ಬೆಂಗಳೂರು
ನಗರದ ಅರಮನೆ ಆವರಣದಲ್ಲಿ ಇತ್ತೀಚೆಗೆ ನಡೆದ 852ನೇ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ 300 ಜನ ಇಷ್ಟ ಲಿಂಗ ದೀಕ್ಷೆ ಪಡೆದರು ಎಂದು ಮೈಸೂರಿನ ಬಸವಾಶ್ರಮದ ಪೂಜ್ಯ ಮಾತಾ ಬಸವಾಂಜಲಿ ಹೇಳಿದರು.
ದೀಕ್ಷೆ ಪಡೆಯಲು ಆಸಕ್ತ ಶರಣರು ರಾಜ್ಯದ ಎಲ್ಲೆಡೆಯಿಂದ ಬಂದಿದ್ದರು. ಮಕ್ಕಳಿಂದ ಹಿಡಿದು 70 ವರ್ಷದ ವಯಸ್ಸಿನವರೂ ಲಿಂಗ ದೀಕ್ಷೆ ಪಡೆದುಕೊಂಡರು.

ಅವರಿಗೆಲ್ಲ ಮಾತಾಜಿಯವರು ವಚನಗಳ ಆಧಾರಿತವಾಗಿ ದೀಕ್ಷೆ ನೀಡಿ, ಯಾವುದೇ ವೈದಿಕ ಆಚರಣೆಗಳಿಲ್ಲದೆ, ಹಾಲು ಮೊಸರುಗಳ ಮಜ್ಜನವಿಲದೆ ಲಿಂಗ ಪೂಜೆ ಮಾಡುವ ವಿಧಾನವನ್ನು ತೋರಿಸಿಕೊಟ್ಟರು.
ಶ್ರೀ ಗುರು ಸಿದ್ದರಾಮೇಶ್ವರ ಜಯಂತಿಯನ್ನು ನೊಳಂಬ ಲಿಂಗಾಯತ ಸಂಘದ ವತಿಯಿಂದ ಪ್ರತಿ ವರ್ಷ ಆಚರಿಸಲಾಗುತ್ತದೆ. ಕಳೆದ ವರ್ಷ ಹಾವೇರಿ ಬಳಿಯ ಚಿಕ್ಕ ಭಾಸುರದಲ್ಲಿ ನಡೆದ ಕಾರ್ಯಕ್ರಮದಲ್ಲಿ 500 ಜನ ಲಿಂಗ ದೀಕ್ಷೆ ಪಡೆದಿದ್ದರು.

ಕರ್ನಾಟಕದಲ್ಲಿ 15-20 ಲಕ್ಷ ಜನರಿರುವ ನೊಳಂಬರಲ್ಲಿ ಬಸವ ಪ್ರಜ್ಞೆ ಜೀವಂತವಾಗಿದೆ.
2019ರಲ್ಲಿ ನೊಳಂಬ ವೀರಶೈವ ಸಂಘ ನೊಳಂಬ ಲಿಂಗಾಯತ ಸಂಘವಾಗಿ ಬದಲಾಯಿತು ಎಂದು ಮಾತಾಜಿ ಹೇಳಿದರು.

ನೊಳಂಬ ರಾಣಿ ಚಾಮಲಾ ದೇವಿ ಗುರು ಸಿದ್ಧರಾಮರಿಂದ ಲಿಂಗ ದೀಕ್ಷೆ ಪಡೆದು ಲಿಂಗಾಯತರಾದರು. ಅವರ ಜೊತೆ ನೊಳಂಬ ಸಮಾಜವೂ ಲಿಂಗ ಹಿಡಿದು ಬಸವ ಅನುಯಾಯಿಗಳಾದರು. ಕಲ್ಯಾಣ ಕ್ರಾಂತಿಯಲ್ಲಿ ವಚನಗಳ ಸಂರಕ್ಷಣೆಯಲ್ಲಿಯೂ ನೊಳಂಬರು ಪ್ರಮುಖ ಪಾತ್ರ ವಹಿಸಿದರು, ಎಂದು ಮಾತಾಜಿ ಹೇಳಿದರು.

ಇಂದು ನೂರಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ನೊಳಂಬ ಸಮಾಜ ಶೈಕ್ಷಣಿಕ ಪ್ರಗತಿ ಸಾಧಿಸಿದೆ. ಈ ವರ್ಷದ ಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ‘ನೊಳಂಬ’ ಸ್ಮರಣ ಸಂಚಿಕೆ, ‘ನೊಳಂಬ ಇತಿಹಾಸ’ ಸಾಕ್ಷ್ಯಚಿತ್ರ, ನೊಳಂಬ ವೆಬ್‌ಸೈಟ್ ಲೋಕಾರ್ಪಣೆಯಾಯಿತು, ಎಂದು ಮಾತಾಜಿ ಹೇಳಿದರು.
ಹಿರಿಯರೇ
ನೊಳಂಬ ಸಾಕ್ಷ್ಯ ಚಿತ್ರ ಮಾಡಿರುವುದಕ್ಕೆ ಅಭಿನಂದನೆಗಳು
ಈ ಕುರಿತು ನಾನು ಬಹಳ ಸಾರಿ ಯೋಚಿಸಿದ್ದೆ
ಮಾಡಿದವರು ಯಾರು ನನಗೆ ಗೊತ್ತಿಲ್ಲ ಆದರೂ ಪ್ರೀತಿಯ ಅಭಿನಂದನೆಗಳು
ಒಂದು ವಿಚಾರ ನೊಳಂಬ ಪದಕ್ಕೆ ನೀವು ಕೊಟ್ಟಿರುವ ಅರ್ಥ ಎಲ್ಲೂ ಇಲ್ಲ ಸಂಶೋಧನೆಗಳ. ಹಿನ್ನೆಲೆಯಲ್ಲಿ ಹೇಳುತ್ತಿರುವೆ ಈ ರೀತಿ ತಪ್ಪು ಆಗಬಾರದು ಎಂದು ನನ್ನ ವಿಚಾರ ಇನ್ನೊಮ್ಮೆ ಪರಿಶೀಲಿಸಿ