ಬಸವಕಲ್ಯಾಣ
ಬಸವಣ್ಣನವರ ಅರಿವಿನ ಮನೆ ಪಕ್ಕದ ಅಪ್ಪಣ್ಣನವರ ಗವಿಯಲ್ಲಿ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯವರು ರಾತ್ರೋರಾತ್ರಿ ಅನ್ಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ದೂರು ನೀಡಿದೆ.
ಈ ವಿಷಯದಲ್ಲಿ ಬಸವಕಲ್ಯಾಣ ಪೊಲೀಸ್ ಠಾಣೆಗೆ ದೂರು ಹಾಗೂ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಮನವಿಯನ್ನು ಸಂಘದ ಅಧ್ಯಕ್ಷ ರಾಚಪ್ಪ ಹಡಪದ, ಪ್ರಧಾನ ಕಾರ್ಯದರ್ಶಿ ಶಿವಾನಂದ ಜಿಂಗೆ ಅವರ ನೇತೃತ್ವದಲ್ಲಿ ದೂರು ಸಲ್ಲಿಸಲಾಗಿದೆ.
ಪಂಚ ಕಮಿಟಿಯವರು ಕಾನೂನು ಬಾಹಿರವಾಗಿ ಸ್ಥಾಪಿಸಿರುವ ಅನ್ಯ ಮೂರ್ತಿಯನ್ನು ತೆರವುಗೊಳಿಸಿ ಅಪರಾಧಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ನಗರ ಪೊಲೀಸ್ ಠಾಣೆಗೆ ಫೆಬ್ರವರಿ 7 ದೂರು ನೀಡಲಾಗಿದೆ.
ಅದೇ ದಿನ ಪ್ರಾಧಿಕಾರಕ್ಕೆ ನೀಡಿರುವ ಮನವಿಯಲ್ಲಿ ಅನ್ಯ ಮೂರ್ತಿಗಳನ್ನು ತೆರವುಗೊಳಿಸದ್ದಿದ್ದರೆ ಹಡಪದ ಸಮಾಜದ ಬಂಧುಗಳು ಅರಿವಿನ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ದತ್ತಾತ್ರೇಯ ಬಾಂದೇಕರ್, ಉಪಾಧ್ಯಕ್ಷ ಜಗದೀಶ ನಲವಡಕರ್, ಪ್ರಮುಖರಾದ ಪಾಂಡುರಂಗ ಗದ್ಲೇಗಾವ, ಶರಣಪ್ಪ ಬೆಟಬಾಲಕುಂದ, ದತ್ತಾತ್ರೇಯ ಮೂಲಗೆ, ರಾಮಣ್ಣ ಹಡಪದ, ಭೀಮಾ ಬಾಂದೇಕರ್ ಮತ್ತಿತರರು ಉಪಸ್ಥಿತರಿದ್ದರು.
ತಹಶೀಲ್ದಾರ ಕಚೇರಿಯಲ್ಲಿ ಸಭೆ

ಮನವಿ ಸಲ್ಲಿಕೆಯಾದ ಮೇಲೆ ಸಹಾಯಕ ಆಯುಕ್ತ, ತಹಶೀಲ್ದಾರ ಮತ್ತು ಹಡಪದ ಸಮಾಜದ ಮುಖಂಡರನ್ನು ಒಳಗೊಂಡ ಸಭೆ ಫೆಬ್ರವರಿ 10ರಂದು ತಹಶೀಲ್ದಾರ ಕಚೇರಿಯಲ್ಲಿ ನಡೆದಿದೆ.
“ಇದೇ 15ರೊಳಗೆ ಗವಿಯಲ್ಲಿ ಪ್ರತಿಷ್ಠಾಪಿಸಿದ ಮೂರ್ತಿ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಆಯುಕ್ತರು ಭರವಸೆ ನೀಡಿದ್ದಾರೆ. 15ರೊಳಗೆ ಪ್ರಾಧಿಕಾರ ಈ ಕಾರ್ಯ ಮಾಡದೇ ಹೋದರೆ ನಾವೆಲ್ಲ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯುತ್ತೇವೆ ಎಂದು ಹೇಳಿ ಬಂದಿದ್ದೇವೆ,” ಎಂದು ಸಂಘದ ಉಪಾಧ್ಯಕ್ಷ ಜಗದೀಶ ನಲವಡಕರ್ ಬಸವ ಮೀಡಿಯಾ ಜೊತೆ ಮಾತಾಡುತ್ತ ತಿಳಿಸಿದರು.
ಪಂಚಕಮಿಟಿ ಪ್ರತಿಕ್ರಿಯೆ
ಈ ಬಗ್ಗೆ ಬಸವ ಮೀಡಿಯಾ ಪಂಚಕಮಿಟಿ ಅಧ್ಯಕ್ಷ ಬಸವರಾಜ ಕೋರಕೆ ಅವರನ್ನು ಸಂಪರ್ಕಿಸಿದಾಗ ಅವರು, “ಬಸವಣ್ಣನವರ ಅರಿವಿನ ಮನೆ ಮೊದಲಿನಿಂದಲೂ ಪಂಚಕಮಿಟಿ ವಶದಲ್ಲೇ ಇದೆ. ದಿನನಿತ್ಯದ ಪೂಜೆ, ಪುನಸ್ಕಾರ ನಾವೇ ಮಾಡಿಕೊಂಡು ಬರುತ್ತಿದ್ದೇವೆ. ದೇವಸ್ಥಾನದ ವಿದ್ಯುತ್ ಬಿಲ್ ನಾವೇ ಕಟ್ಟುತ್ತಿದ್ದೇವೆ. ಅಕ್ಕನ ಬಳಗದವರು ನಮ್ಮ ಗಮನಕ್ಕೆ ತಂದು ಅಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ,” ಎಂದು ಹೇಳಿದರು.



ಬೇರೆ ಯಾವ ಮೂರ್ತಿ ಸ್ಥಾಪನೆ ಮಾಡಿದ್ದಾರೆ?
ಆತ್ಮೀಯ ಎಲ್ಲಾ ಶರಣರಿಗೆ ನನ್ನ ಶರಣು ಶರಣಾರ್ಥಿ ಗಳು. ಈ ಸಂದರ್ಭದಲ್ಲಿ ನಾನು ನನ್ನ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇಚ್ಚಿಸುತ್ತೇನೆ ಕಾರಣ ಏನು ಎಂದರೆ ನಾನು ಬಹಳ ದಿನಗಳಿಂದ ಗಮನಿಸುತ್ತಾ ಬಂದಿದ್ದೇನೆ ಏನು ಎಂದರೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಧರ್ಮ ಸ್ಥಳದ ಶ್ರೀಮುಂಜುನಾಥ ಸ್ವಾಮಿ ದೇವಸ್ಥಾನ ಕಮೀಟಿ ಗೆ ಏನು ಕಮ್ಮಿ ಇಲ್ಲ ನಮ್ಮ ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮೀಟಿ ಯು ಎಂದು ಹೇಳಿದರು ತಪ್ಪು ಆಗಲಿಲ್ಲ ಅದು ಹೆಂಗೆ ಅಂದ್ರೆ ಉದಾಹರಣೆಗೆ ಧರ್ಮ ಸ್ಥಳದಲ್ಲಿ ನಡೆದುದು ಮುಗ್ಧ ಜನಸಾಮಾನ್ಯರಿಗೆ ಮೇಲೆ ದೌರ್ಜನ್ಯ ಕೊಲೆ ಗಳು ಇತ್ಯಾದಿ ಮಾಡಿದ್ದಾರೆ ಇಲ್ಲಿ 12 ನೆಯ ಶತಮಾನದಲ್ಲಿ ವಿಶ್ವಕ್ಕೆ ಮಾದರಿ ಆದ ಶರಣರ ಜೀವನದ ಇತಿಹಾಸದ ಮೇಲೆ ಮಾಡಿದುದು ಕುಡ ಕೊಲೆ ಗಳು ಇತ್ಯಾದಿ ಪ್ರಸ್ತುತ ಹಡಪದ ಅಪ್ಪಣ್ಣ ಶರಣರಿಗೆ ಅವರು ಲಿಂಗಯೋಗ ಸಾಧನೆ ಮಾಡಿಕೊಳ್ಳುತ್ತಿದ್ದ ಗವಿಯಲ್ಲಿ ಅವರ ಮೂರ್ತಿ ಮೂರ್ತಿ ಸ್ಥಾಪನೆ ಗೆ ಅಡ್ಡಿಸಿ ಆಸಮುದಾಯಕ್ಕೆ ಹಿಯಳಿ ಗಲಾಟೆ ಗದ್ದಲ ಮಾಡಿ ಕೊಂಡು ಸರ್ಕಾರದ ವಶದಲ್ಲಿರುವ ಆ ಸ್ಥಳದಲ್ಲಿ ಹಡಪದ ಅಪ್ಪಣ್ಣ ಅವರ ಗವಿಯಲ್ಲಿ ರಾತ್ರೊರಾತ್ರಿಯಲ್ಲಿ ಬಸವಣ್ಣ ನವರ ಧರ್ಮಪತ್ನಿ ಯ ಮೂರ್ತಿ ಸ್ಥಾಪನೆ ಮಾಡಿ ಬೆಳಗ್ಗೆ ವಚನ ಅಭಿಷೇಕ ಮಾಡಿ ನಂತರ ಅಲ್ಲಿ ಪಾಲು ಗೊಂಡ ಪುಣ್ಯ ಆತ್ಮರು ಯಾರು ಸಹಾ ಯಾವ ಗ್ರೂಪ್ ನಲ್ಲಿ ತಮ್ಮ ತಾವು ಮಾಡಿದ ಘನ ಕಾರ್ಯದ ಭಾವ ಚಿತ್ರ ಗಳು ಹಾಕದೆ ಹೆಸರು ಆಗಿದ್ದಾರೆ. ಎಷ್ಟು ಕುತಂತ್ರದಿಂದ ಆ ಪಂಚಕಮೀಟಿಯವರು ಎಂದರೆ ಯಾವ ಪೀಠದಿಂದ ವಿಶ್ವ ಕ್ಕೆ ವಿಶ್ವ ಗುರು ಬಸವವೇಶ್ವರರನ್ನು ಪರಿಚಯಿಸಾಲಾಗಿತ್ತೋ ಆ ಪೀಠದವರಿಂದೆಲೇ ಮೂರ್ತಿ ಸ್ಥಾಪನೆ ಗೆ ಕರೆದರು ಅವರು ಸಹಾ ಬಂದು ತಮ್ಮ ಕಾರ್ಯ ಮಾಡಿ ಹೊದರು ಇದುತಿಳದ ನಂತರ ನನಗೆ ಅನಿಸಿತು ಯಾರು ಬಸವಾದಿ ಶರಣರ ಜೀವನದ ಬಗ್ಗೆ ತಿಳಿದು ಅವರ ತತ್ವಗಳನ್ನು ಪ್ರಚಾರ ಮಾಡುತ್ತಿದ್ದಾರೆ ಅವರಿಂದಲೇ ಶರಣರ ಇತಿಹಾಸಕ್ಕೆ ದಕ್ಕೆ ತರುವ ಸಂಚು ಮಾಡಿ ತಾವು ಅಂದುಕೊಂಡ ಕೆಲಸ ಮಾಡಿ ಮುಗಿಸಿದ್ದಾರೆ ಈ ಪಂಚಕಮೀಟಿಯವರು ಸಂಚಿನಿಂದ ಮಾಡುವ ಕಾರ್ಯಗಳಿಗೆ ತತ್ತ್ವಕ್ಕೆ ಬದ್ದರಾಗಿ ಇದ್ದವರಿಗೆ ಕರೆದು ಕೆಲಸ ಮಾಡಿ ಮುಗಿಸಿದ್ದಾರೆ ಆದರೆ ರಾಜ ರೋಷದಿಂದ ಮಾಡುವ ಕಾರ್ಯಗಳಿಗೆ ತತ್ತ್ವಕ್ಕೆ ಬದ್ದರಾಗಿ ಇದ್ದವರಿಗೆ ಕರೆಯಲ್ಲ ಉದಾಹರಣೆಗೆ ಇದೆ ತಿಂಗಳು 15 ಭಾನುವಾರದಂದು ನಡೆಯುವ ಅದ್ಧೂರಿ ಕಾರ್ಯಕ್ರಮಕ್ಕೆ ಅಂದರೆ ಬಸವಕಲ್ಯಾಣ ದ ಶ್ರೀ ಬಸವೇಶ್ವರರ ದೇವಸ್ಥಾನದ ಮಹಾದ್ವಾರ ದ ಉದ್ಘಾಟನೆ ಗೆ ಹಾರಕುಡದ ಸಂಸ್ಥಾನ ಹಿರೇಮಠದ ಶ್ರೀ ಚನ್ನಬಸವೇಶ್ವರ ಶಿವಾಚಾರ್ಯರಂತವರಿಂದ ಚಾಲನೆ ಕೊಡಲು ಕರೆಯುತ್ತಾರೆ. ಇದೆ ನೋಡಿ ದೊಡ್ಡ ದ್ರೋಹ ಇನ್ನೂ ಮುಂದೆ ಬಸವ ಭಕ್ತರು ಬಸವತತ್ವ ಪ್ರಚಾರಕರು ಪೂಜ್ಯರು ಬಸವ ಅಭಿಮಾನಿಗಳು ನಾನುಹಿಗೆ ನಿನುಹಾಗೆ ಎಂದು ದೂರ ಇದ್ದರೆ ಹಿಗೆಆಗೋದು ಎಲ್ಲಾರು ಬಸವ ಧರ್ಮಕ್ಕಾಗಿ ದುಡಿದದ್ದು ನದಿಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುತ್ತಿದೆ ಎಲ್ಲರೂ ಒಂದಾಗಿ ನಿಜಾ ಸುಖಿ ಶಿವಶರಣ ಹಡಪದ ಅಪ್ಪಣ್ಣ ಶರಣರಿಗೆ ಹಾಗೂ ಆ ಸಮುದಾಯಕ್ಕೆ ನ್ಯಾಯ ಒದಗಿಸುವ ಶರಣರೆ ಬನ್ನಿ ಎಂದು ಸಲಹೆ ಸೂಚನೆ ಎಲ್ಲದಕ್ಕಿಂತ ನನ್ನ ಮನವಿ ತಮಗೆ ಮತ್ತೂಮ್ಮೆ ತಮ್ಮೆಲ್ಲಾರಿಗೂ ಶರಣು ಶರಣಾರ್ಥಿ ಗಳು🙏 ಹಾಗೂ ಧನ್ಯವಾದಗಳು🤝 ಜೈಬಸವ.🫡