬಸವಕುಮಾರರು ತಪ್ಪು ಕುಲದಲ್ಲಿ ಹುಟ್ಟಿದ್ದಾರೆ-ಎನ್ನುತ್ತೀರಲ್ಲ. ತಾವು ಮಾಡುವ ಪ್ರಸಾದವಾದರೂ ಯಾವುದು ? ಅನೇಕ ಜನ ಜಾತಿ ಜಂಗಮರು ನಮ್ಮ ಸ್ನೇಹಿತರಿದ್ದಾರೆ. ಬಸವಾದಿ ಶರಣರನ್ನು ಅರಿತು ಗೌರವಿಸುತ್ತಾರೆ. ಈ ಮಠಕ್ಕೆ ಇದ್ದ ಜಂಗಮ,ಜಂಗಮವಾಗಿದ್ದರೆ,ನೀವು ಈ ರೀತಿ ಗೋಗರೆಯುವ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಅಂದೇ ‘ಬಸವ ತಂದೆ ಹೇಳಿದ್ದಾರೆ-ಕರ್ಣದಲ್ಲಿ ಹುಟ್ಟಿದವರುಂಟೆ ! ?” ಎಂದು. ಜಂಗಮತ್ವ ಹೋಗಲಿ-ಮೊದಲು ಮಾನವರಾಗಿರಿ. ಇದು ಬಹು ಬೇಸರದ ಸಂಗತಿ. ನೀವೂ ನಿಜ ಅರಿಯಿರಿ,ಆಗ ನಿಜವಾದ ಜಂಗಮರಾಗುತ್ತೀರಿ. ಆವಾಗ ನಿಮಗೂ ಶರಣಾರ್ಥಿಗಳು,ಸಕಲ ಗೌರವ ಸಿಗುತ್ತವೆ. ಬಾಲ ಭಾಷೆ ಬಿಡಿರಿ. ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರು ತಮ್ಮನ್ನು ಕರುಣಿಸಲಿ.
ಬಸವ ಧರ್ಮದಲ್ಲಿ ಜಾತಿ ಜಂಗಮರ ಕಾಟ ಜಾಸ್ತಿಯಾಗಿದೆ ಈ ಜಾತಿ ಜಂಗಮರಿಂದ ಈಗಾಗಲೇ ಬಸವ ತತ್ವಕ್ಕೆ ಸಾಕಷ್ಟು ಆಘಾತಗಳಾಗಿವೆ . ಒಂದು ಲೆಕ್ಕದಲ್ಲಿ ಹೇಳಬೇಕೆಂದರೆ ನೈಜ ಬಸವ ತತ್ವ ಸಂಸ್ಕಾರಗಳನ್ನ ವೈದಿಕರಣ ಮಾಡಿದವರೇ ಈ ಜಂಗಮರು ದಯವಿಟ್ಟು ನೀವುಗಳು ಪ್ರಸವ ತತ್ವದ ವಿಚಾರದಲ್ಲಿ ತಲೆ ಹಾಕಬೇಡಿ ಬಸವ ತತ್ವ ಜಾತ್ಯತೀತವಾಗಿ ಬೆಳೆಯಲು ಬಿಡಿ ಮುರುಗ ಮಠವು ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರದ ಆದೇಶದಂತೆ ಸ್ಥಾಪನೆಯಾಗಿರುವ ಆಡಳಿತ ಮಂಡಳಿಯು ಶಿವಯೋಗಿ ಕಳಸದ ರವರ ಅಧ್ಯಕ್ಷತೆಯಲ್ಲಿ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ ಪೂಜ್ಯ ಡಾಕ್ಟರ್ ಬಸವಕುಮಾರ ಸ್ವಾಮೀಜಿ ಅವರು ಮುರುಗ ಮಠದಲ್ಲೇ ದೀಕ್ಷೆಯನ್ನು ಪಡೆದುಕೊಂಡು ಮೃಗಾ ಮಠದ ಶಾಖಾಮಠದಲ್ಲಿ ಸೇವೆಯನ್ನು ಮಾಡಿ ಸಾಕಷ್ಟು ಅನುಭವವನ್ನು ಪಡೆದುಕೊಂಡು ಶ್ರೀಮಠದ ಒಬ್ಬ ನಿಷ್ಠಾವಂತ ಕಾರ್ಯಕರ್ತರಾಗಿ ಸ್ವಾಮೀಜಿಯಾಗಿ ಬಸವ ತತ್ವ ಸಿದ್ಧಾಂತಗಳ ಮೇಲೆ ನಡೆಯುತ್ತಿರುವ ಪೂಜ್ಯರಾಗಿದ್ದಾರೆ ಇಂತಹ ಯುವ ಸ್ವಾಮೀಜಿಯನ್ನು ಬೆಂಬಲಿಸೋಣ ಮಠವು ಈಗ ಕಷ್ಟದ ಪರಿಸ್ಥಿತಿಯಲ್ಲಿದೆ ಮಠದ ಬಗ್ಗೆ ಜನರಿಗೆ ಒಳ್ಳೆ ಅಭಿಪ್ರಾಯ ಮೂಡುವಂತೆ ಮಾಡೋಣ ಯಾರು ಕೂಡ ಆಡಳಿತದಲ್ಲಿ ಕೈ ಹಾಕದೆ ಮಠದ ಶ್ರೇಯೋಭಿವೃದ್ಧಿಗೆ ದುಡಿಯುವಂತಹ ಮನಸ್ಸನ್ನು ಮಾಡಿ ಸಣ್ಣತನ ತೋರಬೇಡಿ ಎಂದು ಕಳಕಳಿಯ ಮನವಿ ಮಾಡುತ್ತೇನೆ ಈ ಕೃಷ್ಣಪ್ಪ ಬಸವ ಟಿವಿ
ಸುಪ್ರೀಂ ಕೋರ್ಟ್ ಆದೇಶ ಪಾಲಿಸಿ ಸರಕಾರ ಆಡಳಿತ ಅಧಿಕಾರಿಯನ್ನು ನೇಮಕ ಮಾಡಿರುತ್ತಾರೆ. ಶ್ರೀ. ಕಳಸದ ಅವರು ಮಠದ ಚಟುವಟಿಕೆಗಳನ್ನು ಶ್ರೀ. ಬಸವ ತತ್ವದ ಪರಂಪರೆಯಂತೆ ದಕ್ಷ ವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಅದರಲ್ಲಿ ಹಸ್ಟಕ್ಷೆಪ ಮಾಡುವುದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಆಗುತ್ತದೆ. ಈಗಿನ ವ್ಯವಸ್ಥೆಯೇ ಮುಂದುವರೆಯಲಿ