ನಂಜನಗೂಡು
ಬಸವ ಭಕ್ತರಾಗಿರುವ ಮಹದೇವಸ್ವಾಮಿ ನೂತನವಾಗಿ ನಿರ್ಮಿಸಿರುವ ಶ್ರೀ ಬಸವೇಶ್ವರ ಗಿಪ್ಟ್ ಮತ್ತು ಅಪ್ಲೈಯನ್ಸಸ್ ಅಂಗಡಿಯನ್ನು ಉದ್ಘಾಟನೆಯನ್ನು ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ಸೋಮವಾರ ನೆರವೇರಿಸಿದರು.
ಬಸವೇಶ್ವರ ಮತ್ತು ಅಕ್ಕಮಹಾದೇವಿ ಭಾವಚಿತ್ರಕ್ಕೆ ವಿಭೂತಿ ಧಾರಣೆ ಹಾಗೂ ಪುಷ್ಪ ವೃಷ್ಟಿ ಮಾಡುವ ಮೂಲಕ ಅತಿ ಸರಳವಾಗಿ, ಅರ್ಥಗರ್ಭಿತವಾಗಿ ಯಾವುದೇ ಆಡಂಬರವಿಲ್ಲದೆ ನಿಜಾಚರಣೆಯ ಮೂಲಕ ಕಾರ್ಯಕ್ರಮ ನಡೆಯಿತು.
ಶಿವ ಗುರುವೆಂದು ಬಲ್ಲಾತನೆ ಗುರು.
ಶಿವ ಲಿಂಗವೆಂದು ಬಲ್ಲಾತನೆ ಗುರು.
ಶಿವ ಜಂಗಮವೆಂದು ಬಲ್ಲಾತನೆ ಗುರು.
ಶಿವ ಪ್ರಸಾದವೆಂದು ಬಲ್ಲಾತನೆ ಗುರು.
ಶಿವ ಆಚಾರವೆಂದು ಬಲ್ಲಾತನೆ ಗುರು.-
ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ
ಮಹಾಮಹಿಮ ಸಂಗನಬಸವಣ್ಣನು,
ಎನಗೆಯೂ ಗುರು, ನಿನಗೆಯೂ ಗುರು,
ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ.
ಸುಖ ಒಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವುದು
ದುಃಖ ಒಂದು ಕೋಟಿ ಬಂದಲ್ಲಿ ಬಸವಣ್ಣನ ನೆನೆವುದು
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವುದು
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವುದು
ಪಾದೋದಕ ಪ್ರಸಾದವ ಕೊಂಬುವಲ್ಲಿ ಬಸವಣ್ಣನ ನೆನೆವುದು
ಬಸವಣ್ಣನ ನೆನೆದಲ್ಲದೆ ಎನಗೆ ಭಕ್ತಿ ಇಲ್ಲವಾಗಿ
ನಾನು ಬಸವಾ ಬಸವಾ ಎನುತ್ತಿರ್ದೆನಯ್ಯ ಕಲಿದೇವರದೇವಾ
ಹೀಗೆ ಅಲ್ಲಮಪ್ರಭುದೇವರ, ಮಡಿವಾಳ ಮಾಚಿದೇವರ, ಇನ್ನೂ ಹಲವಾರು ಶಿವಶರಣರ ವಚನಗಳನ್ನು ಪಠಿಸಿದರು.
ಕಾಯಕದಲ್ಲಿ ನಿಷ್ಠೆ, ಶ್ರದ್ಧೆ, ಶತತ ಪರಿಶ್ರಮದಿಂದ ಮನುಷ್ಯ ಅಭಿವೃದ್ಧಿಯತ್ತ ಸಾಗಬಹುದು. ಯಾವುದೇ ಮೂಢನಂಬಿಕೆಗಳಿಲ್ಲದೆ ಪ್ರತಿಯೊಬ್ಬ ಲಿಂಗಾಯತನು ಬಸವಾದಿ ಶರಣರ ನಿಜಾಚರಣೆಗಳನ್ನು ಆಚರಿಸಬೇಕು, ಶಿವಶರಣರ ವಚನಗಳಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು. ಎಲ್ಲರಿಗೂ ವಿಭೂತಿ ಧಾರಣೆ ಮಾಡುವುದರ ಮೂಲಕ ಆಶೀರ್ವಚನ ಮಾಡಿದರು.
ಮಹದೇವಸ್ವಾಮಿ,ಮಹೇಶ್ವರಿ, ರತ್ನಮ್ಮ, ಸಿದ್ದಾರ್ಥ,ವಚನ, ಸ್ವಾಮಿ ಹಸಗೂಲಿ, ಡೈರಿ ಶಿವಕುಮಾರ್ ,ಆನಂದ್ ಸಿದ್ದಮಲ್ಲು ಇನ್ನೂ ಹಲವಾರು ಭಕ್ತರು ಉಪಸ್ಥಿತರಿದ್ದರು.
ಶುಭವಾಗಲಿ 🌹🙏
ಶುಭವಾಗಲಿ ಗುರು ಬಸವ ತಂದೆಯು ತಮ್ಮ ಸಂಕ್ಲಪ ಹಿಡೆರಿಸಲಿ