ನಂಜನಗೂಡು
ಪಟ್ಟಣದ ರಾಮಶೆಟ್ಟಿ ಬಡಾವಣೆಯಲ್ಲಿ ಈಚೆಗೆ ಸರ್ವಜ್ಞ ಜಯಂತಿ ಆಚರಿಸಲಾಯಿತು.
ಪ್ರಯುಕ್ತ ರಾಮಶೆಟ್ಟಿ ಬಡಾವಣೆಯ ಹೆಸರಿನ ಜೊತೆಯಲ್ಲಿ ಸರ್ವಜ್ಞ ನಗರ ಎಂದು ಹೊಸ ಹೆಸರಿನೊಂದಿಗೆ ಜಯಂತಿ ಆಚರಣೆ ಮಾಡಲಾಯಿತು.
ಕುಂಬಾರ ಸಮುದಾಯ ಭವನ ಪಕ್ಕದ ರಸ್ತೆಗೆ ಶರಣ ಕುಂಬಾರ ಗುಂಡಯ್ಯ ರಸ್ತೆ ಎಂದು ಹೊಸ ನಾಮಕರಣ ಮಾಡಿ, ಅಲ್ಲಿ ಕಲ್ಲನ್ನು ನೆಡಲಾಯಿತು.

ಈ ಎರಡು ಕಾರ್ಯಗಳು ಬಸವಾದಿ ಶರಣರ ಕಾಯಕ ಒಕ್ಕೂಟದ ಮಾರ್ಗದರ್ಶಕರಾದ ಬಸವ ಯೋಗೇಶ ಅವರ ಕೋರಿಕೆಯ ಮೇರೆಗೆ ಜರುಗಿದವು.
ರಾಮಶೆಟ್ಟಿಯ ಬಡಾವಣೆಯ ನಿವಾಸಿಗಳು, ಮಾಲಿಕರ ಸಹಕಾರ ಸಂಘದವರು, ತಾಲೂಕು ಕುಂಬಾರ ಗುಂಡಯ್ಯ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಚಿಗಳು, ನಿರ್ದೇಶಕರುಗಳು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಭಾಗಿಯಾಗಿದ್ದರು.
💐💐🙏🙏🙏🙏🙏🙏🙏
Super Yogi anna