ಹೊಸ ಸಂವಿಧಾನ ರಚಿಸುವ ಪ್ರಯತ್ನ ಖಂಡನೀಯ: ಪಾಂಡೋಮಟ್ಟಿ ಶ್ರೀ

ಅಜ್ಜಂಪುರ

ಅಂಬೇಡ್ಕರರವರು ಕೊಟ್ಟ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು. ಹೊಸ ಸಂವಿಧಾನ ಸೃಷ್ಠಿ ಮಾಡುವ ಪ್ರಯತ್ನಗಳನ್ನು ಖಂಡಿಸಬೇಕು ಎಂದು ಪಾಂಡೋಮಟ್ಟಿಯ ಗುರುಬಸವ ಸ್ವಾಮಿಗಳು ಸೋಮವಾರ ಹೇಳಿದರು.

ಇಲ್ಲಿನ ಕೈಲಾಸಂ ಕಲಾಕ್ಷೇತ್ರ ಆವರಣದಲ್ಲಿ ನಡೆದ ನಮ್ಮ ನಡೆದ ಸರ್ವೋದಯಡೆಗೆ ಪಾದಯಾತ್ರೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ ಕೃಷಿ, ಪರಿಸರ, ಆರೋಗ್ಯ, ಶಿಕ್ಷಣ ಮತ್ತು ರಾಜಕಾರಣ ಒಳ್ಳೆಯ ಮಾರ್ಗದ ಕಡೆಗೆ ಹೋಗಬೇಕು ಎನ್ನುವುದು ನಮ್ಮ ಆಶಯ. ಕೃಷಿ ಮಾಡುವಂಥವರು ಇಲ್ವೇನೋ ಎನ್ನುವಂಥ ವಾತಾವರಣ ನಿರ್ಮಾಣ ಆಗಿದೆ.

ಆಂಗ್ಲಮಾಧ್ಯಮದ ವಿಶೇಷತೆಗೆ ಮಾರುಹೋಗಿ ಕನ್ನಡವನ್ನು ಮರೆಯುತ್ತಿದ್ದೇವೆ. ಚಿಕ್ಕವಯಸ್ಸಿನ ಮಕ್ಕಳಿಗೆ ಕನ್ನಡ ಶಬ್ಧವನ್ನು ಮರೆಸಿ ಕನ್ನಡದ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದ್ದೇವೆ. ಜನರ ಮನಸ್ಸನ್ನು ಗೆದ್ದು, ಜನೋಪಯೋಗಿ ಕೆಲಸ ಮಾಡುವವನನ್ನು ಆರಿಸಿ ಗೆಲ್ಲಿಸಬೇಕು.

ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮನುಷ್ಯ ಅಂತಃಸಾಕ್ಷಿಗೆ ಅಂಜಿ ನಡೆಯಬೇಕು. ನಾವು ಸರಿಯಾದರೆ ಸಮಾಜ ಸರಿಯಾಗುತ್ತದೆ. ನಮ್ಮ ಆರೋಗ್ಯ ಕಾಪಾಡಿಕೊಂಡು ಕೃಷಿಯನ್ನು ಸುಧಾರಣೆಯನ್ನು ತರೋಣ. ನಮ್ಮ ಶಿಕ್ಷಣವನ್ನು ಕಾಪಾಡಿಕೊಂಡು, ಯಾವುದೇ ಆಮಿಷಕ್ಕೆ ಒಳಗಾಗದೇ ಚುನಾಯಿತರನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ಸುಧಾರಣೆ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಹಿಮಾ ಜೆ ಪಾಟೀಲ ಮಾತನಾಡಿ ಈಗ ನಡೆಯುತ್ತಿರುವುದು ರಾಜಕಾರಣ ಅಲ್ಲ. ಇದೊಂದು ದಂಧೆ. ರಾಜಕಾರಣ ಎಂದರೆ ಚುನಾವಣೆ, ಗೆಲವು ಅಲ್ಲ. ಎಲ್ಲವನ್ನೂ ಒಳಗೊಂಡಿರುವುದು. ಸರ್ವೋದಯದೆಡೆಗೆ ನಡೆಯುವ ಪಾದಯಾತ್ರೆ ಎಲ್ಲರನ್ನು ಕಣ್ತೆರೆಸುವ ಯಾತ್ರೆ.

ಈ ಸರ್ವೋದಯದ ಯಾತ್ರೆಯನ್ನು ವ್ಯಕ್ತಿಗತವಾಗಿ ವಿರೋಧಿಸಬಹುದೇ ಹೊರತು ಅದರೊಳಗೆ ಇರುವ ತತ್ವವಿಚಾರಗಳನ್ನಲ್ಲ. ಸಣ್ಣ ಪ್ರಮಾಣದಲ್ಲಿ ಈ ಯಾತ್ರೆ ಆರಂಭವಾಗಿದೆ. ಮುಂದೊಂದು ದಿನ ದೊಡ್ಡ ಯಾತ್ರೆಯಾಗಿ ಒಂದು ದೊಡ್ಡ ಕ್ರಾಂತಿಯನ್ನುಂಟು ಮಾಡುತ್ತದೆ, ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಲ್ಲಿಗೆ ಸಿರಿಮನೆ ಮಾತನಾಡಿ ಈ ಕಾರ್ಯಕ್ರಮ ಹಲವು ಬಗೆಯ ಆಚರಣೆಗಳ ಸಮಾಗಮವಾಗಿ ಕಾಣುತ್ತಿದೆ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಕಾಯಕ ತತ್ವಗಳನ್ನು ಅಳವಡಿಸಿಕೊಂಡವರು.

೧೨ನೆಯ ಶತಮಾನದಲ್ಲಿ ಕಾಯಕವೇ ಕೈಲಾಸ ಎನ್ನುವ ಮೌಲ್ಯಗಳನ್ನು ಶರಣರು ಇಡೀ ಜಗತ್ತಿಗೆ ಕೊಟ್ಟರು. ಸರ್ವೋದಯ ತತ್ವ ಹಾಗೂ ಕಾಯಕತತ್ವಕ್ಕೂ ಎರಡೂ ಸಾಮ್ಯತೆ ಇದೆ.

ಈ ಪಾದಯಾತ್ರೆ ಹೊಸ ಪ್ರೇರಣೆಯನ್ನುಂಟು ಮಾಡುತ್ತದೆ. ಎಲ್ಲ ಪ್ರಯತ್ನಗಳು ಆರಂಭದಲ್ಲಿ ಯಶಸ್ಸನ್ನು ಕಾಣುವುದಿಲ್ಲ. ಅನೇಕ ಹೋರಾಟಗಳು, ಚಳವಳಿಗಳು, ಆಂದೋಲನಗಳು ಆದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ.

ತರೀಕೆರೆಯ ಶಾಸಕ ಜಿ ಹೆಚ್ ಶ್ರೀನಿವಾಸ ಮಾತನಾಡಿ ಪಂಡಿತಾರಾಧ್ಯ ಶ್ರೀಗಳು ಸಮಾಜಮುಖಿಯಾದ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಗಾಂಧೀಜಿಯವರ ಯಾತ್ರೆ ಸರ್ವೋದಯದ ಯಾತ್ರೆಗೆ ಪ್ರೇರಣೆ ಎಂದರು.

ತರೀಕೆರೆಯ ಮಾಜಿ ಶಾಸಕ ಸುರೇಶ್ ಮಾತನಾಡಿ ಈ ಯಾತ್ರೆಯ ಉದ್ದೇಶ ಸಮಾಜವನ್ನು ಜಾಗೃತಗೊಳಿಸುವಂಥದ್ದು. ಈ ಒಂದು ಚಿಂತನೆ ಪಂಡಿತಾರಾಧ್ಯ ಶ್ರೀಗಳಿಗೆ ಬಿಟ್ಟರೆ ಇನ್ಯಾವ ಸ್ವಾಮಿಗಳಿಗೂ ಬರಲಿಕ್ಕೆ ಸಾಧ್ಯವಿಲ್ಲ. ಇವತ್ತು ಯುವಕರು ನಾಚಿಸುವಂತೆ ೨೨ ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಯಳನಾಡು ಮಠದ ಜ್ಞಾನಪ್ರಭು ಸ್ವಾಮಿಗಳು, ಮಾದಾರ ಗುಂಡಯ್ಯ ಸ್ವಾಮಿಗಳು, ಮಂಡ್ಯದ ಕಲ್ಯಾಣ ಬಸವೇಶ್ವರ ಮಠದ ಓಂಕಾರೇಶ್ವರ ಸ್ವಾಮಿಗಳು, ಅಭಿನವ ಮರುಳಸಿದ್ಧ ಸ್ವಾಮಿಗಳು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದಪ್ಪ ಆರ್, ತಾಲ್ಲೂಕಿನ ದಂಡಾಧಿಕಾರಿ ವಿನಾಯಕ ಸಾಗರ್ ಮತ್ತಿತರರಿದ್ದರು. ಪ್ರಾಸ್ತಾವಿಕವಾಗಿ ಚಂದ್ರಪ್ಪ ಮಾತನಾಡಿದರು. ನವೀನ್ ಸ್ವಾಗತಿಸಿದರೆ ಮೋಹನ್ ನಿರೂಪಿಸಿದರು.

Share This Article
1 Comment
  • ಪೂಜ್ಯರು ಈ ವಿಷಯವನ್ನು ಗಂಬೀರವಾಗಿ ತೆಗೆದುಕೊಂಡಿರುವುದು ಬಹಳ ಒಳ್ಳೆಯದು

Leave a Reply

Your email address will not be published. Required fields are marked *