ರಾಯಚೂರು
ಮಹಾತ್ಮ ಬಸವೇಶ್ವರರಿಗೆ ಮನುಕುಲದ ಕಲ್ಯಾಣ ಮುಖ್ಯವಾಗಿತ್ತು. ನಾವುಗಳು ಬಸವಣ್ಣನವರ ಶರಣ ಪರಂಪರೆಯ ಉತ್ತರಾಧಿಕಾರಿಗಳು. ನಾವು ಶರಣರ ಅಮೂಲ್ಯ ತತ್ವವಾದರ್ಶಗಳನ್ನು ಮರೆತರೆ ಸಮಾಜದಲ್ಲಿ ಗೌರವ ಪಡೆಯಲು ಸಾಧ್ಯವಾಗುವುದಿಲ್ಲ. ಭಾರತ ದೇಶದಲ್ಲಿ ನಮಗೆ ಗೌರವವಿದ್ದರೆ ಅದು ಬಸವಾದಿ ಶರಣರ ಆದರ್ಶಗಳಿಂದ ಮಾತ್ರ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು.
ಜಿಲ್ಲಾ ಬಸವ ಕೇಂದ್ರಕ್ಕೆ ಪ್ರಥಮ ಭಾರಿ ಆಗಮಿಸಿದ ಸಂದರ್ಭದಲ್ಲಿ ಬಸವ ಕೇಂದ್ರದ ಪದಾಧಿಕಾರಿಗಳು, ಮಹಾಸಭಾದ ರಾಯಚೂರು ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು ನೀಡಿದ ಗೌರವಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಬುದ್ಧ-ಬಸವ-ಅಂಬೇಡ್ಕರ್ ಅವರುಗಳು ಸಮಾಜಕ್ಕೆ ನೀಡಿದ ತತ್ವಾದರ್ಶಗಳನ್ನು ತಿಳಿದುಕೊಂಡು, ನಾವು ಜಾತಿ, ಮತ, ಪಂಥಗಳನ್ನು ಬದಿಗಿಟ್ಟು ಸಂಘಟಿತರಾಗಿ ಬಾಳಲು ಏನು ಮಾಡಬೇಕೆಂಬ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಾಗಿದೆ. ಯಾವ ತತ್ವದಲ್ಲಿ ಸತ್ಯ-ಸತ್ವ ಇದೇ ಎಂಬುದನ್ನು ಅರಿತುಕೊಂಡು ಜೀವನ ಸಾಗಿಸಿದಲ್ಲಿ ಮಾತ್ರ ಬದುಕು ಸಾರ್ಥಕ. ಮಕ್ಕಳಿಗೆ ಉತ್ತಮ ಶಿಕ್ಷಣ, ನೈತಿಕ ಮೌಲ್ಯಗಳನ್ನು ಹೇಳಿಕೊಟ್ಟು ಉತ್ತಮ ಪ್ರಜೆಗಳನ್ನಾಗಿ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆಯೆಂದು ಬಿದರಿ ಹೇಳಿದರು.
ಪರಮೇಶ್ವರ ಸಾಲಿಮಠ ಅವರು ಬಿದರಿ ಅವರಿಗೆ ನೀಡಿದ ಸನ್ಮಾನ ಪತ್ರ ಓದಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ, ಮಹಾಸಭಾ ಉಪಾಧ್ಯಕ್ಷರು ಹಾಗೂ ಶ್ರೀ ಚಂದ್ರಶೇಖರ ಮಿರ್ಜಾಪುರ, ಜಿಲ್ಲಾಧ್ಯಕ್ಷರು, ಮಹಾಸಭಾ ಇವರುಗಳು ಮಾತನಾಡಿ, ಶರಣರ ಆಶಯದಂತೆ ನಾವೆಲ್ಲ ಸಂಘಟಿತರಾದಲ್ಲಿ ಮಾತ್ರ ಜಾಗತಿಕಮಟ್ಟದಲ್ಲಿ ನಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವೆಂದರು.

ಅಧ್ಯಕ್ಷತೆಯನ್ನು ಶ್ರೀ ರಾಚನಗೌಡ ಕೋಳೂರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಾಸಭಾದ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು, ಬಸವ ಕೇಂದ್ರದ ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.
ವಚನ ಪ್ರಾರ್ಥನೆಯನ್ನು ಚಿದಾನಂದ ನುಲಿ ಅವರು ಮಾಡಿದರು. ಜೆ. ಬಸವರಾಜ, ವಕೀಲರು ಸ್ವಾಗತಿಸಿದರು. ಸಿ. ಬಿ. ಪಾಟೀಲ ವಕೀಲರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಚನ್ನಬಸವ ಇಂಜಿನಿಯರ್ ವಂದಿಸಿದರು.


ಶಂಕರ್ ಬಿದರಿಯವರು ಬಸವಣ್ಣನವರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿರುವುದು ಸಂತೋಷ. ಆದರೆ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯಕ್ರಮಗಳಲ್ಲಿ ಒಂದು ರೀತಿ ಹೇಳಿಕೆ ನೀಡುವುದು. ಲಿಂಗಾಯತ ಪರ ಕಾರ್ಯಕ್ರಮಗಳಲ್ಲಿ ಒಂದು ರೀತಿ ಹೇಳುವುದನ್ನ ಬಿಟ್ಟರೆ ಒಳ್ಳೆಯದು. ಯಾವುದೇ ಕಾರ್ಯಕ್ರಮವಿರಲಿ ಗಟ್ಟಿತನದಿಂದ ಬಸವಣ್ಣನವರ ಸಿದ್ದಾಂತದ ಮತ್ತು ಲಿಂಗಾಯತ ಧರ್ಮದ ಪರ ನಿಲುವಿಗೆ ಬದ್ಧತೆ ತೋರಬೇಕು. ಬಿದರೆಯವರಿಗೆ ಬಸವಾದಿಪ್ರಮಥರ ಆಶೀರ್ವಾದವಿರಲಿ
👍👌👌👍
ಬಸವಣ್ಣನವರ ಉತ್ತರಾಧಿಕಾರಿಗಳು ಅಂತ ಹೇಳಿದ್ದು ಸ್ವಾಗತಾರ್ಹ. ಆದರೆ, ವೀರಶೈವ ಲಿಂಗಾಯತ ಮಹಾಸಭೆ ಮೊದಲು ಬಸವ ಪ್ರಣೀತ ಲಿಂಗಾಯತ ಧರ್ಮಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಷಿಸಲಿ. ಹೇಳಿಕೆಗಳು ಕೇವಲ ವೇದಿಕೆಯ ಮೇಲಿನ ಹೇಳಿಕೆಗಳಾಗಬಾರದು ಮತ್ತು ಲಿಂಗಾಯತರನ್ನು ತಪ್ಪುದಾರಿಗೆ ಎಳೆಯಬಾರದು.
ಅಭಾವೀ ಮಹಾಸಭಾ ಪಂಚ ಪೀಠಾಚಾರ್ಯರಿಗೆ ಮೊದಲು ಲಿಂಗಾಯತ ಧರ್ಮ ಬಸವಣ್ಣನವರಿಂದ ಉದಯಿಸಲ್ಪಟ್ಟಿದ್ದು, ಈ ಧರ್ಮದಲ್ಲಿ ನ ನೂರೆಂಟು ಕಾಯಕ ಪಂಗಡಗಳಂತೆ ವೀರಶೈವವೂ ಒಂದು ಎಂಬುದನ್ನು ಕಾಯಾ ವಾಚಾ ಮನಸಾ ಒಪ್ಪಿಕೊಂಡು ಅದರಂತೆ ಭಕ್ತಾಧಿಗಳಿಗೆ ಮನವರಿಕೆ ಮಾಡಿಸಲು ಹಾಗೂ ವೀರಶೈವ ಧರ್ಮ… ವೀರಶೈವರು ಹಿಂದೂಗಳು ಎನ್ನುವುದನ್ನು ಬಿಡಲು ತಿಳಿ ಹೇಳಿ. ಇದು ಕಾರ್ಯಗತವಾದಲ್ಲಿ ನೀವು ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವುದು ಸಾರ್ಥಕವಾದಂತೆ!
ಒಳಗೆ ಕುಟೀಲ ಬುದ್ಧಿ,,, ಹೊರಗೆ ತೋರಿಕೆ ಮಾತುಗಳು ಆದರೆ ಪಕ್ಕಾ ಬಸವ ಭಕ್ತರಾಗಲು ನಾಲಾಯಕ್ ಏನಿಸಿಕೊಳ್ಳತ್ತಾರೆ,,,,,ಯಾರೇ ಆದರೂ,,,,,,, ದ್ವಂದ್ವ ನೀತಿ ಪಾಠ ಆಗಬಾರದು.., ಬಸವಣ್ಣನವರಿಗೆ ಮತ್ತು ಬಸವಾದಿ ಶಿವಶರಣರಿಗೆ ಸಲ್ಲುವುದಿಲ್ಲ…. ತಮ್ಮನ್ನು ತಾವು ಮಾರಿಕೊಳ್ಳುಬಾರದು… ತಮ್ಮ ಸ್ವಾರ್ಥಕ್ಕಾಗಿ. ಮಾರಿಕೊಂಡರೆ… ಇದು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಹಾಗೂ ಕುಟುಂಬ, ಸಮಾಜವನ್ನು,,,, ಮಾರಿದಂತೆ,,,,,!,, ಆದರೆ ಬಸವಾದಿ ಶಿವಶರಣರು ಯಾವಾಗಲೂ ಅಜರಾಮರು,ಅಜಮಾರರಾಗಿತ್ತಾರೆ….. ಜೈ ಬಸವಣ್ಣನವರು…….. ಬುದ್ಧ.ಬಸವ.ಬಾಬಾ ಸಾಹೇಬ್ ಅಂಬೇಡ್ಕರ್ ಸರ್….ತತ್ವ ಸಿದ್ಧಾಂತಗಳನ್ನು ತಿಳಿದು ಕೊಳ್ಳಬೇಕು…..
ಶಂಕರ ಬಿದರಿಯವರು ತಮ್ಮ ಹೇಳಿಕೆಯಂತೆ ಬಸವಣ್ಣನವರ ಪರಂಪರೆಯವರಾಗಿ ಬಸವ ಸಂಧೇಶ ಪ್ರಚಾರಕಾಯ೯ ಆರಂಬಿಸಲಿ ಮಥು ಮುೊಂದಿನ ಸಮಾಜದ ಮಕ್ಕಳ ಅಭಿವೃದ್ದಿಗಾಗಿ ಲಿಂಗಾಯತ ಧಮ೯ದ ಮಾನ್ಯತೆ ಪಡೆಯಲು ಜಾಗತಿಕ ಲಿಂಗಾಯತ ಮಹಾಸಭಾದೊಂದಿಗೆ ಜೋತೆಗೆ ಕೈಜೋಡಿಸಲಿ
ವೀರಶೈವ ಮಹಾಸಭಾ ಮೊದಲು ಲಿಂಗಾಯತ ಮಹಾಸಭಾವೆಂದು ಪೂರ್ಣ ಹೆಸರು ಬದಲಾಯಿಸಿಕೊಳ್ಳುವ ಅಗತ್ಯವಿದೆ. ತದ ನಂತರವೆ ಮುಂದಿನ ಮಹಾಕಾರ್ಯಕ್ಕೆ ಪ್ರಥವೊಂದು ತೆರೆಯುವುದು.
ಬಸವಾದಿ ಶರಣರು ತಮ್ಮ ಪ್ರಖರವಾದ ಚಿಂತನೆಗಳ ಮೂಲಕ, ಮಾನವ ಕುಲ ಕೋಟಿಯನ್ನ , ಹೋಮ ಹವನ ಪಂಚಾಂಗ ವರ್ಣ ಆಶ್ರಮಗಳ ಕೋಟಲೆಗಳಿಂದ ಹೊರಗೆ ತಂದು ಹೊಸ ಧರ್ಮ ನೀಡಿದರು ಇಂದು ನಮ್ಮ ಆ ಹೊಸ ಧರ್ಮವನ್ನೆ ಹೊಸೆದು ಹಾಕುವ ಹುಸಿ ಪ್ರಯತ್ನಗಳು ನಡೆಯುವಾಗ ಈ ಮಹಾಸಭಾದವರು ಮೌನವಾಗಿ ಕುಳಿತಿರುವುದು ಕಂಡರೆ ನಮಗೆ ಬೇಸರವಾಗುತ್ತದೆ. ಆಳಬೇಕಾದ ನಾವು ಆಳಾಗಲು ಹೊರಟಿರುವುದು ಅರ್ಥವಿಲ್ಲದ ಆಹಂಕಾರ, ಅರೆಪ್ರಜ್ಞೆ, ಆಮೀಷಗಳೆ ಕಾರಣ
F you read his biography. You can notice that he worships innumerable swamijis and gods.. sir our Basava philosophy is Monotheism. If Mr. Shankar Bidari the follower of Basavanna. or polytheism? We want to know Sir.
ಶಂಕರ್ ಬಿದರಿ ಅವರು ಪಂಚಾಚಾರ್ಯರ ಪಾದಸೇವಕರು. ಪಂಚಾಚಾರ್ಯರು ಬಸವದ್ರೋಹಿಗಳು. ಶಂಕರಬಿದರಿ ಅವರ ಮಾತು ನಾಟಕೀಯ ಮತ್ತು ಕೃತ್ರಿಮ.
ಇಂಥಾ ಬೆಲ್ಲದ ಮಾತುಗಳನ್ನು 12 ನೇ ಶತಮಾನದಿಂದ ಕೇಳತಾ ಬಂದಿದೀವಿ. ಹಾಗಾದರೆ ಅಯೋನಿಜ ರೇಣುಕರನ್ನು ಕಿತ್ತೆಸೆದು ಬಸವಣ್ಣನವರನ್ನು ಗುರುಗಳೆಂದು ಒಪ್ಪಿಕೊಂಡು ಲಿಂಗಾಯತರಾಗಿ. ಅದು ಬಿಟ್ಟು appeasement ಬೇಡಾ.