ಚಿರಕನಹಳ್ಳಿ
ಗುಂಡ್ಲುಪೇಟೆ ತಾಲೂಕಿನ ಚಿರಕನಹಳ್ಳಿಯಲ್ಲಿ ಯಶಸ್ವಿಯಾಗಿ ಇಷ್ಟಲಿಂಗಧಾರಣೆ, ಶಿವಯೋಗ ಮತ್ತು ಪ್ರವಚನ ಕಾರ್ಯಕ್ರಮಗಳು ಗುರುವಾರ ನಡೆದವು.
ಕಾರ್ಯಕ್ರಮದಲ್ಲಿ ಪೂಜ್ಯ ಬಸವಯೋಗಿಪ್ರಭುಗಳು ಮತ್ತು ಪೂಜ್ಯ ಇಮ್ಮಡಿ ಉದ್ದಾನಸ್ವಾಮೀಗಳು ನಿಜಾಚಾರಣೆ ಮತ್ತು ಶಿವಯೋಗದ ಮಹತ್ವದ ಬಗ್ಗೆ ತಿಳಿಸಿದರು.
ಚಾಮರಾಜನಗರ ಜಿಲ್ಲೆ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿಗಳಾದ ಶಿವಪ್ರಸಾದ್ ರವರು ತಮ್ಮ ಸಂಘಟನೆಯನ್ನು ಪರಿಚಯ ಮಾಡಿಕೊಟ್ಟರು.
ಬಸವತತ್ವ ಪ್ರಚಾರಕರಾದ ಚೌಹಳ್ಳಿ ನಿಂಗ ರಾಜಪ್ಪನವರು ಇಷ್ಟಲಿಂಗದ ಮಹತ್ವದ ಬಗ್ಗೆ ತಿಳಿಸಿದರು.
ಗ್ರಾಮದ ಮುಖಂಡರಾದ ಮಹದೇವಪ್ಪನವರನ್ನು , ಕಾರ್ಯಕ್ರಮದ ಆಯೋಜಕರಾದ ರವಿಯವರನ್ನು ಮತ್ತು ಶಿವಪ್ರಸಾದ್ ರವರನ್ನು ಸನ್ಮಾನಿಸಲಾಯಿತು.
ಚಿರಕನಹಳ್ಳಿಯ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು .