ನಂಜನಗೂಡು:
ಸ್ಥಳೀಯ ಬಿ.ಎಂ.ಲೇಔಟ್‌ನಲ್ಲಿರುವ ಉಪನ್ಯಾಸಕ ಆರ್.ಮಂಜುನಾಥ ಹಾಗೂ ರೂಪ ಮಂಜುನಾಥ ಶರಣ ದಂಪತಿಗಳ ನಿವಾಸದಲ್ಲಿ ಈ ವರ್ಷದ ನಾಲ್ಕನೇ ಇಷ್ಟಲಿಂಗಧಾರಣೆ ಕಾರ್ಯಕ್ರಮ ಈಚೆಗೆ ಶ್ರದ್ಧಾಭಕ್ತಿಯಿಂದ ನಡೆಯಿತು.
ವಿಶ್ವ ಬಸವಸೇನೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು ೧೪ ಜನರಿಗೆ ಇಷ್ಟಲಿಂಗ ದೀಕ್ಷೆ ನೀಡಲಾಯಿತು.
ದೀಕ್ಷೆ ಪಡೆದವರಲ್ಲಿ ಪ್ರಜಾ ಟಿವಿ ಚಾಮರಾಜನಗರ ಜಿಲ್ಲಾ ವರದಿಗಾರ ರಾಮಸಮುದ್ರ ಬಾಬು ದಂಪತಿಗಳು ಪ್ರಮುಖರಾಗಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಶರಣರಾದ ಕಾ.ಸು.ನಂಜಪ್ಪನವರು ಇಷ್ಟಲಿಂಗದ ಮಹತ್ವ ಮತ್ತು ಅದರ ಆಧ್ಯಾತ್ಮಿಕ ಅರ್ಥ ಕುರಿತು ಅನುಭಾವ ನೀಡಿದರು. ಅವರ ಉಪನ್ಯಾಸವು ದೀಕ್ಷಾರ್ಥಿಗಳು ಹಾಗೂ ಭಕ್ತರಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸಿತು.
ಇದೇ ಸಂದರ್ಭದಲ್ಲಿ ವಿಶ್ವ ಬಸವಸೇನೆಯ ಅಧ್ಯಕ್ಷ ಬಸವ ಯೋಗೇಶ, ಆಯರಳ್ಳಿ ಪ್ರಭುಸ್ವಾಮಿ, ಹಂಗಳಪುರ ಸುರೇಶ, ಅನುರಾಗ ಮಕ್ಕಳ ಮನೆ ಮತ್ತು ಅಕ್ಕಮಹಾದೇವಿ ವಿಧ್ಯಾರ್ಥಿ ನಿಲಯದ ಅಧ್ಯಕ್ಷರಾದ ಚನ್ನಪ್ಪ, ವಿದ್ಯಾರ್ಥಿನಿಯರು, ಶಿಕ್ಷಕರಾದ ನಂದೀಶ್ವರ, ಮುದ್ದಹಳ್ಳಿ ಅಶೋಕ ಹಾಗು ಜ್ಯೋತಿ ಸುರೇಶ, ಪವಿತ್ರಾ ನಂದೀಶ, ಕೊಂಗಹಳ್ಳಿ ಜ್ಯೋತಿ ಅನೇಕ ಶರಣರು ಭಾಗವಹಿಸಿದ್ದರು.
ಇಷ್ಟಲಿಂಗಧಾರಣೆಯ ತತ್ವ ಹಾಗೂ ಬಸವತತ್ತ್ವದ ಅನುಸರಣೆಯ ಮಹತ್ವವನ್ನು ವಿವರಿಸಲಾದ ಕಾರ್ಯಕ್ರಮದ ಅಂತ್ಯದಲ್ಲಿ ಪ್ರಸಾದ ವಿತರಣೆ ನಡೆಯಿತು.

ಇಷ್ಟಲಿಂಗಾಧಾರಣ ಕಾರ್ಯಕ್ರಮ ಧಾರ್ಮಿಕ ಸೌಹಾರ್ದತೆ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತು ಎಂದು ಭಾಗವಹಿಸಿದವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಂಜನಗೂಡು ಬಸವಭೂಮಿಯಾಗುತ್ತಿದೆ. ಅರ್ಥಪೂರ್ಣ ಕಾರ್ಯಕ್ರಮ. ಶರಣು ಶರಣಾರ್ಥಿಗಳು 💐💐💐💐💐🙏