ಮೈಸೂರು
ನಗರದ ಅಗ್ರಹಾರದ ರೇಣುಕಾ ಮಂದಿರದಲ್ಲಿ ರಾಷ್ಟ್ರೀಯ ಬಸವದಳದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಇಷ್ಟಲಿಂಗ ಶಿವಯೋಗ ಕಾರ್ಯಕ್ರಮ ನಡೆಯಿತು.
ಬುಧವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಬಸವಾದಿ ಶಿವಶರಣರ ವಚನಗಳನ್ನು ಹಾಡುತ್ತಾ, ಇಷ್ಟಲಿಂಗ ಪೂಜೆ ಮತ್ತು ಲಿಂಗ ನಿರೀಕ್ಷಣೆಯನ್ನು ಮಾಡಲಾಯಿತು.
ಹಿಂದೆ ಜನರು ಪೌರಾಣಿಕ ಶಿವನನ್ನು ಪೂಜಿಸುತ್ತಿದ್ದರು, ತದನಂತರ ಪಂಚಭೂತಗಳನ್ನು ಒಳಗೊಂಡಿರುವ ಆದಿಶಿವನನ್ನು ಶಿವರಾತ್ರಿ ದಿನದಂದು ನನೆಯುತ್ತಾ, ಶಿವರಾತ್ರಿ ಆಚರಣೆಯನ್ನು ಮಾಡುತ್ತಾರೆಂದು ಹಿರಿಯ ಶರಣ ಚಿಂತಕಿ ಸರೋಜಮ್ಮ ನಾಗರಾಜ ಅವರು ತಿಳಿಸಿದರು.
ಎದೆಯ ಮೇಲೆ ಇಷ್ಟಲಿಂಗವನ್ನು ಯಾರು ಧರಿಸಿರುವುದಿಲ್ಲವೋ ಅವರುಗಳು ಲಿಂಗಾಯತರಲ್ಲ, ಎಂದು ಅವರು ಹೇಳಿದರು.
ಆಗಮಿಸಿದ್ದ ಶರಣ ಶರಣೆಯರು ಮನೆಯಲ್ಲಿಯೇ ಪ್ರಸಾದ ತಯಾರಿಸಿ, ಬುತ್ತಿ ಕಟ್ಟಿಕೊಂಡು ತಂದು ಒಬ್ಬರಿಗೊಬ್ಬರು ಹಂಚಿಕೊಂಡು ಪ್ರಸಾದ ಸ್ವೀಕರಿಸಿದ್ದು ವಿಶೇಷವಾಗಿ ಮನ ಸೆಳೆಯಿತು.
ಮೈಸೂರು ರಾಷ್ಟ್ರೀಯ ಬಸವದಳದ ಅಧ್ಯಕ್ಷ ಗಂಗಾಧರಸ್ವಾಮಿ, ಮೈಸೂರಿನ ಜೆ.ಎಲ್.ಎಂ. ಕಾರ್ಯದರ್ಶಿ ಬಿ. ಎಮ್. ಮರಪ್ಪ (ವಕೀಲರು) ಹಾಗೂ ವಿವಿಧ ಬಸವಪರ ಸಂಘಟನೆಗಳ ಹಲವಾರು ಸದಸ್ಯರು ಪಾಲ್ಗೊಂಡಿದ್ದರು.
