ದಾವಣಗೆರೆ
ದಾವಣಗೆರೆಯಲ್ಲಿ ನಡೆದ ಪಂಚಪೀಠಗಳ, ಪಂಚಪೀಠಾಧೀಶರ ಶೃಂಗ ಸಭೆಯಲ್ಲಿ ಎಂದಿನಂತೆ ಅದೇ ರಾಗ, ಅದೇ ತಾಳ ಎಂಬಂತೆ ಕಲ್ಪನೆಯ ಸುಳ್ಳುಗಳ ಸರಮಾಲೆ ಬಿಚ್ಚಿಟ್ಟ ಪುಂಡರ ಗೋಷ್ಠಿ ಅದಾಗಿತ್ತು.
ಎಲ್ಲಾ ಪಕ್ಷಗಳ ಲಿಂಗಾಯತ ರಾಜಕಾರಣಿಗಳು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಕನ್ನಡ ನೆಲಮೂಲದ ಬಸವ ಚಳುವಳಿ, ಬದುಕುಕೊಟ್ಟ ಗುರು ಬಸವಣ್ಣನವರನ್ನು ಮರೆತು, ಜೀವಂತ ಮಾನವರ ಮೇಲೆ ಸವಾರಿ ಮೌಡ್ಯ ಸಂಪ್ರದಾಯಕ್ಕೆ ಜೈ ಎನ್ನುತ್ತಿದ್ದಾರೆ.
ಹೌದಪ್ಪ ಜಾಗದಲ್ಲಿ ಹೌದಪ್ಪ, ಅಲ್ಲಪ್ಪ ಜಾಗದಲ್ಲಿ ಅಲ್ಲಪ್ಪ ಎನ್ನುವ ಇಂತಹ ಬಸವದ್ರೋಹಿ ಲಿಂಗಾಯತ ರಾಜಕಾರಣಿಗಳನ್ನು ಚುನಾವಣೆ ಸಂದರ್ಭದಲ್ಲಿ ಸಂಪೂರ್ಣ ಬಹಿಷ್ಕರಿಸಿ ಪಾಠ ಕಲಿಸಬೇಕಾಗಿದೆ.
ಯಾವುದೇ ಕಾರಣಕ್ಕೂ ಲಿಂಗಾಯತ ಪದದೊಂದಿಗೆ ವೀರಶೈವ ಪದ ಜೋಡಿಸಲು ಅವಕಾಶ ಕೊಡದೆ ಎಲ್ಲಾ ಬಸವಪರ ಸಂಘಟನೆಗಳು ಒಗ್ಗಟ್ಟಾಗಿ ಹೋರಾಡಬೇಕು. ಇದು ನಮ್ಮ ಅಸ್ತಿತ್ವದ ಪ್ರಶ್ನೆಯಾಗಿದೆ.