ಬೆಂಗಳೂರು
ಬಸವ ತತ್ವ, ವಚನ ಸಂಸ್ಕೃತಿ, ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಪೂರ್ಣ ಬದ್ಧತೆ ಇದೆ, ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಲಿಂಗಾಯತ ಸ್ವಾಮೀಜಿಗಳು, ಸಚಿವರು, ಶಾಸಕರು, ಸಮಾಜದ ಮುಖಂಡರ ನಿಯೋಗದವರು ಸೋಮವಾರ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಸಮುದಾಯದ ಬೇಡಿಕೆಗಳ ಕುರಿತು ಸಮಾಲೋಚನೆ ನಡೆಸಿ, ಮನವಿಪತ್ರ ನೀಡಿದರು.
ಸಭೆಯ ನಂತರ ಹೊರಡಿಸಿದ ಪ್ರಕಟಣೆಯಲ್ಲಿ ಸಿದ್ದರಾಮಯ್ಯ ಅವರು ಪೂಜ್ಯರ ಬೇಡಿಕೆಗಳಲ್ಲಿ ಸಾಧ್ಯವಿರುವವುಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ತಿಳಿಸಿ ತಮ್ಮ ಸರಕಾರದ ಬಸವ ಪರ ನಿಲುವನ್ನು ಸ್ಮರಿಸಿಕೊಂಡಿದ್ದಾರೆ.
“ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಬಸವ ಜಯಂತಿಯಂದೇ ಪ್ರಮಾಣವಚನ ಸ್ವೀಕರಿಸಿದೆ. ಬಸವಣ್ಣನವರ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಇರಿಸಿರುವುದು ನಮ್ಮ ಸರ್ಕಾರ.
ಗೋರುಚ ಅವರ ಅಧ್ಯಕ್ಷತೆಯಲ್ಲಿ ಅನುಭವ ಮಂಟಪ ಪುನರುಜ್ಜೀವನಕ್ಕೆ ಮುಂದಾಗಿದ್ದು ನಾವು. ಅನುಭವ ಮಂಟಪವು ಮೊದಲ ಪ್ರಜಾಪ್ರಭುತ್ವದ ವೇದಿಕೆ. ಯಾರ ಒತ್ತಾಯವೂ ಇಲ್ಲದ ವೇಳೆಯಲ್ಲೇ ನಮ್ಮ ಸರ್ಕಾರ ಅನುಭವ ಮಂಟಪ ಪುನರುಜ್ಜೀವನಕ್ಕೆ ಮುಂದಾಗಿತ್ತು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಕಾಂಗ್ರೆಸ್ ಸರ್ಕಾರ,” ಎಂದು ಪ್ರಕಟಣೆಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಾತ್ಯತೀತ, ಸಮಸಮಾಜ ನಿರ್ಮಾಣ ಮಾಡಲು ಬಸವಣ್ಣನವರ ಹೋರಾಟ ಪೂರಕ. ಜಾತಿವಾದಿ ಪಟ್ಟಭದ್ರರಿಗೆ ಬಸವಣ್ಣನವರ ವಿಚಾರಗಳು ಹಿಡಿಸಲ್ಲ.
ಪಟ್ಟಭದ್ರರು ಬಹಿರಂಗವಾಗಿ ಬಸವಣ್ಣನವರನ್ನು ವಿರೋಧಿಸಲು ಸಾಧ್ಯವಿಲ್ಲ.
ಅದಕ್ಕೆ ಆಂತರಿಕವಾಗಿ ವಿರೋಧಿಸುತ್ತಿದ್ದಾರೆ, ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ನಿಜವಾದ ಬಸವಾನುಯಾಯಿ. ಬಸವ/ಶರಣ ತತ್ವದ ಅನುಷ್ಠಾನಕ್ಕೆ ಮಾನ್ಯ ಸಿದ್ದರಾಮಯ್ಯನವರು ಮಾಡಿದಷ್ಟು ಕೆಲಸವನ್ನೂ ಬೇರೆ ಯಾವ ಮುಖ್ಯಮಂತ್ರಿಗಳೂ ಮಾಡಿಲ್ಲ.
ಅಇದ್ಧರಾಮಯ್ಯನವರಿಗೆ ಇರುವಷ್ಟು ಕಳಕಳಿ ನಮ್ಮ ಕೆಲವು ಮಠಾಧೀಶರಿಗೆ ಇಲ್ಲದ್ದು ಖೇದಕರ
Great Move.. 🙏
First priority should be get a Lingayath a seperate Religion..! Which is kept pending at Central Government 🙏🙏🙏
Our beloved Chief minister Siddaramayya
is true Socialist of Basavanna . lingayat
ministers has to learn from him.
ಒಬ್ಬ ಹಿಂದುಳಿದ ವರ್ಗದ ರಾಜಕಾರಣಿ ಬಸವಣ್ಣನವರನ್ನು ಇಷ್ಟು ಚೆನ್ನಾಗಿ ಅರ್ಥಮಾಡಿಕಡಿರುವರು. ಆದರೆ ಲಿಂಗಾಯತರೇ ಬಸವಾದಿ ಶರಣರ ವಿಚಾರಧಾರೆಗಳನ್ನು ಅರೆಮನಸ್ಕರಾಗಿ ನೋಡುತ್ತಾರೆ. ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳಲ್ಲಿ ನಾವು ರಾಜಕೀಯವನ್ನೇ ಹೆಚ್ಚು ಅವಲಂಬಿಸಲಾಗುವದಿಲ್ಲ ಮತ್ತು ಬಿಡುವಂತೆಯೂ ಇಲ್ಲ. ಆದರೂ ಎಲ್ಲಾ ಬಸವತತ್ಬಾನುಯಾಯಿಗಳು ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಿ ತಮ್ಮ ಮೇಲಿನ ಜವಾಬ್ದಾರಿಯನ್ನು ನಿಭಾಯಿಸುವ ಕರ್ತವ್ಯ ಮಾಡಿದ್ದಾರೆ, ಶರಣು ಶರಣಾರ್ಥಿಗಳು.