ರಾಯಚೂರ ಬಸವ ಕೇಂದ್ರದಲ್ಲಿ ‘ವಚನ ವಿಜಯೋತ್ಸವ ದಿನಾಚರಣೆ’

ಬಸವ ಮೀಡಿಯಾ
ಬಸವ ಮೀಡಿಯಾ

ರಾಯಚೂರ:

ಸಮಾನತೆ ಹಾಗೂ ಕಾಯಕತತ್ವ ಮೊಟ್ಟ ಮೊದಲಿಗೆ ನೀಡಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಲಿಂಗದೀಕ್ಷೆ ಪಡೆದು ಶರಣ ಧರ್ಮಕ್ಕೆ ಸೇರಿದ ಶರಣ ಹರಳಯ್ಯನವರ ಮಗ ಶೀಲವಂತನಿಗೆ ಮಂತ್ರಿ ಮಧುವರಸರ ಮಗಳು ಲಾವಣ್ಯಇವರ ಕಲ್ಯಾಣ ಮಹೋತ್ಸವ ಅನುಭವ ಮಂಟಪದಲ್ಲಿ ಎಲ್ಲ ಶರಣ ಬಂಧುಗಳ ಒಪ್ಪಿಗೆ ಮೇರೆಗೆ ಬಸವಣ್ಣನವರ ನೇತೃತ್ವದಲ್ಲಿ ನಡೆಯಿತು.

ಇದೆ ನೆಪವನ್ನು ಇಟ್ಟುಕೊಂಡು ಶರಣ ವಿರೋಧಿಗಳಾದ ಕೊಂಡಿ ಮಂಚಣ್ಣ ಹಾಗೂ ಪುರೋಹಿತಶಾಹಿ ವರ್ಗ ಸೇರಿಕೊಂಡು ಬಿಜ್ಜಳನಲ್ಲಿ ದೂರುಕೊಟ್ಟು, ಇದನ್ನು ನಂಬಿದ ರಾಜನು ಬಸವಣ್ಣನವರಿಗೆ ನೀವು ಮಾಡಿದ್ದು ತಪ್ಪು, ತಾವು ಕ್ಷಮೆಯಾಚಿಸಬೇಕೆಂದು ಹೇಳಿದಾಗ, ಬಸವಣ್ಣನವರು ನಾನು ತಪ್ಪನ್ನು ಮಾಡಿಲ್ಲ. ಪರಸ್ಪರರ ಒಪ್ಪಿಗೆ ಮೇರೆಗೆ ಹಾಗೂ ಅನುಭವ ಮಂಟಪ ಎಲ್ಲ ಶರಣ ಬಳಗದ ಒಪ್ಪಿಗೆ ಮೇರೆಗೆ ಕಲ್ಯಾಣ ಮಹೋತ್ಸವ ನಡೆದಿದೆ ಎಂದಾಗ, ಬಿಜ್ಜಳ ರಾಜನು ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ನೀಡಿದಾಗ, ಬಸವಣ್ಣನವರು ಮಂತ್ರಿ ಪದವನ್ನು ತ್ಯಾಗ ಮಾಡಿ ಬಸವಕಲ್ಯಾಣ ತ್ಯಜಿಸಲು ಮುಂದಾಗುತ್ತಾರೆ. ಬಿಜ್ಜಳನು ಹರಳಯ್ಯ – ಮಧುವರಸ ಶರಣರಿಗೆ ಎಳೆಹೂಟೆ ಶಿಕ್ಷೆ ವಿಧಿಸುತ್ತಾನೆ.

ಇದನ್ನೆಲ್ಲ ಕಂಡು ಪ್ರತಿಭಟಿಸಿ, ಜೀವಕ್ಕೆ ಹೆದರದೆ ‘ಮರಣವೇ ಮಹಾನವಮಿ ‘ ಎಂದು ಬಿಜ್ಜಳನ ಸೈನಿಕರೊಂದಿಗೆ ಹೋರಾಡಿ ವಚನ ಸಾಹಿತ್ಯ ಉಳಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಇದುವೇ ವಚನ ವಿಜಯೋತ್ಸವ ಎಂದು ಶರಣ ಬೆಟ್ಟಪ್ಪ ಕಸ್ತೂರಿಯವರು ಹೇಳಿದರು.

ಬಸವ ಕೇಂದ್ರದ ವತಿಯಿಂದ ಈಚೆಗೆ ‘ವಚನ ವಿಜಯೋತ್ಸವ ದಿನಾಚರಣೆ’ ಅಂಗವಾಗಿ ನಡೆದ ಚಿಂತನಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶರಣ ಮಹದೇವಪ್ಪ ಏಗನೂರ ಅವರು ಮಾತನಾಡುತ್ತಾ, ಶರಣರ ವಿಚಾರಧಾರೆ ಇಡೀ ಮಾನವ ಜನಾಂಗವೆಲ್ಲ ಒಂದು ಕುಟುಂಬ ಎಂದು ಭಾವಿಸಿ, ಜಗತ್ತನ್ನು ಅಜ್ಞಾನದಿಂದ ಮುಕ್ತಗೊಳಿಸಿ ಹಾಗೂ ಭಕ್ತಿ ಸಾಮ್ರಾಜ್ಯದ ಸಂದೇಶಗಳನ್ನು ವಿಶ್ವದಲ್ಲಿ ನೆಲೆಗೊಳಿಸಬೇಕೆಂಬ ಆಶಯದೊಂದಿಗೆ ಹನ್ನೆರಡನೆಯ ಶತಮಾನದಲ್ಲಿ ವಚನ ಚಳುವಳಿ ಪ್ರಾರಂಭಗೊಂಡಿತೆಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ರಾಚನಗೌಡ ಕೋಳೂರವರು ಶರಣರ ಸಮನ್ವಯ ಬದುಕಿನ ಆದರ್ಶಪೂರ್ಣ ಕಲ್ಯಾಣ ಸಾಮ್ರಾಜ್ಯದ ನಿರ್ಮಾಣದೊಂದಿಗೆ ವಿಶ್ವಕ್ಕೆ ದಿಕ್ಸುಚಿಯಾಗಿ ಕಾರ್ಯನಿರ್ವಹಿಸಿದ ಅನುಭವ ಮಂಟಪ ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿಯೇ ಅದ್ವಿತೀಯವಾದುದೆಂದರು.

ಇದೆ ಸಂದರ್ಭದಲ್ಲಿ ದಾಸೋಹಿಗಳಾದ ಜೆ. ಬಸವರಾಜ, ಅಧ್ಯಕ್ಷರು, ಜಾ. ಲಿಂ. ಮಹಾಸಭೆ ತಾಲೂಕಾ ಘಟಕ, ರಾಯಚೂರು ಇವರನ್ನು ಸನ್ಮಾನಿಸಲಾಯಿತು.

ಶರಣರಾದ ಎಂ. ಚನ್ನಬಸವ, ಸರೋಜಮ್ಮ ಮಾಲಿಪಾಟೀಲ, ದೇವಣ್ಣ , ಸಿ. ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ವಚನ ಪ್ರಾರ್ಥನೆಯನ್ನು ಎಸ್. ಶಂಕರಗೌಡ ಹಾಗೂ ದೇವೇಂದ್ರಮ್ಮ ನಡೆಸಿಕೊಟ್ಟರು. ಮಲ್ಲಿಕಾರ್ಜುನ ಗುಡಿಮನಿ ಸ್ವಾಗತಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು. ವೆಂಕಣ್ಣ ಆಶಾಪುರ ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *