ಮೈಸೂರು ಜಿಲ್ಲೆ ಇಲವಾಲ ಹೋಬಳಿ ಶೆಟ್ಟನಾಯ್ಕನಹಳ್ಳಿಯಲ್ಲಿ ಪೂಜ್ಯ ಬಸವಯೋಗಿ ಪ್ರಭುಗಳಿಂದ 40 ಮಕ್ಕಳಿಗೆ ಮತ್ತು.ಹಿರಿಯರಿಗೆ ಲಿಂಗಧಾರಣೆ ಮಾಡಿ ಶಿವಯೋಗ ಹೇಳಿಕೊಡಲಾಯಿತು .
ಬಸವಭಾರತ ಪ್ರತಿಷ್ಠಾನದಿಂದ ಆಗಸ್ಟ್ ೬ರಂದು ನಡೆದ ಕಾರ್ಯಕ್ರಮದ ಸಾನಿಧ್ಯವನ್ನು ಬಸವಲಿಂಗಸ್ವಾಮೀಜಿಯವರ ಪಟ್ಟದ ಮಠದ ಪೂಜ್ಯ ಬಸವಣ್ಣ ಸ್ವಾಮೀಜಿಗಳು ವಹಿಸಿದ್ದರು.
ಬಸವ ಚಿಂತಕರಾದ ಪ್ರಶಾಂತ್ ರವರು ಕಾಯಕ ಮತ್ತು ದಾಸೋಹದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ನಂತರ ಅವರನ್ನು ಸನ್ಮಾನಿಸಲಾಯಿತು .
ಶೆಟ್ಟನಾಯ್ಕನಹಳ್ಳಿ ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು . ಕಾರ್ಯಕ್ರಮದಲ್ಲಿ ಶರಣ ನಿಂಗರಾಜಪ್ಪ , ಬಸವಪ್ರತಿಷ್ಟಾನದ ಅಧ್ಯಕ್ಷ ಶಿವರುದ್ರಪ್ಪನವರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದರು .