ವಚನ ಪಠಣ ಮೂಲಕ ಒಂದು ತಿಂಗಳ ಪ್ರವಚನದ ಉದ್ಘಾಟನೆ
ಬೀದರ್
ನಗರದ ಬಸವಕೇಂದ್ರದ ಬೆಳ್ಳಿ ಮಹೋತ್ಸವ ನಿಮಿತ್ತ ಭಾನುವಾರ ಸಂಜೆ ಪೂಜ್ಯ ನಿಜಗುಣಾನಂದ ಸ್ವಾಮಿಜಿ ‘ಭವ್ಯ ಭಾರತದ ಬಸವಣ್ಣ’ ವಿಷಯದ ಕುರಿತು ನೀಡಲಿರುವ ಪ್ರವಚನದ ಉದ್ಘಾಟನಾ ಸಮಾರಂಭ ಜರುಗಿತು.
ಪ್ರವಚನ ಕಾರ್ಯಕ್ರಮವನ್ನು ಪೂಜ್ಯ ಡಾ ಬಸವಲಿಂಗ ಪಟ್ಟದ್ದೆವರು ಅವರ ದಿವ್ಯ ಸಾನಿಧ್ಯದಲ್ಲಿ ಅರಣ್ಯ ಸಚಿವರಾದ ಶರಣ ಈಶ್ವರ ಖಂಡ್ರೆ ಅವರು ವಚನ ಪಠಣ ಮಾಡುವದರ ಮುಖಾಂತರ ಉದ್ಘಾಟಿಸಿದರು.

ಇಲ್ಲಿನ ಬಿ.ವಿ ಭೂಮರೆಡ್ಡಿ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಈಶ್ವರ ಖಂಡ್ರೆ
ನಿಜಗುಣಾನಂದ ಸ್ವಾಮೀಜಿ ಒಂದು ತಿಂಗಳ ಕಾಲ
ನೀಡಲಿರುವ ‘ಭವ್ಯ ಭಾರತದ ಬಸವಣ್ಣ ಪ್ರವಚನ’ ಕೇಳಿ ನಾವು ಬದಲಾವಣೆಯಾಗಬೇಕು, ಬಸವಣ್ಣನವರ ತತ್ವಗಳನ್ನು ಹಾಗೂ ಒಳ್ಳೆಯತನವನ್ನು ಅಳವಡಿಸಿಕೊಂಡು ವಿಶ್ವಕ್ಕೆ ಮಾದರಿ ಆಗಬೇಕು ಎಂದು ಕರೆ ನೀಡಿದರು.
ಜಗತ್ತಿನಲ್ಲಿರುವ ಅಶಾಂತಿಗೆ ಪರಿಹಾರ ಬಸವತತ್ವದಲ್ಲಿದೆ. ಬಸವಾದಿ ಶರಣರ ತತ್ವಾದರ್ಶಗಳು ಇಂದಿಗೂ ಮುಂದೆಯೂ ಪ್ರಸ್ತುತ, ಎಂದು ಹೇಳಿದರು.
ಪ್ರವಚನ ಉದ್ಘಾಟನಾ ಕಾರ್ಯಕ್ರಮ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಹುಲಸೂರು ಮಠದ ಶಿವಾನಂದ ಮಹಾಸ್ವಾಮಿಗಳು, ಲಿಂಗಾಯತ ಮಹಾಮಠದ ಪ್ರಭುದೇವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಿತು.

ಬಸವಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಎಚ್ಕೆಇ ಸಂಸ್ಥೆಯ ಆಡಳಿತ ಕಾರ್ಯಕ್ರಮ ಮಂಡಳಿ ಸದಸ್ಯ ಡಾ. ರಜನೀಶ ವಾಲಿ, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಕಾರ್ಯನಿರತ ಪತ್ರಕರ್ತರ ಜಿಲ್ಲಾಧ್ಯಕ್ಷ ಆನಂದ ದೇವಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ್, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಜಯರಾಜ್ ಖಂಡ್ರೆ, ಬಸವಕೇಂದ್ರ ಟ್ರಸ್ಟ್ ಅಧ್ಯಕ್ಷ ಪ್ರಭುರಾವ್ ವಸ್ಥತೆ, ಲಿಂಗಾಯತ ಮಹಾಸಭಾ ಅಧ್ಯಕ್ಷ ಕುಶಾಲ ಪಾಟೀಲ್ ಖಾಜಾಪೂರ್, ಸರ್ಕಾರಿ ನೌಕರರ ಸಂಘಧ ಜಿಲ್ಲಾಧ್ಯಕ್ಷ ರಾಜೇಂದ್ರ ಕುಮಾರ ಗಂದಗೆ, ಬಸವ ಬ್ರಿಗೇಡ್ ಬಸವರಾಜ ಪಾಟೀಲ್ ಹಾರೂರಗೇರಿ, ಮಹಿಳಾ ಬಸವಕೇಂದ್ರದ ಅಧ್ಯಕ್ಷರಾದ ಡಾ. ವಿದ್ಯಾವತಿ ಬಲ್ಲೂರ್ ಉಪಸ್ಥಿತರಿದ್ದರು.


ಯುವ ಬಸವ ಕೇಂದ್ರದ ಅಧ್ಯಕ್ಷ ಸುರೇಶ ಚನಶೆಟ್ಟಿ ಸ್ವಾಗತಿಸಿ ಬಸವ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶಿವಶಂಕರ ಟೋಕರೆ ನಿರೂಪಿಸಿದರೆ ಬಾಬುರಾವ್ ದಾನಿ ವಂದಿಸಿದರು.

ಮಾ.16ರಿಂದ ಆರಂಭವಾಗಿ ಏಪ್ರಿಲ್ 13ರವರೆಗೆ ನಡೆಯುವ ಈ ಪ್ರವಚನ ಕಾರ್ಯಕ್ರಮದಲ್ಲಿ ಬಸವ ಭಕ್ತರೆಲ್ಲರೂ ಆಗಮಿಸುವಂತೆ ಆಯೋಜಕರು ಮನವಿಸಿದ್ದಾರೆ. ಪ್ರವಚನ ಬಿವಿ ಭೂಮರೆಡ್ಡಿ ಕಾಲೇಜು ಆವರಣದಲ್ಲಿ ನಿತ್ಯ ಸಂಜೆ 6.30ರಿಂದ 8ರವರೆಗೆ ನಡೆಯಲಿದೆ.

💐
ನೀಜಗುಣಾನಂದ ಸ್ವಾಮೀಜಿಯ ಪ್ರವಚನ ಕಾರ್ಯಕ್ರಮ ಇತಿಹಾಸದ ಪುಟಗಳಲ್ಲಿ ದಾಖಲಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ.