ಬೆಳಗಾವಿ
ಅಕ್ಟೋಬರ್ 18ರಂದು ಪಂಚಮಸಾಲಿ ಮೀಸಲಾತಿ ವಿಷಯ ಚರ್ಚಿಸಲು ಕರೆದಿದ್ದ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರದ್ದು ಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅಕ್ಟೋಬರ್ 18ರಂದು ಬೆಂಗಳೂರಿಗೆ ಬನ್ನಿ ಸಭೆ ಮಾಡೋಣ ಎಂದು ಸ್ವತಃ ಮುಖ್ಯಮಂತ್ರಿಗಳೇ ಆಹ್ವಾನಿಸಿದ್ದರು.
ಆದರೆ, ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ನಮಗೆ ಮಾಹಿತಿ ನೀಡಿದ್ದು, 18ರಂದು ಮುಖ್ಯಮಂತ್ರಿಗಳು ದೆಹಲಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ. ಈ ವೇಳೆ ಮತ್ತೊಂದು ದಿನಾಂಕ ನೀಡುವಂತೆ ಕೇಳಿದ್ದೆವು. ಆದರೆ, ಇದುವರೆಗೂ ಯಾವುದೇ ದಿನಾಂಕ ಕೊಡದೆ ವಿಳಂಬ ಮಾಡುತ್ತಿದ್ದಾರೆ.
ಹಾಗಾಗಿ, ನಮ್ಮ ವಕೀಲರು, ಅವರು ದಿನಾಂಕ ಕೊಡದಿದ್ದರೂ ಪರವಾಗಿಲ್ಲ, ನಾವು ಅ.18ರಂದು ದೆಹಲಿಗೆ ಹೋಗೋಣ ಎಂದಿದ್ದಾರೆ. ಅಂದು ಯಾವ ಸಮಯದಲ್ಲಿ, ಸ್ಥಳದಲ್ಲಿ ಸಭೆ ಮಾಡುತ್ತಾರೆ ಮಾಡಲಿ ಎಂದು ನಿರ್ಧರಿಸಿದ್ದೇವೆ ಎಂದು ಹೇಳಿದರು.