ಬೀದರ ಬಸವ ಕೇಂದ್ರ ಬೆಳ್ಳಿಹಬ್ಬ: ನಿಜಗುಣಾನಂದ ಶ್ರೀಗಳಿಂದ ಒಂದು ತಿಂಗಳು ಪ್ರವಚನ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ಇಲ್ಲಿನ ಬಸವ ಕೇಂದ್ರದ ವತಿಯಿಂದ ಮಾರ್ಚ್ 15ರಿಂದ ಏಪ್ರಿಲ್ 13ರ ವರಗೆ ಬಸವಕೇಂದ್ರದ ಬೆಳ್ಳಿ ಮಹೋತ್ಸವದ ಪ್ರಯುಕ್ತ “ಭವ್ಯ ಭಾರತದ ಬಸವಣ್ಣ” ಪ್ರವಚನವನ್ನು ಆಯೋಜಿಸಲಾಗಿದೆ.

ಪ್ರವಚನವನ್ನು ಬೈಲೂರು-ಮುಂಡರಗಿ ಶ್ರೀ ತೋಂಟದಾರ್ಯ ಮಠದ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು ನಡೆಸಿಕೊಡಲಿದ್ದಾರೆ.

ಉತ್ಸವದಲ್ಲಿ ಪ್ರತಿದಿನ ಮುಂಜಾನೆ 8ರಿಂದ 10 ಗಂಟೆಯವರಗೆ ಗ್ರಾಮದಲ್ಲಿ ಬಸವ ಸಂದೇಶ ಯಾತ್ರೆ 25 ಗ್ರಾಮಗಳಲ್ಲಿ ನಡೆಯಲಿದ್ದು,  ಮಾ. 22 ರಂದು ಮುಂಜಾನೆ 9ಕ್ಕೆ ಮಕ್ಕಳ ಶಿಬಿರ, ಮಾ. 29ರಂದು ಮುಂಜಾನೆ 9ಕ್ಕೆ ವಿದ್ಯಾರ್ಥಿಗಳ ಕಾರ್ಯಾಗಾರ, ಏ. 2ರಂದು ಮುಂಜಾನೆ 8ಕ್ಕೆ ಅಕ್ಕಮಹಾದೇವಿ ಜಯಂತಿ, ಮೆರವಣಿಗೆ, ಏ. 5 ರಂದು ಬೆಳಿಗ್ಗೆ 9ಕ್ಕೆ ಬಸವಕೇಂದ್ರ ಪದಾಧಿಕಾರಗಳ ಕಾರ್ಯಾಗಾರ ಹಾಗೂ ಏ. 11, 12 ಮತ್ತು 13 ರಂದು ಮುಂಜಾನೆ 7 ಕ್ಕೆ ಸಹಜ ಶಿವಯೋಗ, ಸಂಜೆ 6ಕ್ಕೆ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅಧ್ಯಕ್ಷರು, ಪದಾಧಿಕಾರಿಗಳು ಪ್ರವಚನ ಸ್ವಾಗತ ಸಮಿತಿ ಸರ್ವರಿಗೂ ಸ್ವಾಗತ ಕೋರಿದೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
3 Comments

Leave a Reply

Your email address will not be published. Required fields are marked *