ನಂಜನಗೂಡು
ಪಟ್ಟಣದಲ್ಲಿರುವ ಶ್ರೀ ಗುರುಬಸವೇಶ್ವರ ಸೇವಾ ಟ್ರಸ್ಟ್ ಮತ್ತು ಗುಬ್ಬಿತೋಟದಪ್ಪ ಧರ್ಮ ಸಂಸ್ಥೆಯವರ ಸಹಯೋಗದಲ್ಲಿ ನಂಜನಗೂಡಿನಲ್ಲಿ ಲಿಂಗಾಯತ ಹೆಣ್ಣುಮಕ್ಕಳಿಗಾಗಿ ಸ್ಥಾಪಿತವಾಗಿರುವ ಜಗನ್ಮಾತೆ ಅಕ್ಕಮಹಾದೇವಿಯ ಉಚಿತ ವಿದ್ಯಾರ್ಥಿನಿಯರ ವಿದ್ಯಾರ್ಥಿನಿಲಯದಲ್ಲಿ ರಾವ್ ಬಹದ್ದೂರ್ ಧರ್ಮ ಪ್ರವರ್ತ ಗುಬ್ಬಿತೋಟದಪ್ಪರವರ ಸ್ಮರಣೋತ್ಸವ ಕಾರ್ಯಕ್ರಮ ಶುಕ್ರವಾರ ಸಂಜೆ ನಡೆಯಿತು.
ಇದೇ ಸಂದರ್ಭದಲ್ಲಿ ಗುಬ್ಬಿತೋಟದಪ್ಪರವರ ಅಗಾಧವಾದ ದೂರದೃಷ್ಟಿ ಸಮಾಜಮುಖಿ ಚಿಂತನೆಯನ್ನು ಸ್ಮರಿಸಲಾಯಿತು, ಇಂದಿಗೂ ಅವರ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆಯಲು ಇಷ್ಟಲಿಂಗದಾರಣೆ ಕಡ್ಡಾಯವಾಗಿರುವುದು ಗುಬ್ಬಿ ತೋಟದಪ್ಪರವರ ಧರ್ಮಪ್ರಜ್ಞೆಯ ನಡೆಗೆ ಸಾಕ್ಷಿಯಾಗಿದೆ ಎಂದು ತಿಳಿಸಲಾಯಿತು.

ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರ ಕುರಿತು ಮಾತನಾಡುತ್ತಾ, ನೈತಿಕ ಪ್ರಜ್ಞೆ ವಿದ್ಯಾರ್ಥಿಗಳಲ್ಲಿ ಬಂದರೆ ನಿಮ್ಮ ಬದುಕು ಸುಂದರವಾಗುತ್ತದೆಂದು ಹೆಚ್. ರಾಜು ಕೆಬ್ಬೆಪುರ ನಿವೃತ್ತ ಉಪನ್ಯಾಸಕರು ಹೇಳಿದರು.
ಲಿಂಗಾಯಿತರಲ್ಲಿ ದಾನ ಸಂಸ್ಕೃತಿ ಇಲ್ಲ, ನಮ್ಮದೇನಿದ್ದರೂ ದಾಸೋಹದ ಭಾವನೆ ಅದೇ ತರಹ ಗುಬ್ಬಿ ತೋಟದಪ್ಪರವರು ಬಸವಾದಿ ಶರಣರು ಹೇಳಿದ ದಾಸೋಹ ಭಾವನೆಯಿಂದ ಹಾಸ್ಟೆಲ್ ಗಳನ್ನು ತೆರೆದು ನಾಡಿನಾದ್ಯಂತ ನಡೆಸುತ್ತಿದ್ದಾರೆಂದು ಹೇಳುತ್ತಾ, ಎಲ್ಲಿ ಅನ್ಯಾಯ ನಡೆಯುತ್ತದೆಯೋ ಅಲ್ಲಿ ಗಣಾಚಾರ ಭಾವ ತಾಳಿ ಖಂಡಿಸುವ ಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಬಸವಾದಿ ಶರಣರ ಗಣಾಚಾರದ ಬಗ್ಗೆ ವಿವರವಾಗಿ ಶರಣ ಸಂಸ್ಕೃತಿಯ ಪ್ರಸಾರ ವೇದಿಕೆಯ ಅಧ್ಯಕ್ಷರಾದ ಕಾ.ಸು. ನಂಜಪ್ಪರವರು ಹೇಳಿದರು.

ವೇದಿಕೆಯಲ್ಲಿ ನಿವೃತ್ತ ಉಪನ್ಯಾಸಕ ಶಿವಲಿಂಗಪ್ಪ ಉಪಸ್ಥಿತರಿದ್ದರು, ಕೀರ್ತನ ಹಾಸ್ಟೆಲ್ ವಿದ್ಯಾರ್ಥಿನಿ ನಿರೂಪಣೆ ಮಾಡಿದರು, ಕವನಶ್ರೀ ವಿದ್ಯಾರ್ಥಿನಿ ಗುಬ್ಬಿತೋಟದಪ್ಪರವರ ಕಿರು ಪರಿಚಯ ಮಾಡಿದರು, ಶರಣು ಸಮರ್ಪಣೆಯನ್ನು ಹಾಸ್ಟೆಲಿನ ಅಮೃತ ಮಾಡಿದರು, ಹಾಸ್ಟೆಲ್ ಅಧ್ಯಕ್ಷ ಚನ್ನಪ್ಪರವರು ಸ್ವಾಗತ ಮಾಡಿದರು, ಬಸವಯೋಗೀಶ್ ಹಾಸ್ಟೆಲ್ನ ಕಾರ್ಯದರ್ಶಿ, ಹಾಸ್ಟೆಲ್ ಟ್ರಸ್ಟಿಗಳಾದ ಜಿ. ಬಿ. ಗುರುಪ್ರಸಾದ, ಜ್ಯೋತಿಸುರೇಶ, ಅಶೋಕ ಮುದ್ದಳ್ಳಿ, ನಂಜುಂಡಸ್ವಾಮಿ ಕೆರೆಹುಂಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.