ನಿಜಶರಣ ಅಂಬಿಗರ ಚೌಡಯ್ಯನವರ ವಚನ ಕಂಠಪಾಠ ಸ್ಪರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ

ನಿಜಶರಣ ಅಂಬಿಗ ಚೌಡಯ್ಯನವರ ಗುರುಪೀಠದ ವತಿಯಿಂದ ಜನವರಿ 14 ಹಾಗೂ 15ರಂದು 7ನೇ ಅಂಬಿಗರ ಶರಣ ಸಂಸ್ಕೃತಿ ಉತ್ಸವ-2025, ವಚನ ಗ್ರಂಥ ಮಹಾರಥೋತ್ಸವ ನರಸೀಪುರದಲ್ಲಿ ನಡೆಯಲಿದೆ.

ಉತ್ಸವದ ಅಂಗವಾಗಿ ರಾಜ್ಯಮಟ್ಟದ ವಚನಗಳ ಕಂಠಪಾಠ ವಾಚನ ಸ್ಪರ್ಧೆ ಏರ್ಪಡಿಸಲಾಗಿದೆ.

೧) ಬಹುಮಾನ ವಿವರ

  • ಪ್ರಥಮ ಬಹುಮಾನ – ೧೦ ಸಾವಿರ ರೂಪಾಯಿಗಳು
  • ದ್ವಿತೀಯ ಬಹುಮಾನ – ೦೭ ಸಾವಿರ ರೂಪಾಯಿಗಳು
  • ತೃತೀಯ ಬಹುಮಾನ – ೦೫ ಸಾವಿರ ರೂಪಾಯಿಗಳು
    (ಭಾಗವಹಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು)

೨) ಸ್ಪರ್ಧೆಯ ವಿವರ/ನಿಯಮಗಳು

  • ಸ್ಪರ್ಧೆಯು ದಿನಾಂಕ: ೧೪-೦೧-೨೦೨೫ ರಂದು ಮಧ್ಯಾಹ್ನ ೧೨-೦೦ ಘಂಟೆಗೆ ಸಾ:ನರಸೀಪುರ ತಾ:ಜಿ: ಹಾವೇರಿ, ಗುರುಪೀಠದ ಆವರಣದಲ್ಲಿ, ಜಗದ್ಗುರು ಪೂಜ್ಯಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗುತ್ತದೆ.
  • ಸ್ಪರ್ಧೆಯಲ್ಲಿ ೬ ರಿಂದ ೨೫ನೇ ವಯಸ್ಸಿನವರಿಗೆ ಮೊದಲ ಪ್ರಾಶಸ್ತ್ಯ ಕೊಡಲಾಗುವುದು.
  • ನಿಜಶರಣ ಶ್ರೀ ಅಂಬಿಗರಚೌಡಯ್ಯನವರ ವಚನಗಳನ್ನು ಕಂಠಪಾಠ ಮಾಡಿ, ಸ್ಪಷ್ಟವಾಗಿ, ತಪ್ಪಿಲ್ಲದಂತೆ ಅತೀ ಹೆಚ್ಚಿನ ವಚನಗಳನ್ನು ವಾಚಿಸುವುದನ್ನು (ಹಾಡಬಾರದು) ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು.
  • ಆಸಕ್ತ ವಿದ್ಯಾರ್ಥಿಗಳ ಹೆಸರನ್ನು ದಿನಾಂಕ: ೧೨-೦೧-೨೦೨೫ ರ ಒಳಗಾಗಿ ಫೋನ್‌ ಕರೆ ಮೂಲಕ ತಾತ್ಕಾಲಿಕವಾಗಿ ನೋಂದಾಯಿಸಬೇಕು.
  • ಸ್ಪರ್ಧೆಯ ದಿನದಂದು ಶಾಲಾ ಮುಖ್ಯಸ್ಥರಿಂದ ಪಡೆದ ಪರವಾನಿಗೆ ಪತ್ರ ಹಾಗೂ ವಯಸ್ಸಿನ ಧೃಡೀಕರಣದ ಯಾವುದಾದರು ದಾಖಲೆಯೊಂದಿಗೆ ಬೆಳಿಗ್ಗೆ ೧೧-೦೦ ಘಂಟೆಯ ಒಳಗಾಗಿ ಹಾಜರಿದ್ದು ೧೦೦ ರೂಪಾಯಿ ಪ್ರವೇಶ ಫೀ ಕಟ್ಟಿ ಅಂತಿಮ ನೋಂದಣಿ ಮಾಡತಕ್ಕದ್ದು ಕಡ್ಡಾಯ ಇರುತ್ತದೆ.
  • ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಉಪಹಾರ ಮತ್ತುಊಟದ ವ್ಯವಸ್ಥೆ ಇರುತ್ತದೆ ಪ್ರಯಾಣ ಭತ್ಯೆ ಇರುವುದಿಲ್ಲ.
  • ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.
  • ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ ಈ ಕೆಳಗಿನವರನ್ನು ಸಂಪರ್ಕಿಸಲು ಕೋರಿದೆ.

೧) ಡಾ.ಕಾಂತೇಶ ಎನ್. ಅಂಬಿಗೇರ ಮೊ : ೮೦೯೫೨೨೬೨೮೨.
೨) ಶ್ರೀ ಮಹಾಂತೇಶ ಬಿ. ನಿಟ್ಟೂರು ಮೊ: ೯೯೦೧೯೭೯೮೯೦.
೩) ಶ್ರೀ ಸಿದ್ದರಾಮದೇವರು ಮೊ : ೬೩೬೨೩೭೫೩೩೧.

ವಿಶೇಷ ಸೂಚನೆ :
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಅದೇ ದಿನ ಸಂಜೆ ಜರುಗುವ ರಾಜ್ಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ವಿತರಿಸಿ ಸತ್ಕರಿಸಲಾಗುವುದು.

Share This Article
Leave a comment

Leave a Reply

Your email address will not be published. Required fields are marked *