ಸಾಣೇಹಳ್ಳಿ
ನವೆಂಬರ್ ೪ ರಿಂದ ೯ ರವರೆಗೆ ಆರು ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಹೇಳಿದರು.
ಶ್ರೀ ಗುರು ಬಸವಮಹಾಮನೆಯಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ಮತ್ತು ನಾಟಕಗಳ ಪ್ರದರ್ಶನ ನಡೆಯಲಿವೆ. ಎಸ್.ಎಸ್. ಒಳಾಂಗಣ ರಂಗಮಂದಿರದಲ್ಲಿ ಮಧ್ಯಾಹ್ನದ ನಾಟಕ ಪ್ರದರ್ಶನಗಳು ಮತ್ತು ಮುಖ್ಯವಿಚಾರ ಸಂಕಿರಣದ ಕಾರ್ಯಕ್ರಮಗಳು ನಡೆಯಲಿವೆ.
ಶಿವಕುಮಾರ ರಂಗಮಂದಿರದಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನಾ ಕಾರ್ಯಕ್ರಮಗಳು ಜರುಗಲಿವೆ.
ನಾಟಕೋತ್ಸವದಲ್ಲಿ ಶಿವಸಂಚಾರದ ೩ ನಾಟಕಗಳು ಮತ್ತು ಪರಭಾಷೆಯ ನಾಟಕಗಳೂ ಸೇರಿದಂತೆ ನಾಟಕಗಳು ಪ್ರದರ್ಶನಗೊಳ್ಳುವವು.
ಪ್ರತಿದಿನದ ವಿಚಾರ ಮಾಲಿಕೆ, ವಚನ ಸಂಗೀತ, ನೃತ್ಯರೂಪಕ, ಸಾಧಕರಿಗೆ ಅಭಿನಂದನೆ, ರಾಜಕೀಯ ನೇತಾರರ, ವಿದ್ವಜನರ, ಚಿಂತಕರ ಮಾತುಗಳು, ಸ್ವಾಮೀಜಿಗಳ ಆಶೀರ್ವಚನ, ಶಿವಕುಮಾರ ಪ್ರಶಸ್ತಿ ಪ್ರದಾನ ಮುಂತಾದ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ನಡೆಯಲಿವೆ. ಕರೆಸಬಹುದಾದ ಅತಿಥಿಗಳು, ಸ್ವಾಮಿಗಳು, ಆಯ್ದುಕೊಳ್ಳಬಹುದಾದ ವಿಚಾರಗಳು, ನಾಟಕಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಎಸ್ ಕೆ ಪರಮೇಶ್ವರಯ್ಯ, ತಾಲ್ಲೂಕು ಸಾಧು ಸದ್ಧರ್ಮ ವೀರಶೈವ ಸಮಾಜದ ಅಧ್ಯಕ್ಷ ಎಸ್. ಸಿದ್ಧಪ್ಪ, ಎ.ಸಿ. ಚಂದ್ರಣ್ಣ, ಹೆಬ್ಬಳ್ಳಿ ಮಲ್ಲಿಕಾರ್ಜುನ, ಕಾಟೇಹಳ್ಳಿ ಶಿವಕುಮಾರ, ಬನ್ಸಿಹಳ್ಳಿ ಅಜ್ಜಪ್ಪ, ಬಿ.ಪಿ. ಓಂಕಾರಪ್ಪ, ಕೆ ಬಸವರಾಜ, ತಿಮ್ಮಜ್ಜ, ಸಿದ್ಧಯ್ಯ, ಕೃಷ್ಣಮೂರ್ತಿ, ಸಾ.ನಿ. ರವಿಕುಮಾರ, ಎಸ್.ಆರ್. ಮಂಜುನಾಥ, ವೀರಭದ್ರಪ್ಪಸ್ವಾಮಿ, ಪ್ರಭುದೇವ, ಷಣ್ಮುಖಯ್ಯ, ಸಾಣೇಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು, ಕಲಾಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಎಲ್. ಷಣ್ಮುಖಯ್ಯ ಪ್ರಾರ್ಥಿಸಿದರು. ಎಸ್ ಕೆ ಪರಮೇಶ್ವರಯ್ಯ ಸ್ವಾಗತಿಸಿದರು. ಎ ಸಿ ಚಂದ್ರಪ್ಪ ವಂದಿಸಿದರು.
ನಾಟಕೋತ್ಸವಕ್ಕೆ ಅಜ್ಜಂಪುರದ ಎ.ಸಿ. ಚಂದ್ರಪ್ಪ 18 ಕ್ವಿಂಟಾಲ್ ಈರುಳ್ಳಿಯನ್ನು ಶ್ರೀಮಠಕ್ಕೆ ತಂದುಕೊಟ್ಟರು.