ಲಿಂಗಾಯತ ಧರ್ಮ ಜಾಗೃತಿ ಕಾರ್ಯಕ್ರಮ
ಕೊಳ್ಳೇಗಾಲ
ತಾಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ಗುರುಮಲ್ಲೇಶ್ವರರ ಪಂಚಲೋಹ ಪುತ್ಥಳಿ ಅನಾವರಣ ಹಾಗೂ ರುದ್ದಪ್ಪ ಸ್ವಾಮೀಜಿಯವರ ಪುಣ್ಯಸ್ಮರಣೆ ಸಮಾರಂಭ ಶ್ರದ್ಧಾ-ಭಕ್ತಿಯಿಂದ ಭಾನುವಾರ ನೆರವೇರಿತು.
ಕಾರ್ಯಕ್ರಮವು ಮಂಗಳವಾದ್ಯಗಳ ನಾದದೊಂದಿಗೆ ಬಸವ ಸಂಸ್ಕೃತಿಯ ಪೂಜಾ ವಿಧಿವಿಧಾನಗಳೊಂದಿಗೆ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಆವರಣದಲ್ಲಿ ಆರಂಭಗೊಂಡಿತು.

ಕೊಳ್ಳೇಗಾಲ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ಮಠಕ್ಕೆ ಆಗಮಿಸಿ ಸೃಷ್ಟಿಸಿದ್ದರು.
ಈ ಐತಿಹಾಸಿಕ ಕ್ಷಣವು ಕೊಳ್ಳೇಗಾಲ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರನ್ನು ಸೆಳೆದು ಹಬ್ಬದ ವಾತಾವರಣ ಸೃಷ್ಟಿಸಿತ್ತು.

ಗ್ರಾಮ ಹೊರವಲಯದಲ್ಲಿ ಸಜ್ಜುಗೊಂಡಿದ್ದ ಬೃಹತ್ ವೇದಿಕೆಯಲ್ಲಿ ಧಾರ್ಮಿಕ ಸಭೆಗೆ ಚಾಲನೆ ನೀಡಿದ ಸುತ್ತೂರು ಮಠದ ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಗುರುಮಲ್ಲೇಶ್ವರರು ಬಸವಣ್ಣನವರ ಆದರ್ಶಗಳಂತೆ ನಡೆದವರು. ಇಂದೂ 300ಕ್ಕೂ ಹೆಚ್ಚು ಗುರುಮಲ್ಲೇಶ್ವರರ ಮಠಗಳಿರುವುದು ಅವರ ಪ್ರಭಾವಕ್ಕೆ ಸಾಕ್ಷಿಯಾಗಿದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅನೇಕ ಗಣ್ಯರು, ಗುರುಮಲ್ಲೇಶ್ವರರು ಕೇವಲ ಮಠಾಧೀಶರಲ್ಲ, ಅವರು ಶರಣ ಪರಂಪರೆಯ ಜೀವಂತ ದೀಪ. ಅವರ ಜೀವನವು ಬಸವತತ್ವದ ಅನುಷ್ಠಾನಕ್ಕೆ ಆದರ್ಶವಾಗಿದೆ, ಎಂದು ಹೇಳಿದರು.

ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಧಾರ್ಮಿಕ ಜಾಗೃತಿ ಮತ್ತು ನೈತಿಕ ಮೌಲ್ಯಗಳ ಬೆಳೆವಣಿಗೆಗೆ ಇಂತಹ ಕಾರ್ಯಕ್ರಮಗಳು ಅಗತ್ಯವೆಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಸ್ವಾಮೀಜಿಗಳು ಗುರುಮಲ್ಲೇಶ್ವರರ ಭವ್ಯ ಪುತ್ಥಳಿ ಅವರ ದಾಸೋಹ, ಸಮಾನತೆ ಹಾಗೂ ಸೇವಾ ತತ್ವಗಳ ಆಧ್ಯಾತ್ಮಿಕ ಸಂಕೇತವಾಗಿದೆ ಎಂದು ಹೇಳಿದರು.
ಯುವಪೀಳಿಗೆಗೆ ಲಿಂಗಾಯತ ಧರ್ಮ, ಬಸವ ಸಂಸ್ಕೃತಿ ಹಾಗೂ ಬಸವಾದಿ ಶರಣರಮೌಲ್ಯಗಳನ್ನು ಪರಿಚಯಿಸುವುದು ಪುತ್ಥಳಿ ಸ್ಥಾಪನೆಯ ಉದ್ದೇಶ ಎಂದು ಆಯೋಜಕರು ತಿಳಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಮಠದ ಪದಾಧಿಕಾರಿಗಳು, ಭಕ್ತವೃಂದ, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಸಹಕಾರ ಮಹತ್ತರವಾಗಿತ್ತು. ಶಿಸ್ತಿನ ವ್ಯವಸ್ಥೆ ಮತ್ತು ಬಸವ ಸಂಸ್ಕೃತಿಯ ಭಾವಪೂರ್ಣ ವಾತಾವರಣ ಕಾರ್ಯಕ್ರಮದ ವಿಶೇಷತೆಯಾಗಿ ಗಮನ ಸೆಳೆಯಿತು.
ಇಂತಹ ಆಧ್ಯಾತ್ಮಿಕ ಹಾಗೂ ಬಸವ ಸಂಸ್ಕೃತಿಪರ ಕಾರ್ಯಕ್ರಮಗಳು ಸಮಾಜದಲ್ಲಿ ಏಕತೆ, ಸೇವಾ ಮನೋಭಾವ ಮತ್ತು ಬಸವ ತತ್ವದ ಚಿಂತನೆಗಳನ್ನು ಬಲಪಡಿಸುತ್ತವೆ ಎಂಬ ಸಂದೇಶವನ್ನು ಈ ಉತ್ಸವ ಮತ್ತೊಮ್ಮೆ ಸಾರಿತು.

ಗ್ರಾಮದ ಹಿರಿಯರು ಸಂತೋಷ ವ್ಯಕ್ತಪಡಿಸಿ, “ತೇರಂಬಳ್ಳಿ ಗ್ರಾಮದ ಧಾರ್ಮಿಕ ಇತಿಹಾಸದಲ್ಲಿ ಇದೊಂದು ಹೊಸ ಅಧ್ಯಾಯ ಆರಂಭವಾಗಿದೆ. ಗುರುಮಲ್ಲೇಶ್ವರರ ಪುತ್ಥಳಿ ನಮ್ಮ ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಲಿದೆ”ಎಂದು ಹೇಳಿದರು.
ಬೆಂಗಳೂರು ಜಯದೇವ ಆಸ್ಪತ್ರೆ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಮಾತನಾಡಿ, ಕಾಯಕ ಎಂದರೆ ಹೊಟ್ಟೆಗೋಸ್ಕರ ಮಾಡುವುದಲ್ಲ. ದೈವಿ ಸ್ವರೂಪವಾದ ಸಮಾಜಕ್ಕೆ ದಾಸನಾಗಿ,ಮಾಡುವ ಕಾರ್ಯ ಎಂದು ಹೇಳಿದರು.
ಗುಂಡ್ಲುಪೇಟೆ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್, ಮಾತನಾಡಿ ಗುರುಮಲ್ಲೇಶ್ವರರ ದಾಸೋಹ ಪರಂಪರೆ ವಿಶೇಷವಾದದ್ದು, ಶ್ರೀಗಳು ದೇವನೂರು ಮಠದಲ್ಲಿ ಹಚ್ಚಿದ ದೀಪ ಉರಿಯುತ್ತಲೇ ಇದೆ ಎಂದರು.

ಗುರು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಾಲೂರು ಮಠ, ಮರಿಯಾಲ ಶ್ರೀ ಮುರುಘ ರಾಜೇಂದ್ರ ಮಹಾಸಂಸ್ಥಾನದ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ಮುಡಿಗುಂಡ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ, ತೇರಂಬಳ್ಳಿ, ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಲಿಂಗರಾಜ ಸ್ವಾಮೀಜಿ, ಕಾರಪುರ ವಿರಕ್ತ ಮಠದ ಶ್ರೀ ಮರಿ ತೋಂಟದಾರ್ಯ ಸ್ವಾಮೀಜಿ, ಕೆಸ್ತೂರು ಪಟ್ಟದ ಮಠದ ತೋಂಟದಾರ್ಯ ಸ್ವಾಮೀಜಿ, ಕುಂತೂರು ಮಠದ ಶ್ರೀ ಶಿವಪ್ರಭುಸ್ವಾಮೀಜಿ ಮತ್ತು ವಿವಿಧ ಮಠದ ಹರಗೂರು ಚರಮೂರ್ತಿಗಳು, ಹನೂರು ಮಾಜಿ ಶಾಸಕ ಪರಿಮಳ ನಾಗಪ್ಪ, ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಹನೂರು ಮುಖಂಡ ನಿಶಾಂತ್, ಅ.ಭಾ.ವೀ.ಲಿಂ.ಮಹಾಸಭಾ ಅಧ್ಯಕ್ಷ ಮೂಡುಪುರ ನಂದೀಶ್, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎಂ.ಲೋಕೇಶ್, ಉದ್ಯಮಿಗಳಾದ ಎನ್.ಶ್ರೀಕಂಠಮೂರ್ತಿ, ಎಂ.ಗಣೇಶ್, ತೇರಂಬಳ್ಳಿ

ತೇರಂಬಳ್ಳಿ ಗ್ರಾಮದ ಗುರುಮಲ್ಲೇಶ್ವರ ದಾಸೋಹ ಮಠದ ವತಿಯಿಂದ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3
:
