ಮೈಸೂರು ತಾಲ್ಲೂಕು ಮಾದಳ್ಳಿ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಮಕ್ಕಳಿಗೆ ಸೋಮವಾರ ಪೂಜ್ಯ ಬಸವಯೋಗಿ ಪ್ರಭುಗಳು ಇಷ್ಟಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಟ್ಟರು.
ಇಷ್ಟಲಿಂಗ ಜನಕ ಬಸವಣ್ಣನವರು ಎಂಬ ವಿಷಯದ ಬಗ್ಗೆ ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜುರವರು ಉಪನ್ಯಾಸ ನೀಡಿದರು ನಿವೃತ್ತ ಶಿಕ್ಷಕರಾದ ಮಹದೇವಪ್ಪನವರು ,ಲಿಂಗರಾಜಪ್ಪನವರು ಮತ್ತು ಪೂಜ್ಯ ಬಸವಯೋಗಿಪ್ರಭು ಸ್ವಾಮೀಗಳು ಬಸವಾದಿ ಶರಣರ ಧರ್ಮದ ಆಶಯಗಳು ಬಗ್ಗೆ ಮಾತನಾಡಿದರು .
ಬಸವ ಪ್ರತಿಷ್ಠಾನದ ಅಧ್ಯಕ್ಷರು ಎಲ್ಲರಿಗೂ ಶರಣು ಸಮರ್ಪಣೆ ಮಾಡಿ ಈ ತಿಂಗಳ ಬಸವ ಭಾರತ ಪತ್ರಿಕೆಯನ್ನು ಬಿಡುಗಡೆ ಮಾಡಿದರು .
ಬಸವ ಪ್ರತಿಷ್ಠಾನದ ಸದಸ್ಯರು , ಮೈಸೂರು ನಗರ ಮತ್ತು ತಾಲ್ಲೂಕಿನಿಂದ ಆನೇಕ ಶರಣಬಂಧುಗಳು ಹಾಜರಿದ್ದರು .ಮಾದಳ್ಳಿಯ ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ದಾಸೋಹಿಗಳನ್ನು ಸನ್ಮಾನಿಸಲಾಯಿತು .
ಕಲಾವಿದ ಶಿವಲಿಂಗಪ್ಪನವರು ಮಕ್ಕಳಿಗಾಗಿ ಕನ್ನಡನಾಡಿನ ವಚನಕಾರರರು ಸಚಿತ್ರ ಕಥಾ ಮಾಲಿಕೆ , ಮಹಾಮಾನವತಾವಾದಿ ಬಸವಣ್ಣ ಪುಸ್ತಕವನ್ನು ಮತ್ತು ಪುಟ್ಟ ಬಸಪ್ಪನವರು ಉಚಿತವಾಗಿ ಕೊಟ್ಟರು.