ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಇಂದು ಗ್ಯಾಲರಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತಾಲೂಕು ಘಟಕದ 12ನೇ ವರ್ಷದ ಶ್ರಾವಣ ಸಂಜೆ ಉಪನ್ಯಾಸ ಕಾರ್ಯಕ್ರಮವನ್ನು ಆಳಂದದಲ್ಲಿ ತೋಂಟದಾರ್ಯ ಅನುಭವ ಮಂಟಪದ ಪೂಜ್ಯ ಕೋರಣೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಳಂದ ತಾಲೂಕಿನ ತಹಶೀಲ್ದಾರ ಅಣ್ಣಾರಾವ ಪಾಟೀಲ, ಶರಣಬಸಪ್ಪ ಎಸ್. ಪಾಟೀಲ, ಬಾಬುರಾವ ಮಡ್ಡೆ, ಸಂಜಯ ಎಸ್. ಪಾಟೀಲ ಭಾಗವಹಿಸಿದ್ದರು.

ಸಿಂಧನೂರಿನ ಸಂಕೇತ ಕಾಲೇಜಿನ ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ" ವಿಷಯ ಕುರಿತು ಅನುಭಾವ ಕಾರ್ಯಕ್ರಮ ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ನಡೆಸಿಕೊಡಲಾಯಿತು. ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. (ಮಾಹಿತಿ/ಚಿತ್ರ ವೀರಣ್ಣ ಗೌಡರ್)
)ಸಿಂಧನೂರಿನ ಸಂಕೇತ ಕಾಲೇಜಿನ ವಿದ್ಯಾರ್ಥಿಗಳಿಗೆ "ವಚನಗಳಲ್ಲಿ ವ್ಯಕ್ತಿತ್ವ ವಿಕಸನ" ವಿಷಯ ಕುರಿತು ಅನುಭಾವ ಕಾರ್ಯಕ್ರಮ ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ನಡೆಸಿಕೊಡಲಾಯಿತು. ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಶರಣರ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. (ಮಾಹಿತಿ/ಚಿತ್ರ ವೀರಣ್ಣ ಗೌಡರ್)
ಧಾರವಾಡದಲ್ಲಿ ವಚನ ದರ್ಶನ ಪುಸ್ತಕ ಬಿಡುಗಡೆ ಮಾಡಲು ಯೋಜನೆಯಾಗಿರುವ ಕಾರ್ಯಕ್ರಮದ ವಿರುದ್ಧ, ಜಾಗತಿಕ ಲಿ೦ಗಾಯತ ಮಹಾಸಭಾ ಧಾರವಾಡ ಜಿಲ್ಲಾ ಯುವ ಘಟಕ ಹಾಗೂ ಬಸವಪರ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಆಗಸ್ಟ್ ೬ ಮನವಿ ಸಲ್ಲಿಸಲಾಯಿತು.
ವಿಶ್ವಗುರು ಬಸವ ಜ್ಯೋತಿ ಯಾತ್ರೆಯ ಕಾರ್ಯಕ್ರಮ ಕಿತ್ತೂರಿನ ಶರಣರಾದ ನಾಗರಾಜ್ ಮಿರಜಿಗಿ ಅವರ ಮನೆಯಲ್ಲಿ ಇತ್ತೀಚೆಗೆ ನೆರವೇರಿತು. ರಾಷ್ಟ್ರೀಯ ಬಸವದಳದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲುಗೊಂಡರು.
ವಿಶ್ವಗುರು ಬಸವ ಜ್ಯೋತಿ ಯಾತ್ರೆಯ ಕಾರ್ಯಕ್ರಮ ಬೆಳಗಾವಿಯ ಶರಣರಾದ ಕಿರಣ್ ಹರೀಶ್ ಕಿಚಡಿ ಮತ್ತು ಬಸವಣ್ಣಪ್ಪ ಕೋಣಿ ಅವರ ಮನೆಯಲ್ಲಿ ಇತ್ತೀಚೆಗೆ ನೆರವೇರಿತು. ರಾಷ್ಟ್ರೀಯ ಬಸವದಳದ ಮತ್ತು ಲಿಂಗಾಯತ ಧರ್ಮ ಸಭಾದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲುಗೊಂಡರು..

ದಾವಣಗೆರೆ ಜಿಲ್ಲೆಯ ಹೆಮ್ಮನಬೇತೂರು ಗ್ರಾಮದಲ್ಲಿ ಆಗಸ್ಟ್ ೬ರಂದು ಬಸವ ಪಂಚಮಿ ಆಚರಿಸಲಾಯಿತು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಎಮ್)
ದಾವಣಗೆರೆ ಜಿಲ್ಲೆಯ ಹೆಮ್ಮನಬೇತೂರು ಗ್ರಾಮದಲ್ಲಿ ಆಗಸ್ಟ್ ೬ರಂದು ಬಸವ ಪಂಚಮಿ ಆಚರಿಸಲಾಯಿತು. (ಮಾಹಿತಿ/ಫೋಟೋ ವಿಶ್ವೇಶ್ವರಯ್ಯ ಬಿ ಎಮ್)
ಶ್ರಾವಣ ಮಾಸದ ಅಂಗವಾಗಿ ಆಗಸ್ಟ್ ೬ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದಲ್ಲಿ ಶರಣೆ ಗಿರಿಜಕ್ಕ ಧರ್ಮರೆಡ್ಡಿ ಅವರಿಂದ "ಶಿವಶರಣೆಯರ ವಚನಾನುಭವ" ಪ್ರವಚನ ಆರಂಭಗೊಂಡಿತು. ಸೆಪ್ಟೆಂಬರ್ ೦೨ರವರೆಗೆ ಮಠದಲ್ಲಿ ಪ್ರತಿದಿನ ಸಂಜೆ ೦೭ ಗಂಟೆಗೆ ನಡೆಯುವ ಕಾರ್ಯಕ್ರಮದ ಸನ್ನಿಧಿಯನ್ನು ಪೂಜ್ಯ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ವಹಿಸುವರು. (ಮಾಹಿತಿ/ಚಿತ್ರ ರವೀಂದ್ರ ಹೊನವಾಡ)
ಬೆಟಗೇರಿಯ ಒಕ್ಕಲಗೇರಿ ಓಣಿಯಲ್ಲಿ ೨೦೨೪ರ ವಚನ ಶ್ರಾವಣ ಕಾರ್ಯಕ್ರಮಕ್ಕೆ ಬಸವ ಧ್ವಜಾರೋಹಣ ಮೂಲಕ ಚಾಲನೆ ನೀಡಲಾಯಿತು. ಪ್ರತಿದಿನ ಸಂಜೆ 5:30 ಘಂಟೆಗೆ ಗದಗ ಬೆಟಗೇರಿಯ ಬೇರೆ ಬೇರೆ ಓಣಿಗಳಲ್ಲಿ ನಡೆಯುವ ಶರಣರ ವಚನ ಚಿಂತನ ಕಾರ್ಯಕ್ರಮವು ಬಸವ ದಳ, ಲಿಂಗಾಯತ ಪ್ರಗತಿಶೀಲ ಸಂಘ, ಬಸವ ಕೇಂದ್ರ ಸಂಘಟನೆಗಳ ಆಶ್ರಯದಲ್ಲಿ ನಡೆಯಲಿದೆ. (ಮಾಹಿತಿ/ಚಿತ್ರ ರವೀಂದ್ರ ಹೊನವಾಡ)
ವಿಶ್ವಗುರು ಬಸವ ಜ್ಯೋತಿ ಕಾರ್ಯಕ್ರಮವು ಬಳ್ಳಾರಿಯ ಅಂದ್ರಾಳಿನ ಶರಣ ಕಾರೆಕಲ್ಲು ರಾಜಣ್ಣನವರ ಮನೆಯಲ್ಲಿ ಯಶಸ್ವಿಯಿಂದ ನಡೆಯಿತು. ಗುರು ಪೂಜೆ , ಪ್ರಾರ್ಥನೆ , ಇಷ್ಟಲಿಂಗ ಪೂಜೆ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು. ಬಳ್ಳಾರಿಯ ರಾಷ್ಟ್ರೀಯ ಬಸವದಳ ಸದಸ್ಯರು ಭಾಗವಹಿಸಿದ್ದರು. (ಮಾಹಿತಿ/ ಚಿತ್ರ ರವಿ ಕುಮಾರ್)
List of Images
1/14

Leave a comment