ನಂಜನಗೂಡಿನಲ್ಲಿ ಸಂಭ್ರಮದ ಬಸವ ತತ್ವದ ಗುರುಪ್ರವೇಶ

ಸಿದ್ದೇಶ ಬಣಕಾರ
ಸಿದ್ದೇಶ ಬಣಕಾರ

ನಂಜನಗೂಡು

ತಾಲೂಕಿನ ದೇವಿರಮ್ಮನಹಳ್ಳಿ ಪಾಳ್ಯದಲ್ಲಿ ಸಾಕಮ್ಮ ಮತ್ತು ಶಾಂತಪ್ಪರವರ ಮಗ ಮತ್ತು ಸೊಸೆ ಪವಿತ್ರ-ಡಿ.ಎಸ್. ಪರಮೇಶ ರವರು ನೂತನವಾಗಿ ಕಟ್ಟಿರುವ ಮನೆಯ ಗುರುಪ್ರವೇಶವು ಬಸವತತ್ವದ ಅನುಸಾರವಾಗಿ ರವಿವಾರದಂದು ಜರುಗಿತು.

ಜಾಗತಿಕ ಲಿಂಗಾಯತ ಮಹಾಸಭಾದ ನೆರವಿನಿಂದ ನಡೆದ ಕಾರ್ಯಕ್ರಮವು ಬಸವ ಗೀತೆ ಗಾಯನ ಮತ್ತು ಷಟ್ಸ್ಥಲ ಬಸವಧ್ವಜಾರೋಹಣದ ಮೂಲಕ ಚಾಲನೆಗೊಂಡಿತು.

ಪೂಜ್ಯ ಬಸವಯೋಗಿಪ್ರಭು ಸ್ವಾಮಿಗಳು, ಸಾಕಮ್ಮ, ಪವಿತ್ರ, ಪರಮೇಶ ಹಾಗೂ ಮನೆಯಲ್ಲಿದ್ದವರಿಗೆ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಮಾಡಿಸಿ ಇಷ್ಟ ಲಿಂಗದ ಮಹತ್ವವನ್ನು ನೆರೆದಿರುವ ಬಸವಭಕ್ತರಿಗೆ ತಿಳಿಸಿದರು. ಇಷ್ಟಲಿಂಗ ಪೂಜೆಯಲ್ಲಿ ಪೂಜ್ಯ ಮೂಡಗೂರಿನ ಉದ್ದಾನೇಶ್ವರ ಸ್ವಾಮಿಗಳು ಪಾಲ್ಗೊಂಡರು.

ನೂತನ ಮನೆಯವರಿಗೆ ಸ್ವಾಮೀಜಿಗಳು ಹಾಗೂ ಎಲ್ಲಾ ಬಸವಭಕ್ತರು ಪುಷ್ಪಾರ್ಚನೆ ಮಾಡಿದರು. ಬಸವತತ್ವದ ಪ್ರಚಾರಕರಾದ ಹಲ್ಲರೆ ಶಿವಬುದ್ದಿ ಮತ್ತು ತಂಡದವರು ಕಾರ್ಯಕ್ರಮದಲ್ಲಿ ಬಸವಾದಿ ಶರಣರ ವಚನಗಳನ್ನು ಹಾಡುತ್ತಾ ವಚನ ಭಜನೆಯನ್ನು ನಡೆಸಿಕೊಟ್ಟರು.


ಕಾರ್ಯಕ್ರಮವನ್ನು ವಿಶ್ವಬಸವ ಸೇನೆಯ ಸದಸ್ಯರುಗಳು ಹಲವು ಬಸವಭಕ್ತರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರುಗಳು ಸೇರಿ ಯಶಸ್ವಿಯಾಗಿ ನಡೆಸಿಕೊಟ್ಟರು.

Share This Article
1 Comment
  • ತುಂಬ ಉತ್ತಮ ಕಾರ್ಯಕ್ರಮ ನಡೆಸಿಕೊಟ್ಟ ಎಲ್ಲ ಶರಣ ತಂಡದವರಿಗೆ ಅನಂತ ಶರಣು ಶರಣಾರ್ಥಿಗಳು.

Leave a Reply

Your email address will not be published. Required fields are marked *