ಪವಾಡ ಬಸವಣ್ಣ ದೇವರ ಮಠದಲ್ಲಿ ನಡೆದ ವಚನ ಕಂಠಪಾಠ ಸ್ಪರ್ಧೆ. ಬಸವ ಜಯಂತಿಯಂದು ಬಹುಮಾನ ವಿತರಣೆ.
ಬೆಂಗಳೂರು

ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಪವಾಡ ಬಸವಣ್ಣ ದೇವರ ಮಠ ಆಯೋಜಿಸಿದ್ದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮದ ಕುಮಾರಿ ಲಾವಣ್ಯ ಮಂಜುನಾಥ ಅಂಗಡಿ ಮೊದಲನೇ ಸ್ಥಾನ ಪಡೆದಿದ್ದಾರೆ.
ಇಂದು (ಏಪ್ರಿಲ್ 29) ಬೆಂಗಳೂರಿನ ಬಳಿಯ ನಾಗಮಂಗಲದಲ್ಲಿ ನಡೆದ ಸ್ಪರ್ಧೆಯಲ್ಲಿ ನಿರರ್ಗಳವಾಗಿ 1051 ವಚನಗಳನ್ನು ಹೇಳಿ ಲಾವಣ್ಯ 1 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ.
990 ವಚನ ಹೇಳಿದ ಬೇಲೂರಿನ ಶ್ರೀಮತಿ ನೀಲಾ ನಾಗಭೂಷಣ, 51, ದ್ವಿತೀಯ ಬಹುಮಾನ 75 ಸಾವಿರ ರೂಪಾಯಿಗಳನ್ನು ಪಡೆದಿದ್ದಾರೆ.

50,000 ರೂಪಾಯಿಗಳನ್ನು ತೃತೀಯ ಬಹುಮಾನವಾಗಿ ನಿಗದಿತಪಡಿಸಲಾಗಿತ್ತು. ಆದರೆ ಕನಿಷ್ಠ 700 ವಚನಗಳನ್ನು ಹೇಳಿದವರಿಗೆ ಇದು ಲಭ್ಯವಾಗುತ್ತಿತ್ತು. ಆದರೆ ಮಿಕ್ಕವರು 700ಕ್ಕಿಂತ ಕಡಿಮೆ ಹೇಳಿದ್ದರಿಂದ ಮೂವರು ಅಭ್ಯರ್ಥಿಗಳಿಗೆ ತಲಾ 5 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ 1 ಸಾವಿರ ರೂಪಾಯಿ ಹಾಗೂ ಪ್ರಮಾಣಪತ್ರ ನೀಡಲಾಗುವದು. ಸ್ಪರ್ಧೆಯಲ್ಲಿ ಒಟ್ಟು 55 ಜನರು ಭಾಗವಹಿಸಿದ್ದರು. ಏಪ್ರಿಲ್ 30 ಬಸವ ಜಯಂತಿಯಂದು ಬಹುಮಾನಗಳನ್ನು ವಿತರಿಸಲಾಗುವುದು.

ವ್ಯಕ್ತಿತ್ವ ವಿಕಸನಕ್ಕಾಗಿ ವಚನಗಳನ್ನು ಜನಪ್ರಿಯಗೊಳಿಸಲು ಪವಾಡ ಬಸವಣ್ಣ ದೇವರ ಮಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯನ್ನು ಆಯೋಜಿಸಿದ್ದರು.
1051 ವಚನಗಳನ್ನು ಹೇಳಿದ್ದು ಒಂದು ದಾಖಲೆಯೇ ಇರಬೇಕು,
ಕುಮಾರಿ ಲಾವಣ್ಯ ಅಂಗಡಿ ಅವರಿಗೆ ಅಭಿನಂದನೆಗಳು, ಅವರ ತಂದೆ ತಾಯಿಯವರಿಗೆ ಸಹಸ್ರ ಶರಣು ಶರಣಾರ್ಥಿಗಳು, ಅದೇ ರೀತಿ 990 ವಚನಗಳನ್ನು ಹೇಳಿದ ಶ್ರೀಮತಿ ನೀಲಾ ನಾಗಬೂಷಣ ಅಕ್ಕನವರಿಗೆ ಕೂಡ ಅಭಿನಂದನೆಗಳು, ಇಷ್ಟು ವಚನಗಳನ್ನು ಕಂಠಪಾಠ ಮಾಡಿ ಹೇಳಿದ್ದು ಒಂದು ಮೈಲಿಗಲ್ಲೇ ಸರಿ. ವಚನ ಕಂಠಪಾಠದ ಅರ್ಥಪೂರ್ಣ ಸ್ಪರ್ಧೆ ಏರ್ಪಡಿಸಿದ ನೆಲಮಂಗಲದ ಬಸವಣ್ಣದೇವರ ಮಠದ ಪೂಜ್ಯರಿಗೆ ಶರಣು ಶರಣಾರ್ಥಿಗಳು
ಲಾವಣ್ಯ ಅಂಗಡಿಯವರಿಗೆ ಕೋಟಿ ಕೋಟಿ ಶರಣು ಶರಣಾರ್ತಿಗಳು
ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಕಂಠಪಾಠ ಮಾಡಿಕೊಂಡು ಅರ್ಥಪೂರ್ಣವಾಗಿ ವಾಚನ ಮಾಡಿದ ವಿಜೇತರಿಗೆ ಹಾಗೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ರೂಪಿಸಿರುವ ಪೂಜ್ಯ ಶ್ರೀ ಸಿದ್ದಲಿಂಗ
ಸ್ವಾಮಿಜೀಯವರಿಗೂ ಶರಣು ಶರಣಾರ್ಥಿಗಳು
ವಚನಗಳನ್ನು ಹೇಳಿದ ಎಲ್ಲರುಗು ಹಾಗೂ ವ್ಯವಸ್ಥೆ ಮಾಡಿದ ಸಂಸ್ಥೆ ಯವರಿಗೂ ಧನ್ಯವಾದಗಳು 🌹🙏
ಬಹಳ ಸಂತೋಷ, ಶುಭಾಷಯಗಳು 💐💐
ಅದ್ಭುತವಾದ ಅರ್ಥಪೂರ್ಣವಾದ ವಚನ ಕಂಠಪಾಠ ಸ್ಪರ್ಧೆ ಆಯೋಜಿಸಿ ಬಸವತತ್ವ ಸಮಾಜದಲ್ಲಿ ನೆಲೆಗೊಳಿಸುತ್ತಿರುವ ಪೂಜ್ಯರಿಗೆ ಅನಂತಾನಂತ ಶರಣುಗಳು.
ದೂಡ್ಡ ಮೊತ್ತದ ಬಹುಮಾನ, ಸಾವಿರಕ್ಕೂ ಹೆಚ್ಚಿನ ವಚನ ಹೇಳಿದ್ದು ಎರಡೂ ವಿಶೇಷ ದಾಖಲೆಗಳೇ!
ಸ್ವಾಮಿಜಿಯವರ ಈ ಕಾರ್ಯ ನಿರಂತರ ಮುಂದುವರಿಯಲಿ.
ಓಂ ಶ್ರೀ ಗುರು ಬಸವ ಲಿಂಗಾಯ ನಮಃ..
ಶರಣು ಶರಣಾರ್ಥಿಗಳು ವಚನ ಸ್ಪರ್ಧೆ ನಡೆಸಿದೆ ಶ್ರೀ ಗಳಿಗೆ & ಬಾಗವಹಿದ ಎಲ್ಲಾ ಮಹಿಣಿಯರಿಗೆ… 🙏🙏🙏🙏🙏
ಶರಣು ಶರಣಾರ್ಥಿ ವೀಜೇತರಿಗೆ ಮತ್ತು ಪೂಜ್ಯರಿಗೆ .
ವಚನ ಕಂಠಪಾಠ ಮಾಡಿ ಹೇಳಿದವರಿಗೂ, ಕಾರ್ಯಕ್ರಮ ಆಯೋಜನೆ ಮಾಡಿದವರಿಗೂ ಶರಣು ಶರಣಾರ್ಥಿ.
ಹೀಗೆ ಪ್ರತಿ ಊರಲ್ಲಿ ಜರಗಬೇಕೆಂದು ನನ್ನ ಅಭಿಲಾಷೆ.
ಶರಣು ಶರಣಾರ್ಥಿ.
1051 ವಚನಗಳು ಕಂಠ ಪಾಠವಾಗಿ ಹೇಳಿದ ಕುಮಾರಿ ಲಾವಣ್ಯ ರವರಿಗೆ ಅಭಿನಂದನೆಗಳು,
ನಿಮ್ಮ ಸಾಧನೆ ಹೀಗೆ ಮುಂದುವರೆಯಲಿ ಎಂದು ವಿಶ್ವಗುರು ಬಸವಣ್ಣನವರಲ್ಲಿ ಪ್ರಾರ್ಥಿಸುತ್ತೇವೆ.
ಕುಮಾರಿ ಲಾವಣ್ಯ ಅಂಗಡಿ ಇವಳಿಗೆ ಅಕ್ಕರೆಯ ಅಭಿನಂದನೆಗಳು……
ಆರ್. ಎಸ್. ಚಾಪಗಾವಿ
ವಚನಗಳನ್ನು ಕಂಠಪಾಠಮಾಡಿ ಹೇಳಿದ ಎಲ್ಲ ಮಕ್ಕಳಿಗೆ ಹಾಗು ಇಂಥ ಕಾರ್ಯಕ್ರಮವನ್ನು ಆಯೋಜಿಸಿದ ಮಠಾಧಿಪತಿಗಳಿಗೂ ಶರಣುಗಳು. ಇಂಥ ಕಾರ್ಯಕ್ರಮಗಳು ಆಗಾಗ ನಡೆಯುವಂತೆ ನಮ್ಮ ಮಕ್ಕಳಿಗೆ ಸಂಸ್ಕೃತಿ ಶಿಕ್ಷಣವನ್ನು ಒದಗಿಸಿ.
ಅಭಿನಂದನೆಗಳು ಲಾವಣ್ಯ 🥰