ನಂಜನಗೂಡು
ನಗರದ ರಾಜಾಜಿ ಕಾಲೋನಿಯಲ್ಲಿ ಶರಣರ ಸಂಘಗಳ ಒಕ್ಕೂಟ ಹಾಗು ಆದಿ ದ್ರಾವಿಡ ಪೌರಕಾರ್ಮಿಕರ ಸಂಘದ ಸಂಯುಕ್ತ ಆಶ್ರಯದಲ್ಲಿ, 12ನೇ ಶತಮಾನದ ಶಿವಶರಣೆ ಸತ್ಯಕ್ಕ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ನಗರಸಭಾ ಸದಸ್ಯ ಪಿ. ದೇವು ಶರಣೆ ಸತ್ಯಕ್ಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, 12ನೇ ಶತಮಾನದಲ್ಲಿ ಬಸವಣ್ಣರವರ ಅನುಭವ ಮಂಟಪದಲ್ಲಿ ಪೌರಕಾರ್ಮಿಕರಾಗಿ ಕಾಯಕವನ್ನು ಮಾಡುತ್ತಿದ್ದರು, ಇವರು ಆದಿ ದ್ರಾವಿಡ ಪೌರಕಾರ್ಮಿಕರ ಜನಾಂಗದವರಾಗಿದ್ದರು.
ಮೊದಲನೇ ಬಾರಿಗೆ ನಂಜನಗೂಡಿನಲ್ಲಿ ಈ ಜಯಂತಿಯನ್ನು ಇಂದು ಸರಳವಾಗಿ ಆಚರಣೆ ಮಾಡುತ್ತಿದ್ದೇವೆ. ಮುಂದಿನ ವರ್ಷದಿಂದ ದೊಡ್ಡ ಮಟ್ಟದಲ್ಲಿ ಜಯಂತಿ ಆಚರಣೆ ಮಾಡಲು ಸಿದ್ಧತೆ ನಡೆಸುತ್ತೇವೆ ಎಂದರು.
ಶರಣ ಸಂಘಗಳ ಒಕ್ಕೂಟದ ಮಾರ್ಗದರ್ಶಕ ಬಸವ ಯೋಗೇಶ ಮಾತನಾಡಿ, ಬಸವಣ್ಣರವರ ಅನುಭವ ಮಂಟಪದಲ್ಲಿ 770 ಶರಣರು ಇದ್ದರು. ಅವರಲ್ಲಿ ಶಿವಶರಣೆ ಸತ್ಯಕ್ಕರವರು ಒಬ್ಬರಾಗಿದ್ದರು.
ಅವರು ಶಿವಮೊಗ್ಗ ಜಿಲ್ಲೆಯ ಹಿರೇ ಜಂಬೂರುನಲ್ಲಿ ಜನಿಸಿದ ಕಾರಣ ಅಲ್ಲಿ ಅವರ ಸ್ಮರಣಾರ್ಥವಾಗಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಕಲ್ಯಾಣದಲ್ಲಿ ಸ್ವಚ್ಛತಾ ಕಾಯಕವನ್ನ ಮಾಡಿಕೊಂಡು 27 ವಚನಗಳನ್ನು ರಚನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹೊರಳವಾಡಿಯ ಕಾರ್ಮಿಕ ಗುತ್ತಿಗೆದಾರರಾದ ಮಹೇಶ, ಮುದ್ದಹಳ್ಳಿ ಅಶೋಕ, ಕೆರೆಹುಂಡಿ ನಂಜುಂಡಸ್ವಾಮಿ ಮತ್ತು ರಾಜಾಜಿ ಕಾಲೋನಿ ಯಜಮಾನರಾದ ಶಿವಣ್ಣ, ಮಹದೇವ, ರಂಗ ರಾಜೇಶ ಮಂಜುನಾಥ,ಮಲ್ಲೇಶ, ನರಸಿಂಹ ಗೋಳೂರು, ಸ್ನೇಕ್ ಬಸವರಾಜು ಸೇರಿದಂತೆ ಕಾಲೋನಿಯ ನಿವಾಸಿಗಳು ಹಾಜರಿದ್ದರು.
ಎಲ್ಲಾ ಸಮಾಜದಿಂದ ಕಲ್ಯಾಣಕ್ಕೆ ಬಂದು ಅನುಭವ ಮಂಟಪದಲ್ಲಿ ಶರಣ ಧರ್ಮದ ಕಾಯಕ ದಾಸೋಹ ಸಿದ್ದಾಂತದ ಚರ್ಚೆ ಆಗುತಿತ್ತು ಅದರ ಪ್ರಭಾವವೇ ಸತ್ಯಕ್ಕನವರನ್ನ ಕಲ್ಯಾಣದ ಕಡೆಗೆ ಬರಲು ಪ್ರೇರಣೆಯಾಗಿದೆ..ಪ್ರಥಮ ಬಾರಿಗೆ ಸತ್ಯಕ್ಕರ ಜಯಂತಿಗೆ ಚಾಲನೆಯಾಗಿದೆ ಬಹಳ ಸಂತೋಷ