ಮೈಸೂರಿನ ಬಸವ ಧ್ಯಾನ ಮಂದಿರದ 15ನೇ ವಾರ್ಷಿಕೋತ್ಸವವು ಇತ್ತೀಚೆಗೆ ನಡೆಯಿತು. ನಗರದ ರಮ್ಮನಹಳ್ಳಿಯಲ್ಲಿರುವ ಭಾವೈಕ್ಯತೆ ಕೇಂದ್ರದ ಉತ್ಸವದ ಅಂಗವಾಗಿ ಹಲವಾರು ಸೌಹಾರ್ದತೆ ಸಾರುವ ಕಾರ್ಯಕ್ರಮಗಳು ನಡೆದವು.
ಟಿಪ್ಪು ಮಸೀದಿಯಿಂದ ಆರಂಭವಾದ ಸೌಹಾರ್ದ ಪಾದಯಾತ್ರೆಗೆ ಜ್ಞಾನಪ್ರಕಾಶ ಸ್ವಾಮೀಜಿ ಚಾಲನೆ ನೀಡಿದರು. ಭಾವೈಕ್ಯತೆಯ, ಸೌಹಾರ್ದತೆಯ ಮಹತ್ವ ಕುರಿತು ಮಾತನಾಡಿದರು. ಪಾದಯಾತ್ರೆ ಬಸವ ಧ್ಯಾನ ಮಂದಿರದವರೆಗೆ ನಡೆಯಿತು.