ಮೈಸೂರು
ಮೈಸೂರು ತಾಲೂಕಿನ ಜಯಪುರ ಹೋಬಳಿ ದಾರಿಪುರ ಗ್ರಾಮದ ಸಮುದಾಯ ಭವನದಲ್ಲಿ ಇಷ್ಟಲಿಂಗ ಧಾರಣೆ, ಶಿವಯೋಗ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.
ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು 15 ಜನರಿಗೆ ಲಿಂಗಧಾರಣೆ ಮಾಡಿ ಶಿವಯೋಗ ಹೇಳಿ ಕೊಟ್ಟರು. ಲಿಂಗಾಯತ ಧರ್ಮ ಮಾನ್ಯತೆಗೆ ಎಲ್ಲಾ ಕಾಯಕ ಪಂಗಡಗಳು ಬಸವಣ್ಣನವರು ಧರ್ಮಗುರು ಎಂದು ಒಪ್ಪಿಕೊಂಡು ಒಂದೇ ವೇದಿಕೆಗೆ ಬರಬೇಕೆಂದು ಹೇಳಿದರು.
ಕುದೇರು ಮಠದ ಕಿರಿಯ ಶ್ರೀಗಳಾದ ಇಮ್ಮಡಿ ಗುರುಲಿಂಗ ಸ್ವಾಮೀಜಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಬಸವತತ್ವ ಚಿಂತಕರಾದ ಶ್ರೀ ಬೊಮ್ಮಲಪುರ ಬಸವಣ್ಣನವರು ಬಸವಧರ್ಮದ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಬಸವಧರ್ಮ ನಮ್ಮ ಆತ್ಮ ಗೌರವವನ್ನು ಉಳಿಸುವ ಧರ್ಮ, ಆದುದರಿಂದ ಲಿಂಗಾಯತರು ಬಸವಧರ್ಮ ಆಚರಣೆಗಳನ್ನು ಪಾಲಿಸಲೇ ಬೇಕೆಂದು ಹೇಳಿದರು.
ವಕೀಲ ಬಸವಣ್ಣನವರು ಎಲ್ಲರನ್ನು ಸ್ವಾಗತಿಸಿದರು. ಬಸವಭಾರತ ಪ್ರತಿಷ್ಠಾನದ ಅಧ್ಯಕ್ಷರಾದ ಶಿವರುದ್ರಪ್ಪನವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಉಪಾಧ್ಯಕ್ಷರಾದ ಮಡಹಳ್ಳಿ ಮಹೇಶ್ ರವರು ನಿರೂಪಣೆ ಮಾಡಿದರು.
ಕಾರ್ಯಕ್ರಮದ ಆಯೋಜಕರಾದ ಗೌಡಿಕೆ ಮುದ್ದಪ್ಪನವರು ಮತ್ತು ಶಿವರುದ್ರಪ್ಪನವರನ್ನು ಬಸವಭಾರತ ಪ್ರತಿಷ್ಠಾನದ ವತಿಯಿಂದ ಗೌರವಿಸಲಾಯಿತು.
ದಾರಿಪುರದ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಬಸವಭಾರತ ಪ್ರತಿಷ್ಠಾನ ಮತ್ತು ದಾರಿಪುರದ ಗ್ರಾಮಸ್ಥರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.