ದಾವಣಗೆರೆ
ಬೆಂಗಳೂರಿನಲ್ಲಿ ನಡೆದ ವಚನ ದರ್ಶನ ಸತ್ಯ v/s ಮಿಥ್ಯ ಪುಸ್ತಕದ ಬಿಡುಗಡೆ ಸಮಾರಂಭದ ಕುರಿತು ಸೋಮವಾರ ಪತ್ರಿಕಾಗೋಷ್ಠಿ ಮಾಡಿದ ರಂಬಾಪುರಿ ಶ್ರೀಗಳು ಶತಮಾನದ ಹೊಸ್ತಿಲಲ್ಲಿರುವ ಹಿರಿಯ ಶರಣ ಸಾಹಿತಿ ಗೊರುಚ ಅವರ ಜ್ಞಾನಕ್ಕೆ ವಯಸ್ಸಿಗೆ ಗೌರವ ಕೊಡದೆ ಏಕ ವಚನದಲ್ಲಿ ಸಂಭೋದಿಸಿದ್ದೀರಿ.
ಸ್ವಾಮಿಗಳೇ ನೀವು ಕಾಗಕ್ಕ ಗುಬ್ಬಕ್ಕನ ಕಥೆಯಂತಿರುವ ಪುರಾಣವನ್ನೇ ಇತಿಹಾಸ ಎಂದು ತಿಳಿದವರು ನೀವು.
ಧರ್ಮ ಒಡೆಯುವ ಮಾತನಾಡಿರುವ ಬಗ್ಗೆ ಸಹ ಹೇಳಿದ್ದೀರಿ, ಆದರೆ ಧರ್ಮ ಒಡೆಯುವವರು ನೀವೇ ಅಲ್ಲವೇ?
ಸ್ಪಷ್ಟತೇ ಇಲ್ಲದೆ ಇರುವ ನೀವು ಒಮ್ಮೆ ವೀರಶೈವ ಅಂತೀರಾ, ಮತ್ತೊಮ್ಮೆ ಹಿಂದೂ ಅಂತಿರಾ, ಮಗದೊಮ್ಮೆ ಬೇಡ ಜಂಗಮ ಅಂತೀರಾ!
ಅಖಂಡ ವೀರಶೈವ ಲಿಂಗಾಯತರು ಒಂದೇ ಅನ್ನುವದಾದರೆ ಬೇಡ ಜಂಗಮ ಕೆಟಗರಿಗೆ ಸೇರಲು ವೀರಶೈವರು ಮಾತ್ರ ಏಕೆ ಪ್ರಯತ್ನ ಮಾಡುವಿರಿ ಇಡೀ ವೀರಶೈವ ಲಿಂಗಾಯತರು ಸಹ ಬೇಡ ಜಂಗಮ ಆಗಲಿ.
ನೀವು ಮಾತ್ರ ಮೀಸಲಾತಿ ಸೌಲಭ್ಯಗಳನ್ನು ಪಡೆದು ಉಳಿದ ಲಿಂಗಾಯತರು ನಿಮ್ಮ ಗುಲಾಮಗಿರಿ ಮಾಡಬೇಕಾ ಸ್ವಾಮಿಗಳೇ.
ಮೂಲ ಧರ್ಮದ ಆಚಾರ್ಯರ ಭಾವಚಿತ್ರ ಬಿಡುಗಡೆಗೆ ವಿರೋಧ ಮಾಡಿದ ಬಗ್ಗೆ ಹೇಳಿರುವಿರಿ. ಕಾಲ್ಪನಿಕ ಆಚಾರ್ಯರು ನಮ್ಮ ಲಿಂಗಾಯತ ಧರ್ಮದ ಮೂಲ ಆಚಾರ್ಯರು ಅಲ್ಲ ಆಚಾರ್ಯ ಪರಂಪರೆ ನಮ್ಮ ಲಿಂಗಾಯತ ಧರ್ಮದಲ್ಲಿ ಇಲ್ಲವೇ ಇಲ್ಲ.
ಪತ್ರಿಕಾಗೋಷ್ಠಿಯಲ್ಲಿ ಲಿಂಗಾಯತ ವೀರಶೈವ ಒಂದೇ ಪದ ಲಿಂಗಾಯತ ರೂಢಿಯಲ್ಲಿ ಬಂದ ಪದ ಎಂದು ಹೇಳಿದ್ದೀರಿ. ನಿಮ್ಮ ಅಭಿಪ್ರಾಯ ಒಪ್ಪುವುದಾದರೆ ರೂಢಿಯಿಂದ ಬಂದ ಲಿಂಗಾಯತ ಪದವನ್ನೇ ಏಕೆ ಬಳಸಬಾರದು.
ಹೇಗಿದ್ದರೂ ಒಂದೇ ಅಂದ ಮೇಲೆ ಬಹುಸಂಖ್ಯಾತ ಒಪ್ಪುವ ಲಿಂಗಾಯತ ಪದವನ್ನೇ ಬಳಸಿದರೆ ಆಯಿತಲ್ಲ.
ಜೊತೆಗೆ ಇದ್ದ ಕೇದಾರ ಶ್ರೀಗಳು ವೀರಶೈವ ಧರ್ಮ ಭದ್ರವಾಗಿದೆ ಅಂತ ಹೇಳಿದ್ದಾರೆ,
ವೀರಶೈವ ಧರ್ಮ ಭದ್ರವಾಗಿದ್ದರೆ ಲಿಂಗಾಯತ ಧರ್ಮದ ಹೋರಾಟಕ್ಕೆ ಅಂಜುವುದು ಏಕೆ?
ಹಾಗೆಯೇ ಕೇದಾರ ಶ್ರೀಗಳು ಚರ್ಚೆಗೆ ಪಂಥಾಹ್ವನ ನೀಡಿದ್ದಾರೆ. ಕಪೋಲ ಕಲ್ಪಿತ ದಾಖಲೆ ಇರುವ ನೀವೇ ಚರ್ಚೆಗೆ ಕರೆದರೆ, ಐತಿಹಾಸಿಕ ದಾಖಲೆಗಳು ಇರುವ ನಾವು ಸಹ ಚರ್ಚೆಗೆ ಸದಾ ಸಿದ್ದ.
ಸಮಯ, ಸ್ಥಳ ತಿಳಿಸಿ.
ರಂಬಾಪುರಿ ಕೇದಾರ ಸೇರಿದಂತೆ ಯಾವುದೇ ಮಠಾಧೀಶರು ಲಿಂಗಾಯತ ಧರ್ಮದ ವಿಚಾರಕ್ಕೆ ಬರುವಾಗ ಎಚ್ಚರವಿರಲಿ. ಗೊರುಚ ಅವರಂತಹ ಹಿರಿಯರಿಗೆ ಗೌರವ ಕೊಡಿ.
ಈ ದೇಶದಲ್ಲಿ ಬಸವಣ್ಣ ಹುಟ್ಟುವುದಕ್ಕಿಂತ ಪೂರ್ವದಲ್ಲಿ ಶತ ಶತಮಾನಗಳಿಂದ ಈಶ್ವರ ದೇವಸ್ಥಾನಗಳು ಹಾಗೂ ಇಷ್ಟಲಿಂಗ ಪೂಜೆ ಇತ್ತು. ಬಸವಣ್ಣನವರು ಯಾವುದೇ ಧರ್ಮವನ್ನು ಸ್ಥಾಪಿಸಿಲ್ಲ ಅವರು ಅನುಭವ ಮಂಟಪವನ್ನು ಸ್ಥಾಪಿಸಿದ್ದಾರೆ. ಇದನ್ನ ಅರಿತುಕೊಂಡು ಪೂರ್ವಗ್ರಹ ಪೀಡಿತರಾಗಿ ವಾದಿಸುವುದು ಎಷ್ಟು ಸರಿ..
ಎಲ್ಲಿತ್ತು? ಎದೆಯ ಮೇಲೆ ಲಿಂಗ ಕಟ್ಟಿಕೊಂಡು ಹುಟ್ಟಿದ ಧರ್ಮ ಲಿಂಗಾಯತ ಅದು ಸ್ಥಾಪನೆ ಆಗಿದ್ದೆ ಬಸವಣ್ಣನವರಿಂದ… ಬಸವಣ್ಣನವರ ಮೊದಲು ಇದ್ದದ್ದು ಸ್ಥಾವರ ಲಿಂಗ ಪೂಜೆ…
ಸ್ಥಾವರ ಲಿಂಗ ಪೂಜೆಗೂ ಇಷ್ಟಲಿಂಗ ಪೂಜೆಗೂ ಅಜ ಗಜಾಂತರ ವ್ಯತ್ಯಾಸವಿದೆ…..