ಬೆಂಗಳೂರು
ಪಂಚಮಸಾಲಿ ಸಮುದಾಯದ 200ಕ್ಕೂ ಅಧಿಕ ಹಿರಿಯ ಮುಖಂಡರ ನಿಯೋಗದವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿಯಾದರು.
ಶಾಸಕ ಬಿ.ಆರ್. ಪಾಟೀಲ್ ಮತ್ತು ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ಬಂದಿದ್ದ ನಿಯೋಗ ಸಮುದಾಯಕ್ಕೆ 2(ಎ) ಮೀಸಲಾತಿ ಹಾಗೂ ಪಂಚಮಸಾಲಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಅನುದಾನ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿಪತ್ರ ಸಲ್ಲಿಸಿದರು.
