ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಔರಾದ ತಾಲ್ಲೂಕು ಎಕಲಾರದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವಧರ್ಮ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಪೂಜ್ಯ ಸತ್ಯಾದೇವಿ ಮಾತಾಜಿಯವರು ಅನುಭಾವದ ನುಡಿಗೈದರು. ಮಾಹಿತಿ/ಚಿತ್ರ: ಶಿವಕುಮಾರ
ರಾಷ್ಟ್ರೀಯ ಬಸವದಳದ ಸ್ಥಾಪನೆ ಮತ್ತು ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಜೀವನದ ಬಗ್ಗೆ ಚನ್ನಬಸವ ಸ್ವಾಮೀಜಿ ಮಾತನಾಡಿದರು. ಡಿ.ಬಿ.ಗೌಡರ, ಅಶೋಕ ಶೀಲವಂತರ, ಮನೋಹರ ಜಮಖಂಡಿ ಮತ್ತೀತರರು ಉಪಸ್ಥಿತರಿದ್ದರು. ಮಾಹಿತಿ/ಚಿತ್ರ: ಮನೋಹರ ಜಮಖಂಡಿ
ಮನಗೂಳಿಯ ಮಾದರ ಚೆನ್ನಯ್ಯನವರ ಓಣಿಯಲ್ಲಿನ ಮಕ್ಕಳಿಗೆ ರವಿವಾರ ಹಾಗೂ ಸೋಮವಾರದಂದು ವಿರತೀಶಾನಂದ ಸ್ವಾಮೀಜಿ ವಚನ ಪಾಠ ಮತ್ತು ಇಷ್ಟಲಿಂಗ ದೀಕ್ಷೆಯನ್ನು ನೀಡಿದರು.
ಬೆಂಗಳೂರಿನ ಬಸವ ಗಂಗೋತ್ರಿ ಆಶ್ರಮ ಕುಂಬಳಗೋಡುದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಬಸವದಳ ಹುಟ್ಟು ಹಬ್ಬ, ಪೂಜ್ಯ ಲಿಂಗಾನಂದ ಮಹಾಸ್ವಾಮಿಜಿಯವರ ಹಾಗೂ ಪೂಜ್ಯ ಡಾ.ಮಾತೆಗಂಗಾದೇವಿಯವರ ವರ್ಧಂತಿ ಕಾರ್ಯಕ್ರಮ ಜರುಗಿತು.
ಬೆಂಗಳೂರಿನ ಬಸವ ಗಂಗೋತ್ರಿ ಆಶ್ರಮ ಕುಂಬಳಗೋಡುದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಬಸವದಳ ಹುಟ್ಟು ಹಬ್ಬ, ಪೂಜ್ಯ ಲಿಂಗಾನಂದ ಮಹಾಸ್ವಾಮಿಜಿಯವರ ಹಾಗೂ ಪೂಜ್ಯ ಡಾ.ಮಾತೆಗಂಗಾದೇವಿಯವರ ವರ್ಧಂತಿ ಕಾರ್ಯಕ್ರಮ ಜರುಗಿತು.
List of Images
1/6

Leave a comment