ರಾಯಚೂರಲ್ಲಿ ಎರಡು ದಿನಗಳ ಲಿಂಗಾಯತ ಧರ್ಮ ಅಧ್ಯಯನ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ

ರಾಯಚೂರು

ನಗರದಲ್ಲಿ ಎರಡು ದಿನಗಳ ಲಿಂಗಾಯತ ಧರ್ಮ ಅಧ್ಯಯನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಫೆಬ್ರವರಿ 08 ಮತ್ತು 09 ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ನಡೆಯಲಿರುವ ಶಿಬಿರದಲ್ಲಿ ಲಿಂಗಾಯತ ಧರ್ಮದ ಇತಿಹಾಸ, ಸಿದ್ಧಾಂತ ಹಾಗೂ ಸಂಘಟನೆ ಕುರಿತು ವಿಜಯಪುರದ ಶರಣ ಚಿಂತಕ ಡಾ. ಜೆ.ಎಸ್. ಪಾಟೀಲ ಉಪನ್ಯಾಸ ನೀಡಲಿದ್ದಾರೆ. ಸಂವಾದ ಸಹ ನಡೆಯಲಿದೆ.

ಶಿಬಿರಾರ್ಥಿಗಳಿಗೆ 2 ದಿನ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಪ್ರಸಾದ, ರಾತ್ರಿ ಪ್ರಸಾದ ಹಾಗೂ ವಸತಿ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

ಭಾಗವಹಿಸಲು ಇಚ್ಛಿಸುವವರು ಫೆಬ್ರವರಿ 05ರ ಒಳಗಾಗಿ ಈ ಕೆಳಕಂಡ ಮೊಬೈಲ್ ನಂಬರುಗಳಿಗೆ ಸಂಪರ್ಕಿಸಿ
ಹೆಸರನ್ನು ನೊಂದಾಯಿಸಿಕೊಳ್ಳಲು ತಿಳಿಸಲಾಗಿದೆ. 9972998530, 8618638629, 8618015417, 7795414266.

ಬಸವ ಕೇಂದ್ರ, ಅಕ್ಕನ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ, ಶರಣು ವಿಶ್ವವಚನ ಫೌಂಡೇಷನ್ ಜಿಲ್ಲಾ ಘಟಕಗಳು, ಜಿಲ್ಲಾ ವೀರಶೈವ ಲಿಂಗಾಯತ ಸಮಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಮತ್ತು ಕದಳಿ ವೇದಿಕೆ ಜಿಲ್ಲಾ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಅಧ್ಯಯನ ಶಿಬಿರ ನಡೆಯಲಿದೆ.

ಶಿಬಿರ ನಡೆಯುವ ವಿಳಾಸ:
ಬಸವ ಕೇಂದ್ರ,
ಫ್ಲಾಟ್ ನಂ. 45,
ಬಸವೇಶ್ವರ ಕಾಲೋನಿ,
ಲಿಂಗಸೂಗೂರು ರಸ್ತೆ,
ರಾಯಚೂರು

Share This Article
Leave a comment

Leave a Reply

Your email address will not be published. Required fields are marked *