ರಾಯಚೂರಿನಲ್ಲಿ ಎರಡು ದಿನಗಳ ಲಿಂಗಾಯತ ಧರ್ಮ ನಿಜಾಚರಣೆ ಕಮ್ಮಟ

ಬಸವ ಮೀಡಿಯಾ
ಬಸವ ಮೀಡಿಯಾ

ರಾಯಚೂರು

ನಗರದಲ್ಲಿ ನಾಳೆಯಿಂದ ಎರಡು ದಿನಗಳ ‘ಲಿಂಗಾಯತ ಧರ್ಮದ ತತ್ವ ಸಿದ್ಧಾಂತ ಮತ್ತು ವಚನಧಾರಿತ ನಿಜಾಚರಣೆ ಕಮ್ಮಟ’ ಮತ್ತು ‘ಶಿವಯೋಗ-ಇಷ್ಟಲಿಂಗ ಕಾರ್ಯಗಾರ’ ನಡೆಯಲಿದೆ.

ಮಾರ್ಚ್ 1

ಬೆ.9.30ರಿಂದ 10.30 ಷಟಸ್ಥಲ ಧ್ವಜಾರೋಹಣ ಹಾಗೂ ಉದ್ಘಾಟನಾ ಸಮಾರಂಭ ನಡೆಯಲಿದೆ.

ನಂತರದಲ್ಲಿ ‘ಪರಶಿವನ ಅಷ್ಟ ಮುಖಗಳೇ ಅಷ್ಟಾವರಣಗಳು’, ‘ಶರಣ ದೃಷ್ಟಿಯಲ್ಲಿ ಸೃಷ್ಟಿ ಮತ್ತು ದೇವರ ಸಂಬಂಧ’, ‘ಗರ್ಭ ದೀಕ್ಷಾ ಸಮಾರಂಭ ಮತ್ತು ನಾಮಕರಣ’, ‘ಗುರುಪ್ರವೇಶ ಪ್ರಾತ್ಯಕ್ಷಿಕೆ’, ‘ಶಂಕುಸ್ಥಾಪನೆ’, ‘ನಾಮಕರಣ ಆಚರಣೆಗಳು’, ‘ಶರಣರು ಕಂಡ ಬಸವಣ್ಣ’ ಮತ್ತಿತರ ವಿಷಯಗಳ ಕುರಿತು ಅನುಭಾವ ಇರಲಿದೆ.

ಮಾರ್ಚ್ 2

‘ಶಿವಯೋಗ’, ‘ಲಿಂಗಾಂಗಯೋಗ’, ‘ಕಲ್ಯಾಣ ಮಹೋತ್ಸವ ಚಿಂತನೆ-ಕಾರ್ಯವಿಧಾನ’, ‘ಅಂತ್ಯ ಸಂಸ್ಕಾರ ವಿಧಾನ-ಸ್ಮರಣೋತ್ಸವ’, ‘ಲಿಂಗಾಯತ ಧರ್ಮ ಇತರೆ ಧರ್ಮಗಳಿಗಿಂತ ಹೇಗೆ ಭಿನ್ನ’ ಮತ್ತಿತರ ವಿಷಯಗಳ ಕುರಿತು ಅನುಭಾವ ನಡೆಯಲಿದೆ.

ಸಂಜೆ 4.30ರಿಂದ 5.30ರವರೆಗೆ ಶಿಬಿರಾರ್ಥಿಗಳ ಅನಿಸಿಕೆ, ಸಮಾರೋಪ ಸಮಾರಂಭ ಜರುಗಲಿದೆ.

ಅನುಭಾವಿಗಳಾದ ಡಾ. ಸಿದ್ದಲಿಂಗ ಸ್ವಾಮಿಗಳು ಕೊಡಂಗಲ್, ಪಿ ರುದ್ರಪ್ಪ, ಎಸ್ಎನ್. ಅರಭಾವಿ, ಎಂ. ಎಂ. ಸಂಗೊಳ್ಳಿ, ಮಹಾಂತೇಶ ಕುಂಬಾರ, ಸಿದ್ದರಾಮ ಯಳವಂತಗಿ ಮತ್ತಿತರರು ವಿಷಯವಾಗಿ ಅನುಭಾವ ಹೇಳಿ, ಪ್ರಾತ್ಯಕ್ಷಿಕೆ ಮಾಡಿ ತೋರಿಸಲಿದ್ದಾರೆ.

ಆಸಕ್ತರು ಕಮ್ಮಟದ ಅಭ್ಯರ್ಥಿಗಳಾಗಿ ಪಾಲ್ಗೊಂಡು ಕಮ್ಮಟದ ಸದುಪಯೋಗ ಪಡೆದುಕೊಳ್ಳಲು, ಸಂಘಟನೆಗಳ ಪ್ರಮುಖರಾದ ರಾಚನಗೌಡ ಕೋಳೂರ, ಚನ್ನಬಸವಣ್ಣ ಮಹಾಜನಶೆಟ್ಟಿ, ಲಲಿತಾ ಬಸನಗೌಡ, ಸರ್ವಮಂಗಳ ಸಕ್ರಿ, ಬಸವರಾಜ ಜೆ, ಅನ್ನಪೂರ್ಣ ಮೇಟಿ, ಬೆಟ್ಟಪ್ಪ ಕಸ್ತೂರಿ ಮತ್ತಿತರರು ಕೋರಿದ್ದಾರೆ.

ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಅಕ್ಕನ ಬಳಗ, ಕದಳಿ ವೇದಿಕೆ, ಶರಣು ವಿಶ್ವ ವಚನ ಫೌಂಡೇಶನ್ ಹಾಗೂ ಜಿಲ್ಲೆಯ ಎಲ್ಲಾ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮ ನಡೆಯುವ ಸ್ಥಳ: ಬಸವೇಶ್ವರ ಕಾಲೋನಿ, ಬಸವ ಕೇಂದ್ರ, ಇದೇ ಮಾರ್ಚ್ 1 ಹಾಗೂ 2ರಂದು ಎರಡು ದಿನ, ಬೆಳಿಗ್ಗೆ 9.30ರಿಂದ ಸಂಜೆ 5:30 ಗಂಟೆಯವರೆಗೆ, ರಾಯಚೂರು ನಗರ.

Share This Article
2 Comments

Leave a Reply

Your email address will not be published. Required fields are marked *