ಸದ್ಭಕ್ತರೇ,
ಮಹಾಶಿವರಾತ್ರಿಯ ಶುಭಾಶಯಗಳು
ಮದ್ದುತಿಂದ ಮನುಜನಂತೆ ವ್ಯರ್ಥಹೋಗದಿರಾ, ಮನವೆ,
ವರ್ಷದಲಾದಡೂ ಒಂದು ದಿವಸ ಶಿವರಾತ್ರಿಯ ಮಾಡು ಮನವೆ.
ಕಪಿಲಸಿದ್ಧಮಲ್ಲೇಶನೆಂಬ ಇಷ್ಟಂಗಕ್ಕೆ.
-ಸಿದ್ಧರಾಮೇಶ್ವರ
ಇಷ್ಟಲಿಂಗ ಧರಿಸಿಕೊಂಡಿಲ್ಲವೆಂದರೆ ಇಷ್ಟಲಿಂಗ ಧರಿಸಿಕೊಳ್ಳಿ;
ಇಷ್ಟಲಿಂಗ ಪೂಜೆ ಮಾಡಿಕೊಳ್ಳುತ್ತಿಲ್ಲವೆಂದರೆ ಇಷ್ಟಲಿಂಗ ಪೂಜೆ ಮಾಡಿಕೊಳ್ಳಲು ಆರಂಭಿಸಿ;
ಇಷ್ಟಲಿಂಗ ಪೂಜೆ ಮಾಡಿಕೊಳ್ಳುತ್ತಿದ್ದರೆ ಸರಿಯಾದ ಸಮಯದಲ್ಲಿ ಇಷ್ಟಲಿಂಗ ಪೂಜೆ ಮಾಡಿಕೊಳ್ಳಲು ಪ್ರಾರಂಭಿಸಿ;
ಸರಿಯಾದ ಸಮಯದಲ್ಲಿಯೇ ಇಷ್ಟಲಿಂಗ ಪೂಜೆ ಮಾಡಿಕೊಳ್ಳುತ್ತಿದ್ದರೆ ಅನುಸಂಧಾನ ಪೂರ್ವಕವಾಗಿ ಇಷ್ಟಲಿಂಗ ಪೂಜೆ ಮಾಡಿಕೊಳ್ಳಲು ಆರಂಭಿಸಿ.
ಅಗ್ಗದ ಸುಖಕ್ಕೆ ಆಸೆಗಳಿಗೆ, ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದನ್ನು ತ್ಯಜಿಸದಿರಿ.
ಪ್ರತಿದಿನ ಬೆಳಗ್ಗೆ ಪತ್ರಿಕೆಗಳನ್ನು ಓದಲು, ವಾಕಿಂಗ್ ಜಾಗಿಂಗ್ ಮಾಡಲು ಸಮಯ ಸಿಗುವುದಾದರೆ, ಇಷ್ಟಲಿಂಗ ಪೂಜೆ ಮಾಡಿಕೊಳ್ಳಲು ಏಕೆ ಸಮಯ ಸಿಗುವುದಿಲ್ಲ!
ದಿನನಿತ್ಯ ರಾತ್ರಿ ಮನೋರಂಜನೆಗಾಗಿ, ಮೊಬೈಲ್ ದೂರದರ್ಶನ ಇತ್ಯಾದಿಗಳನ್ನು ನೋಡಿ ತಡವಾಗಿ ಮಲಗಿ ನಿಮ್ಮನಿದ್ರೆಯನ್ನು ಕಡಿತ ಗೊಳಿಸುತ್ತೀರಿ ಎಂದಾದರೆ, ಇಷ್ಟಲಿಂಗ ಪೂಜೆ ಮಾಡಿಕೊಳ್ಳಲು ಬೆಳಗ್ಗೆ ಬೇಗ ಎದ್ದು ಏಕೆ ನಿಮ್ಮನಿದ್ದೆಯನ್ನು ಸ್ವಲ್ಪ ಕಡಿತಗೊಳಿಸಲಾಗುವುದಿಲ್ಲ!!
ಎಲ್ಲದಕ್ಕೂ ಮನಸ್ಸು ಇರಬೇಕಷ್ಟೇ!!
ಮರೆಯಬೇಡಿ!!
ಲಿಂಗಾಯತದ ಸತ್ವ, ತಪಸ್ಸು ಇರುವುದು ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದರಲ್ಲಿಯೇ!
-ಶ್ರೀ ಮ.ನಿ.ಪ್ರ. ಡಾ. ಬಸವ ಮರುಳಸಿದ್ಧ ಸ್ವಾಮೀಜಿ
ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು- ಬಸವಕೇಂದ್ರ, ಶಿವಮೊಗ್ಗ
