ರಾಜಾಶ್ರಯ ಬಳಸಿಕೊಂಡು ಬೆಳೆದ ಪಂಚಾಚಾರ್ಯರ ಪೀಠಗಳು

ಪಂಚಾಚಾರ್ಯರ ನಿಜ ಸ್ವರೂಪ 9/12

ಸಮ ಸಮಾಜ ಕಟ್ಟಲು ಹೊರಟ ಲಿಂಗಾಯತರು ರಾಜರ ವಿರೋಧದಿಂದ ನಲುಗಿದರು. ಆದರೆ ರಾಜಾಶ್ರಯ ಬಳಸಿಕೊಂಡು ವೀರಶೈವರು ಪಂಚಾಚಾರ್ಯ ಪೀಠಗಳನ್ನು ಕಟ್ಟಿ ಬೆಳೆಸಿದರು.

೧೪ನೇ ಶತಮಾನದಲ್ಲಿ ಕಾಕತೀಯರ ಪತನವಾಗುತ್ತಿದ್ದಂತೆ ಆರಾಧ್ಯರ ಒಂದು ತಂಡ ಆಂಧ್ರದಿಂದ ವಿಜಯನಗರಕ್ಕೆ ವಲಸೆ ಬಂದು, ತಮ್ಮ ವೀರಶೈವ ತತ್ವವನ್ನು ಪ್ರಸಾರ ಮಾಡಲು ಶುರು ಮಾಡಿದರು.

ವಚನಗಳಿಗೆ ಆಗಮ, ಸಂಸ್ಕೃತ ಶ್ಲೋಕ ಬೆರೆಸಿ ಶರಣ ಸಾಹಿತ್ಯವನ್ನು ವೀರಶೈವ ಸಾಹಿತ್ಯವನ್ನಾಗಿ ಪರಿವರ್ತಿಸಿದರು. ಹಂಪಿಯಲ್ಲಿ ನಡೆದಿದ್ದು ಲಿಂಗಾಯತದ ಪುನರುಜ್ಜೀವನವಲ್ಲ ವೀರಶೈವೀಕರಣ.

ಸಂಗಮ ವಂಶ ಪತನವಾಗುತ್ತಿದಂತೆ ಶಿವಗಂಗೆಯ ಬಳಿ ನೆಲೆಸಿದ್ದ ಇನ್ನೊಂದು ಆರಾಧ್ಯರ ತಂಡ ಸೇರಿಕೊಂಡರು. ಇಬ್ಬರೂ ಸೇರಿ ಅಲ್ಲಿ ಚತುರಾಚಾರ್ಯ ಪೀಠಗಳನ್ನು ಸೃಷ್ಟಿಸಿದರು.

ನಂತರ ಕೆಳದಿಯ ನಾಯಕರ ಆಶ್ರಯ ಬಯಸಿ ರಂಭಾಪುರಿ ಪೀಠ ಬಾಳೇಹಳ್ಳಿಗೆ ವಲಸೆ ಹೋಯಿತು. ಅವರ ಸಹಾಯದಿಂದ ಚತುರಾಚಾರ್ಯರು ಕಾಶಿ ಮಠವೊಂದನ್ನು ಸೇರಿಸಿಕೊಂಡು ಪಂಚಾಚಾರ್ಯರಾದರು.

ಕನ್ನಡದ ಅರಸರು ಸಮಾಜದಲ್ಲಿ ಸಮಾನತೆ, ವೈಚಾರಿಕತೆ ಬಿತ್ತುವ ಶರಣ ತತ್ವದಿಂದ ದೂರ ನಿಂತು, ವೈದಿಕತೆ ತುಂಬಿಕೊಂಡು ತಮ್ಮನ್ನು ಎಂದೂ ಪ್ರಶ್ನಿಸದ ವೀರಶೈವ ತತ್ವವನ್ನು ಪ್ರೋತ್ಸಾಹಿಸಿದರು.

(‘ಪಂಚಾಚಾರ್ಯರ ನಿಜ ಸ್ವರೂಪ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭.)

Share This Article
Leave a comment

Leave a Reply

Your email address will not be published. Required fields are marked *