ಮೈಸೂರು
ಪಾಳು ಬಿದ್ದು, ಅಕ್ರಮಕ್ಕೆ ಬಲಿಯಾಗಿ, ಯಾರೂ ಕೇಳುವವರಿಲ್ಲದೆ ಸರಕಾರದ ಆಡಳಿತಕ್ಕೆ ಸೇರಿಕೊಂಡಿದ್ದ ಪಂಚಗವಿ ಮಠಕ್ಕೆ ಹಠಾತ್ತಾಗಿ ಉಸ್ತುವಾರಿ ಸ್ವಾಮೀಜಿ ನೇಮಕವಾಗಿದ್ದಾರೆ.
ಐದು ವರ್ಷಗಳಿಂದ ಯಾವುದೇ ಮಠಾಧಿಪತಿಯಿಲ್ಲದೆ ಬೀಗ ಜಡಿಸಿಕೊಂಡಿದ್ದ ಮಠದಲ್ಲಿ ನವಂಬರ್ 16ರಂದು ಜಾಗತಿಕ ಲಿಂಗಾಯತ ಮಹಾಸಭಾ ನಿಜಾಚರಣೆಯ ವಚನ ಕಮ್ಮಟ ನಡೆಸಿತ್ತು.

ಅದರ ಹಿನ್ನಲೆಯಲ್ಲಿ ನವಂಬರ್ 19ರಂದು ಸುತ್ತೂರು ಮಠದ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಸಿದ್ದಗಂಗಾ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ನೇತ್ರತ್ವದಲ್ಲಿ ಸುಮಾರು 70 ಜನ ವಿರಕ್ತ ಮಠದ ಸ್ವಾಮಿಗಳು ಮತ್ತು ಸಮಾಜದ ಮುಖಂಡರು ಸೇರಿ ಮುಡಿಗುಂಡ ವಿರಕ್ತ ಮಠದ ಪೂಜ್ಯ ಶ್ರೀ ಶ್ರೀಕಂಠ ಸ್ವಾಮೀಜಿ ಅವರನ್ನು ಮಠದ ಉಸ್ತುವಾರಿ ಸ್ವಾಮೀಜಿಗಳನ್ನಾಗಿ ನೇಮಿಸಿದರೆಂದು ತಿಳಿದುಬಂದಿದೆ.
ಈ ಮುಂಚೆ ಪೀಠದಲ್ಲಿದ್ದು ನಂತರ ಮಠ ತೊರೆದು ಹೋಗಿದ್ದ ಬಸವಲಿಂಗ ಸ್ವಾಮಿಯನ್ನು ಕರೆಸಿ ಪೂಜ್ಯ ಶ್ರೀಕಂಠ ಸ್ವಾಮೀಜಿ ಅವರಿಗೆ ಹಸ್ತಾಂತರ ಮಾಡಿಸಿದರು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೈಸೂರು ಜಿಲ್ಲೆಯ ಸ್ವಾಮೀಜಿಯೊಬ್ಬರು ಹೇಳಿದರು.
“ನವಂಬರ್ 20ರಂದು ಮಠದ ಹಸ್ತಾಂತರವನ್ನು ಮೈಸೂರಿನಲ್ಲಿ ನೋಂದಣಿ ಮಾಡಿಸಲು ಮಾಡಿದ ಪ್ರಯತ್ನ ಸಫಲವಾಗಲಿಲ್ಲ. ಆಸ್ತಿ ವಿವಾದದಲ್ಲಿರುವುದರಿಂದ ಸಬ್ ರಿಜಿಸ್ಟ್ರಾರ್ ನೋಂದಣಿ ಮಾಡಲು ಒಪ್ಪಿಕೊಳ್ಳಲಿಲ್ಲ,” ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ನವಂಬರ್ 19ರ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕುಂದೂರು ಮಠದ ಪೂಜ್ಯ ಶರತ್ಚಂದ್ರ ಸ್ವಾಮಿಗಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.
1786ರಲ್ಲಿ ಶ್ರೀ ಕೃಷ್ಣರಾಜ ಒಡೆಯರ್ ರಾಜ್ಯದ ಲಿಂಗಾಯತ ಸಮುದಾಯಕ್ಕೆ ಪಂಚಗವಿ ಮಠವನ್ನು ಕಟ್ಟಿಸಿಕೊಟ್ಟು ಅದರ ನಿರ್ವಹಣೆಗಾಗಿ 33 ಎಕರೆ ಕೃಷಿ ಭೂಮಿಯನ್ನು ದಾನವಾಗಿ ಕೊಟ್ಟಿದ್ದರು. 1983ರ ನಂತರ ಬಂದ ಪೀಠಾಧಿಪತಿಗಳು ತಮ್ಮ ಸ್ವಂತ ಲಾಭಕ್ಕಾಗಿ ಅಕ್ರಮವಾಗಿ 20 ಎಕರೆ ಮಠದ ಆಸ್ತಿಯನ್ನು ನಕಲಿ ಛಾಪಾ ಕಾಗದದ ಮೂಲಕ ಅಕ್ರಮವಾಗಿ ಮಾರಾಟ ಮಾಡಿದ್ದರು ಎಂಬ ಆರೋಪದ ಮೇಲೆ ತನಿಖೆ ನಡೆಯುತ್ತಿದೆ. ಈ ಮುಂಚೆಯಿದ್ದ ಸ್ವಾಮೀಜಿ ಮಠ ಬಿಟ್ಟು ಹೋದ ಮೇಲೆ ಮೇಲೆ 2020ರಲ್ಲಿ ಮಠವನ್ನು ನೋಡಿಕೊಳ್ಳಲು ಸರಕಾರ ಆಡಳಿತಾಧಿಕಾರಿಗಳನ್ನೂ ನೇಮಿಸಿತ್ತು.

ಜಾಗತಿಕ ಲಿಂಗಾಯತ ಮಹಾಸಭಾದ ಮೈಸೂರು ಘಟಕದ ಅಧ್ಯಕ್ಷ ಎಸ್ ಮಹದೇವಪ್ಪ ಅವರು ಮೈಸೂರಿನಲ್ಲಿ 30 ವಿರಕ್ತ ಮಠಗಳಿದ್ದವು, ಅವುಗಳಲ್ಲಿ ಕುಂದೂರು ಮಠ, ಹೊಸ ಮಠ ಮತ್ತು ನೀಲಕಂಠ ಮಠಗಳು ಮಾತ್ರ ಉಳಿದುಕೊಂಡಿವೆ. ನಮ್ಮ ಕಣ್ಣ ಮುಂದೆಯೇ ಇನ್ನೊಂದು ಮಠ ನಾಶವಾಗುತ್ತಿದ್ದ ನೋವಿತ್ತು. ಅದನ್ನು ಉಳಿಸಿಕೊಳ್ಳಿ ಎಂದು ಮೂರು ವಿರಕ್ತ ಮಠಗಳ ಸ್ವಾಮೀಜಿಗಳನ್ನೂ ಕೇಳಿಕೊಂಡಿದ್ವಿ. ಸುತ್ತೂರು ಶ್ರೀಗಳೂ ಯಾರಾದರೂ ಮುಂದೆ ಬಂದರೆ ಬೆಂಬಲ ಕೊಡುವುದಾಗಿ ಹೇಳಿದ್ದರು, ಎಂದು ತಿಳಿಸಿದರು.
ಪಂಚಗವಿ ಮಠದ ಪರಂಪರೆ ಮತ್ತು ಬಸವ ತತ್ವದ ಬಗ್ಗೆ ಜಾಗೃತಿ ಮೂಡಿಸಲು ಅಲ್ಲಿಯೇ ನವಂಬರ್ 16 ನಿಜಾಚರಣೆ ಕಾರ್ಯಕ್ರಮ ಹೊಮ್ಮಿಕೊಂಡಿದ್ವಿ. ಇದು ಒಂದು ಕಾಲದಲ್ಲಿ ಪ್ರಭಾವ ಇದ್ದ ಮಠ. ಸ್ಥಳೀಯವಾಗಿಯೂ ಬಹಳ ಜನ ಕಾರ್ಯಕ್ರಮಕ್ಕೆ ಬಂದರು, ಎಂದು ಹೇಳಿದರು.

“ಉಸ್ತುವಾರಿ ಸ್ವಾಮೀಜಿ ನೇಮಕವಾಗಿರುವುದರಿಂದ ಮತ್ತೆ ಮಠದಲ್ಲಿ ಧಾರ್ಮಿಕ ಕಾರ್ಯಗಳು ಶುರುವಾಗುತ್ತಿರುವುದನ್ನು ಸ್ವಾಗತಿಸುತ್ತೇವೆ. ಮಠವನ್ನು ಅಭಿವೃದ್ದಿಪಡಿಸಿ, ಮಠಾಧಿಪತಿಗಳನ್ನು ನೇಮಿಸುವ ಕೆಲಸವೂ ಆಗಬೇಕು,” ಎಂದು ಹೇಳಿದರು.
“ಇಷ್ಟು ದಿನ ಮಲಗಿದ್ದವರು ಈಗ ಎದ್ದು ಕುಳಿತಿರುವುದು ಸಂತೋಷದ ಸಂಗತಿ. ಲಿಂಗಾಯತರಲ್ಲಿ ನಿಧಾನವಾಗಿಯಾದರೂ ಜಾಗೃತಿ ಬರುತ್ತಿರುವುದು ಇನ್ನೂ ಸಂತೋಷದ ಸಂಗತಿ,” ಎಂದು ಮೈಸೂರು ಜಿಲ್ಲೆಯ ಸ್ವಾಮೀಜಿ ಹೇಳಿದರು.
ಈ ಸ್ವಾಮೀಜಿಗಳು ಒಟ್ಟಾಗಿ ಪಂಚ ಗವಿಮಠಕ್ಕೆ ಉಸ್ತುವಾರಿ ಸ್ವಾಮೀಜಿಯನ್ನು ನೇಮಿಸಿದ್ದು ಬಸವ ಧರ್ಮ ಪ್ರಸಾರಕ್ಕೋ ಅಥವಾ ಅನ್ಯ ವಿಷಯಕ್ಕೋ ತಿಳಿಯಬೇಕಿದೆ. ಜನರು ಜಾಗೃತ ಆಗುವವರೆಗೆ ಮಾತಾಧೀಷರು ಎಚ್ಚರ ಗೊಳ್ಳುವದಿಲ್ಲ.
ತುಂಬಾ ಒಳ್ಳೆಯ ಬೆಳವಣಿಗೆ ಆ ಮಠದಲ್ಲಿ ಗಟ್ಟಿಯಾಗಿ ಬಸವತತ್ವ ಪ್ರತಿಪಾದನೆ ನಿಮ್ಮಿಂದ ಮುಂದುವರಿಯಲಿ ಸ್ವಾಮಿಗಳೆ ನಿಮಗೆ ಅಭಿನಂದನೆಗಳು 💐🙏🙏
ಈಗ ದಿಢೀರ್ ಸೇರಿ ಮಠಾದೀಶರನ್ನು ನೇಮಿಸಿರುವ ಎಲ್ದಾ ಜಾಗದ ಅಥವಾ ಜಗದ್ಗುರುಗಳು ಜವಾಬ್ದಾರಿಯುತ ಬಸವತತ್ವದ ಪ್ರಚಾರಕ್ಕಾಗಿಯಂತೂ ಮಠಾದೀಶರನ್ನ ನೇಮಿಸಿಲ್ಲ .ಆದರೆ ಈ ಮಠಾದೀಶರನ್ನ ನೇಮಿಸಿರುವುದು ಬಸವತತ್ವದ ಪ್ರಚಾರದ ಅನುಕೂಲಕ್ಕಾಗಿ ಅಲ್ಲದಿದ್ದರೂ ಜಾಗದ ಲಾಭಕ್ಕಾಗಿ ತುರ್ತಾಗಿ ನೇಮಿಸಿರಬಹುದು…ಬಸವ ತತ್ವನಿಷ್ಠವನ್ನು ಒಪ್ಪಿದ್ದ ಶ್ರೀ ಗೌರಿಶಂಕರಸ್ಮಾಮಿಗಳ ಆ ಮಠಕ್ಕೆ ಬಸವತತ್ವದ ಅನುಯಾಯಿಗಳು ಬಸವತತ್ವದ ಕಾರ್ಯಕ್ರಮಕ್ಕೆ ಕಣ್ಣು ಹಾಯಿಸಿದಾಕ್ಷಣ ಉಳಿದ ಮಠಾದೀಶರಿಗೆ ಆ ಮಠದ ಜಾಗದ ಮೇಲೆ ಕಣ್ಣು ಬಿದ್ದಿರುವುದಂತು ಸತ್ಯ
ಮೈಸೂರಿನ ಲಿಂಗಾಯತಧರ್ಮ ಸಮುದಾಯಗಳೆಲ್ಲರ ಸಮುದಾಯಿಕ ಸಾಮಾಜಿಕ, ಧಾರ್ಮಿಕ ಜಾಗೃತಿಯ ಆಧ್ಯಾತ್ಮಿಕ ಅನುಭಾವಿಕ ಶೈಕ್ಷಣಿಕ ಚಟುವಟಿಕೆ ನಡೆಸುವ ಲಿಂಗಾಯತ hub ಆಗಿ ಬೆಳೆಸುವತ್ತ ಚಿಂತಿಸಬೇಕು.ಮಠಗಳ ಪರಿಕಲ್ಪನೆ ಮಾಡಿಗೊಂಡು ಸ್ಥಾವರ ವಾಗಿರುವುದು ರಿಂದ ಅದನ್ನು ಮತ್ತೆ ಮಠವಆಗಇಸಉವಉದರಇಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ.ಪಾಳುಬಿದ್ದ ಮಠಗಳನ್ನು ಸಮಗ್ರ ಪ್ರಗತಿಪರ ಲಿಂಗಾಯತ ಚಟುವಟಿಕೆಗಳ ಆಧುನಿಕ ಪರಿಕಲ್ಪನೆಯ ಹಬ್(hub)ಆಗಿಸಬೇಕು.