ಕೊಪ್ಪಳ :
ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ, ಕೊಪ್ಪಳ ಇವರಿಂದ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ 2026, ಎಪ್ರೀಲ್ 5 ರಿಂದ 20 ರವರೆಗೆ ಪ್ರತಿದಿನ ಸಂಜೆ 6:30 ರಿಂದ 8 ಗಂಟೆವರೆಗೆ ನಗರದ ತಾಲೂಕ ಕ್ರೀಡಾಂಗಣದಲ್ಲಿ ”ಬಸವ ಭಾಷೆ” ಪ್ರವಚನ ನಡೆಯಲಿದೆ.
ಪ್ರವಚನವನ್ನು ಬೀದರ ಬಸವಗಿರಿಯ ಲಿಂಗಾಯತ ಮಹಾಮಠದ ಪೂಜ್ಯರು, ಮಹಾನುಭಾವಿಗಳಾದ ಪ್ರಭುದೇವ ಮಹಾಸ್ವಾಮಿಗಳು ನಡೆಸಿಕೊಡಲಿದ್ದಾರೆ.
ನಾಡಿನಾಧ್ಯಂತ ಬಸವತತ್ವ ಸಾರಲು 770 ಪ್ರವಚನಗಳ ಅಭಿಯಾನ ಮಾಡುತ್ತಿರುವ ಪೂಜ್ಯರ ಈ ಪ್ರವಚನ ಉದ್ಘಾಟನೆ 05 ರವಿವಾರ ಸಂಜೆ 6.30 ಗಂಟೆಗೆ ಕೊಪ್ಪಳ ಗವಿಮಠದ ಪೂಜ್ಯ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದೆ.

ಜಯಂತಿ ಪ್ರಯುಕ್ತ ಇತರೆ ಕಾರ್ಯಕ್ರಮಗಳ ವಿವರ, ಎಪ್ರೀಲ್ 10 ರಿಂದ 19ರ ವೆರೆಗೆ ಪ್ರತಿದಿನ ಬೆಳಿಗ್ಗೆ 05-30 ರಿಂದ 7 ರವರೆಗೆ ಯೋಗ ಶಿಬಿರ.
14 ಮಂಗಳವಾರ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆ.
ಪ್ರತಿನಿತ್ಯ ವಚನ ಸಂಗೀತ, ಶಕುಂತಲಾ ಬೆನ್ನಾಳ, ಶ್ರೀ ಗುರುಕೃಪಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾ ಸಂಘ, ಭಾಗ್ಯನಗರ ಇವರಿಂದ.
17 ಶುಕ್ರವಾರ “ಮಕ್ಕಳ ಶಿಬಿರ”. 18 ಶನಿವಾರ “ಮಹಿಳಾ ಸಮಾವೇಶ”.
19 ರವಿವಾರ ಬೆಳಿಗ್ಗೆ 7.30 ಗಂಟೆಗೆ “ಸಾಮೂಹಿಕ ವಚನ ಪಠಣ” ಬಸವೇಶ್ವರ ವೃತ್ತದಲ್ಲಿ.
20 ಸೋಮವಾರ ಬಸವ ಜಯಂತಿ ವಿಶೇಷ ಕಾರ್ಯಕ್ರಮ, ಬೆಳಿಗ್ಗೆ 09 ಕ್ಕೆ ಶ್ರೀ ಬಸವೇಶ್ವರ ವೃತ್ತದಲ್ಲಿ ಬಸವ ಪೂಜೆ, ಷಟಸ್ಥಲ ಧ್ವಜಾರೋಹಣ.
ಸಂಜೆ 04 ಕ್ಕೆ ಶ್ರೀ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ, ಶ್ರೀ ಕೋಟೆ ಮಹೇಶ್ವರ ದೇವಸ್ಥಾನದಿಂದ ಗವಿಮಠದವರೆಗೆ.
ಸಂಜೆ 06 ಕ್ಕೆ ಅನುಭಾವ ಗೋಷ್ಠಿ, ಶ್ರೀ ಗವಿಮಠದ ಆವರಣದಲ್ಲಿ.
ಮುಖ್ಯ ಅತಿಥಿಗಳಿಂದ ಉಪನ್ಯಾಸ, ಬಸವಕಾರುಣ್ಯ ಪುರಸ್ಕಾರ ಮತ್ತು ವಚನ ಸಂಗೀತ ಕಾರ್ಯಕ್ರಮ ನಡೆಯಲಿವೆ.
