ಬಸವಣ್ಣನವರಿಗೆ ಕಿರುಕುಳ ಕೊಟ್ಟ ಮತೀಯ ಶಕ್ತಿಗಳ ಪುಸ್ತಕ ‘ವಚನ ದರ್ಶನ’: ಗೌರಿಶಂಕರ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಪಟ್ಟಣದಲ್ಲಿ ಬಸವ ಜಯಂತಿ, ವಚನ ದರ್ಶನ ಮಿಥ್ಯ-ಸತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮ

ತಿ.ನರಸೀಪುರ

12ನೇ ಶತಮಾನದಲ್ಲೇ ಸಮ ಸಮಾಜದ ಕನಸು ಕಂಡಿದ್ದ ಬಸವಣ್ಣ ಅವರ ತತ್ವ ಮತ್ತು ಆದರ್ಶಗಳನ್ನು ತಿರುಚುವ ಹುನ್ನಾರ ಮತೀಯವಾದಿಗಳಿಂದ ನಡೆಯುತ್ತಿದೆ ಎಂದು ಮಸ್ಕಾರ ಲಿಂಗಯ್ಯನಹುಂಡಿಯ ಅಲ್ಲಮ ಪ್ರಭು ಶೂನ್ಯಪೀಠಾಧ್ಯಕ್ಷರಾದ ಶ್ರೀ ಗೌರಿಶಂಕರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಅಕ್ಕ ಮಹಾದೇವಿ ಸಹಕಾರ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಬಸವ ಜಯಂತಿ ಮತ್ತು ವಚನ ದರ್ಶನ ಮಿಥ್ಯ-ಸತ್ಯ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣನವರಿಗೆ ಯಾರು ಕಿರುಕುಳ ಕೊಟ್ಟರೋ, ಅದೇ ಮತೀಯವಾದಿ ಶಕ್ತಿಗಳು ವಚನ ದರ್ಶನ ಪುಸ್ತಕ ಹೊರತಂದಿದ್ದಾರೆ. ಬಸವಣ್ಣ ಅವರು ಅನುಭವ ಮಂಟಪದ ಮುಖೇನ ಸಮಾಜದ ಎಲ್ಲ ಸಮುದಾಯದ ಜನರನ್ನು ಮುಖ್ಯವಾಹಿನಿಗೆ ತಂದು ಸಾಮಾಜಿಕ ಕ್ರಾಂತಿಗೆ ಹೆಸರಾಗಿದ್ದರು.

ಅಂದಿನ ಕಾಲಘಟ್ಟದಲ್ಲಿ ಬಸವಣ್ಣ ಅವರ ಸಾಮಾಜಿಕ ಚಳುವಳಿಯನ್ನು ವಿರೋಧಿಸಿದ್ದ ಜನರು ಇಂದು ಕೂಡ ಅವರ ತತ್ವಗಳ ಜನಪ್ರಿಯತೆಯಿಂದ ತಮ್ಮ ವೇದ, ಉಪನಿಷತ್ ಮತ್ತು ಆಗಮ ಪರಂಪರೆ ನಶಿಸುವ ಭೀತಿಯಿಂದ ಬಸವಣ್ಣ ಅವರ ತತ್ವ ಮತ್ತು ಅದರ್ಶಗಳನ್ನು ತಿರುಚುವ ಮತ್ತು ಅನ್ಯರೂಪ ನೀಡುವ ಕೃತ್ಯಕ್ಕೆ ಕೈ ಹಾಕಿದ್ದಾರೆ.

ಸಮಾಜ ಎಲ್ಲ ಸಮುದಾಯಗಳು ಸಹಬಾಳ್ವೆಯಲ್ಲಿ ಒಂದಾಗುವುದನ್ನು ತಪ್ಪಿಸಲು ವೈದಿಕ ಸಂಸ್ಕೃತಿ ಆರಾಧಕರು ಈ ಕೃತ್ಯಕ್ಕೆ ಕೈಹಾಕಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾಧ್ಯಕ್ಷ ಮಹಾದೇವಪ್ಪ ಈಗ ಶರಣ ಮಾರ್ಗದಲ್ಲಿ ನಡೆಯುತ್ತಿರುವ ಲಿಂಗಾಯತರನ್ನು ಹೇಗಾದರೂ ಮಾಡಿ ಹಿಂದೂ ಅಥವಾ ವೈದಿಕ ಪರದಿಯಲ್ಲಿ ತರಬೇಕೆಂಬ ದುರುದ್ಧೇಶದಿಂದ ಸಂಘ ಪರಿವಾರ ವಚನ ದರ್ಶನ ಪುಸ್ತಕ ಹೊರತಂದಿದೆ ಎಂದು ಹೇಳಿದರು.

ಕೆಲವು ರಾಜಕೀಯ ಬುದ್ದಿಯ ಲಿಂಗಾಯತ ಮಠಾಧೀಶರು ಮತ್ತು ಮೂಲತಃ ವೈದಿಕರಾಗಿದ್ದ ವೀರಶೈವರು ಸಂಘ ಪರಿವಾರಕ್ಕೆ ಬೆಂಬಲ ನೀಡುತ್ತಿರುವುದು ವಿಷಾದನೀಯ ಎಂದರು.

ಪ್ರಪಂಚದ ಪ್ರವಾದಿಗಳಲ್ಲಿ ವಿಶ್ವಗುರು ಬಸವಣ್ಣನವರಿಗೆ ತಮ್ಮದೇ ಆದ ಒಂದು ವಿಶಿಷ್ಟ ಸ್ಥಾನವಿದೆ. ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯಾಗಿ ಕಾರ್ಯ ಮಾಡದೆ ಅವರೊಬ್ಬ ಸಮೂಹ ಶಕ್ತಿಯಾಗಿ ಕ್ರಾಂತಿ ಮಾಡಿದರು ಎಂದು ಹೇಳಿದರು.

ತಾಲೂಕು ಅಧ್ಯಕ್ಷ ತೊಟ್ಟವಾಡಿ ಎಂ.ರವಿ ಮಾತನಾಡಿ, ದೇವರು ಎಂದರೆ ದೇಹ, ವರ್ಣ ಮತ್ತು ರೂಪ ಇಲ್ಲದವನು ಎಂದರ್ಥ. ಆದರೆ, ಇಂದಿನ ಸಮಾಜದಲ್ಲಿ ದೇವರಿಗೆ ನಾನಾ ರೂಪ, ಬಣ್ಣ ಮತ್ತು ಆಕಾರಗಳನ್ನು ನೀಡಿ ಕಂದಾಚಾರ, ಮೌಡ್ಯ, ವಿಗ್ರಹ ಪೂಜೆಯನ್ನು ಅನುಸರಿಸಲಾಗುತ್ತಿದೆ. ಬಸವಣ್ಣ ಅವರು ವ್ಯಕ್ತಿ ಮತ್ತು ವಿಗ್ರಹ ಪೂಜೆ ಖಂಡಿಸಿದ್ದರು. ಹಾಗಾಗಿ ಲಿಂಗಾಯತ ಸಮುದಾಯದ ಜನರು ತಾವು ಮೌಡ್ಯಗಳ ಆಚರಣೆ ಕಾಯಕದಲ್ಲಿ ತೊಡಗದೆ ಬಸವ ತತ್ವವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಜ್ಯೋತಿ ಪರಮೇಶ್ ನಿರೂಪಿಸಿದರು. ಸಂದರ್ಭದಲ್ಲಿ ಜಿಲ್ಲಾ ಜಾಗತಿಕ
ಲಿಂಗಾಯತ ಮಹಾಸಭಾದ 29.00. ಮರಪ್ಪ, ಕಾ.ಸು. ನಂಜಪ್ಪ, ಗಂಗಾಧರಸ್ವಾಮಿ, ಚಂದ್ರಶೇಖರಯ್ಯ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆಬ್ಬೆಹುಂಡಿ ಸೋಮಶೇಖರಪ್ಪ, ಬಸವ ತತ್ವ ಪ್ರಚಾರಕ ಚೌಹಳ್ಳಿ ಲಿಂಗರಾಜಪ್ಪ, ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ತುಂಬಲ ನಾಗರಾಜು, ಬಸವ ಕೇಂದ್ರದ ಅಧ್ಯಕ್ಷ ಪರಮೇಶ್ ಪಟೇಲ್, ಅಲವಾರ ಶಿಕ್ಷಕಿ ಜ್ಯೋತಿ ಪರಮೇಶ್., ಗೌರವ ಪ್ರಧಾನ ಸಂಚಾಲಕ ಡಿ.ಎಲ್‌.ಮಹದೇವಪ್ಪ, ತಲಕಾಡು ಹೋಬಳಿ ಅಧ್ಯಕ್ಷ ವೀರೇಶ್, ಮೂಗೂರು ಅಧ್ಯಕ್ಷ ಕೆ. ಎಸ್. ಶಿವಕುಮಾರ್, ಸೋಸಲೆ ಗೌ. ಬಸವರಾಜಪ್ಪ, ನಿರ್ದೇಶಕರಾದ ಕೆ. ಎಸ್‌. ಮಹದೇವಸ್ವಾಮಿ, ನಾಗಪ್ಪ, ವಿರೂಪಾಕ್ಷ, ಮಹೇಶ್, ಓಂಕಾರಸ್ವಾಮಿ, ಹರೀಶ್‌, ಷಡಕ್ಷರಿ, ಸತೀಶ್ ಇತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *