ಪಂಡರಪುರ ತಾಲೂಕಿನಲ್ಲಿ ವಚನಕಾರ ಅಮುಗಿದೇವರ ಹೊಸ ಶಾಸನ ಪತ್ತೆ

ಪುಳುಜ ಗ್ರಾಮ

ಸೋಲಾಪುರ ಜಿಲ್ಲೆಯ ಪಂಡರಪುರ ತಾಲೂಕಿನ ಪುಳುಜ ಗ್ರಾಮದ ಲಿಂಗೇಶ್ವರ ದೇವಾಲಯದ ದಕ್ಷಿಣ ದಿಕ್ಕಿನಲ್ಲಿರುವ ಶಿವಮಂದಿರದ ಅಂತರಾಳದ ಪ್ರವೇಶ ದ್ವಾರದ ಕಂಬದ ಮೇಲೆ ಕೊರೆದಿರುವ ಎರಡು ಕನ್ನಡ ಶಾಸನಗಳು ಪತ್ತೆಯಾಗಿವೆ.

ಇವುಗಳಲ್ಲಿ ವಚನಕಾರರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿದೆ.

ಮೊದಲನೇ ಶಾಸನದಲ್ಲಿ ವಚನಕಾರ ಅಮುಗಿದೇವರ ಪ್ರಿಯ ಪುತ್ರ ಪಥರಟ ಸಂಗಯ್ಯನು ಮಂಗಳವೇಡದವನು ಎಂಬ ಉಲ್ಲೇಖವಿದೆ. ಪುಳುಜ ಗ್ರಾಮದಲ್ಲಿ ಜರುಗುತ್ತಿದ್ದ ಜಾತ್ರೆ, ಅನೇಕ ವ್ಯಕ್ತಿಗಳ ಹೆಸರು ಮತ್ತು ಅವರ ಗ್ರಾಮಗಳನ್ನು ಸಹ ಇಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಶಾಸನವು 19 ಸಾಲುಗಳನ್ನು ಒಳಗೊಂಡಿದ್ದು 46 ಸೆಂಟಿಮೀಟರ್ ಎತ್ತರ ಮತ್ತು 34.5 ಸೆಂಟಿಮೀಟರ್ ಅಗಲವಿದೆ. ಎರಡನೆಯ ಶಾಸನವು 16 ಸಾಲುಗಳನ್ನು ಒಳಗೊಂಡಿದ್ದು 41 ಸೆಂಟಿಮೀಟರ್ ಎತ್ತರವಾಗಿದ್ದು 32 ಸೆಂಟಿಮೀಟರ್ ಅಗಲವಾಗಿದೆ .

ಈಗಾಗಲೇ ಪುಳುಜ ಗ್ರಾಮದ ಒಂದು ಶಾಸನವನ್ನು ಶೋಧಿಸಿ ಪ್ರಕಟಿಸಲಾಗಿದೆ. ಅದು ಯಾದವಸಿಂಘಣ ಅಮುಗಿದೇವನಿಗೆ ದಾನ ಕೊಟ್ಟುದನ್ನು ಉಲ್ಲೇಖಿಸುತ್ತದೆ.

ಈಗ ಇನ್ನೆರಡು ಶಾಸನಗಳು ಬಳಕೆಗೆ ಬಂದಿರುವುದು ತುಂಬಾ ಮಹತ್ವದ ವಿಷಯವಾಗಿದೆ. ಈಗಾಗಲೇ ಇದು ಮರಾಠಿ ವೃತ್ತ ಪತ್ರಿಕೆಗಳಲ್ಲಿ ಈ ವಿಷಯ ಪ್ರಕಟವಾಗಿದ್ದು ಕನ್ನಡ ಪತ್ರಿಕೆಗಳಲ್ಲಿ ಬರದೇ ಇರುವುದು ದುರ್ದೈವದ ಸಂಗತಿ.

ಇಂಥ ಮಹತ್ವದ ಶಾಸನವನ್ನು ಸಂಶೋಧಿಸಿ ಬಳಕೆಗೆ ತಂದವರು ಸಂಶೋಧಕ ಕೃಷ್ಣ ಗುಡದೆ. ಈ ಶಾಸನವನ್ನು ಓದಿದವರು ಡಾ. ದೇವರಕೊಂಡ ರೆಡ್ಡಿ. ಅವರ ಸಂಶೋಧನೆಯಲ್ಲಿ ರವಿಕುಮಾರ್ ನವಲಗುಂದ, ಡಾ. ಸುಜಾತಾ ಶಾಸ್ತ್ರಿ ಮತ್ತು ಸಾಗರ ಸುತಾರ್,ಸೋಮನಾಥ ವಾಗ್ಮಾರೇ ಹಾಗು ಪೂಜಾರಿ ನಾನಾದೇವ್ ಮಹಾಮನೆ ಸಹಕರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
1 Comment

Leave a Reply

Your email address will not be published. Required fields are marked *