ಅಸಹಿಷ್ಣುತೆಯ ಮಾತುಗಳು ಇತಿಹಾಸವಲ್ಲ: ರಾಜಶೇಖರ ಶಿವಾಚಾರ್ಯ ಶ್ರೀ ಹೇಳಿಕೆಗೆ ಖಂಡನೆ

ಬೆಂಗಳೂರು

ಮಾತಾಜಿ ಮಹಾದೇವಿ ಒಬ್ಬ ವ್ಯಕ್ತಿಯಲ್ಲ ಸಮಾಜದ‌ ಶಕ್ತಿ. ದಿಕ್ಕು ತಪ್ಪಿದ ಸಮಾಜಕ್ಕೆ ದಾರಿ ತೋರಿದ ವೀರ ಗಣಾಚಾರಿ ಪರಮಪೂಜ್ಯ ಮಹಾ ಜಗದ್ಗುರು ಮಾತೆ ಮಹಾದೇವಿ.

ಧಾರವಾಡದ ನವನಗರದ ಕಾಶಿ ಶಾಖಾಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿಯವರ ಹೇಳಿಕೆಯನ್ನು ಖಂಡಿಸುತ್ತೇವೆ. ನಾಲಿಗೆ ಇದೆ ಎಂದು ಬಾಯಿಗೆ ಬಂದುದ್ದನ್ನು ಹೇಳುವುದು ಅಸಹಿಷ್ಣುತೆಯ ಮಾತುಗಳು ಇತಿಹಾಸವಲ್ಲ. ನೀವು ಹುಟ್ಟಿದ್ದೀರಿ ಒಂದು ದಿನ ಸಾಯುತ್ತಿರಿ ಎಂಬುದು ನೆನಪಿರಲಿ.

ಮಾತೆ ಮಹಾದೇವಿ ತಾಯಿಯವರು ದೈಹಿಕವಾಗಿ ಕಾಲವಾದರೂ ಅವರು ಮಾಡಿದ ಕಾರ್ಯಗಳು, ಹೋರಾಟಗಳು ಕನ್ನಡನಾಡಿನ ಪ್ರತಿಯೊಬ್ಬ ಬಸವ ಅನುಯಾಯಿಗಳ, ವಿಚಾರವಾದಿಗಳ, ವಿರಕ್ತ ಸ್ವಾಮೀಜಿಗಳ ಹೃದಯದಲ್ಲಿ ಅವರು ಜೀವಂತವಾಗಿದ್ದಾರೆ.

ಇತಿಹಾಸವಿಲ್ಲದ ರೇಣುಕಾಚಾರ್ಯರನ್ನು ಮತ್ತು ಪಂಚಪೀಠಗಳನ್ನು ಹಾಗೂ ವೀರಶೈವವನ್ನು ಲಿಂಗಾಯತ ಪದಕ್ಕೆ ಜೋಡಿಸಿ ಸುಳ್ಳುಗಳನ್ನು ಹೇಳುತ್ತಾ ಮುಗ್ದ ಜನರನ್ನು ದಿಕ್ಕು ತಪ್ಪಿಸ ಬೇಡಿ.

ವೀರಶೈವ ಧರ್ಮವೇ ಆಗಿದ್ದರೆ ಅದರ ಸ್ಥಾಪಕರ ಬಗ್ಗೆ, ಸಿದ್ದಾಂತದ ಬಗ್ಗೆ ಪ್ರಸಾರ ಮಾಡಿ. ಅದು ಬಿಟ್ಟು ನಿಮ್ಮ ವೀರಶೈವ ಪದಕ್ಕೆ ಲಿಂಗಾಯತ ಅಂಟಿಸಿಕೊಂಡು ಗುರು ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟ ಸ್ವತಂತ್ರ ಲಿಂಗಾಯತ ಧರ್ಮದ ಅಸ್ಮಿತೆಗೆ ಧಕ್ಕೆ ತರುವ ಪ್ರಯತ್ನ ಮಾಡಬೇಡಿ. ಮಾತಾಜಿ ಸ್ಥಾಪಿಸಿದ ರಾಷ್ಟ್ರೀಯ ಬಸವ ದಳದ ಗಣಾಚಾರಿ ಪಡೆಯಿಂದ ಎಚ್ಚರಿಸುತ್ತೇವೆ.

  • ವೀರಶೈವ -ಲಿಂಗಾಯತ ಧರ್ಮ ಒಂದೇ ನಾಣ್ಯದ ಎರಡು ಮುಖಗಳು ಅದು ಹೇಗೆ? ವೀರಶೈವ ಸ್ಥಾವರ ಲಿಂಗ ಪೂಜಿಸಲು ಹೇಳುತ್ತೆ. ಅಸಮಾನತೆ ಭೋದಿಸುವ ವೇದಗಳನ್ನು ಮಾನ್ಯ ಮಾಡುತ್ತದೆ. ವೀರಶೈವ ಹಿಂದೂ ಧರ್ಮದ ಭಾಗ ಎಂದು ಹೇಳುತ್ತಾರೆ.

ಆದರೆ ಲಿಂಗಾಯತ ಧರ್ಮ ಅರಿವು ಮತ್ತು ಸಮಾನತೆಯ ಕುರುಹಾದ ಇಷ್ಟಲಿಂಗದ ಅನುಸಂಧಾನ ಮಾಡಲು ಹೇಳುತ್ತದೆ ಮತ್ತು ದೇಹವೆ ದೇಗುಲ ಎಂದು ಹೇಳುತ್ತದೆ.
ಲಿಂಗಾಯತ ವೇದಗಳನ್ನು ಮಾನ್ಯ ಮಾಡುವುದಿಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಹಿಂದೂ ಧರ್ಮದ ಭಾಗವಲ್ಲ. ಈಗ ಹೇಳಿ ಇವೆರಡು ಒಂದೇ ನಾಣ್ಯದ ಮುಖಗಳೇ?

-ಶರಣರು ಬರೆದ ವಚನಗಳಲ್ಲಿ ವೀರಶೈವ ಇದೆ ಲಿಂಗಾಯತ ಇಲ್ಲ ಎಂದು ಹೇಳಿದ್ದೀರಿ ಇದು ಸರಿಯೇ? ವೀರಶೈವ ಪದ ಷಟ್ಸ್ಥಲದ ಯಾವ ವಚನಗಳಲ್ಲು ಇಲ್ಲ. ಇನ್ನು ಕೆಲ ವಚನಗಳಲ್ಲಿ ವೀರಶೈವ ಪದವನ್ನು 15-16 ನೇ ಸಾಲಿನಲ್ಲಿ ಸೇರಿಸಿದ್ದಾರೆ ಎಂದು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ನಿರ್ಧರಿಸಿ ಇಂಥ ಪ್ರಕ್ಷಿಪ್ತ ವಚನಗಳನ್ನು ಬೇರ್ಪಡಿಸಿದ್ದಾರೆ.

ಕಾರಣ ವೀರಶೈವ ಬಸವ ಪೂರ್ವದಲ್ಲಿ ಹುಟ್ಟಿದ್ದಲ್ಲ, ಬಸವ ಪೂರ್ವದಲ್ಲಿ ಇದ್ದದ್ದು ಶೈವ ಪಂಥಗಳು. ಆದರೆ ಲಿಂಗಾಯತ, ಲಿಂಗವಂತ ಪದ ಬಸವಾದಿ ಶರಣರ ವಚನಗಳಲ್ಲಿ ನೂರಕ್ಕು ಮೇಲೆ ಉಲ್ಲೇಖವಾಗಿದೆ. ಉದಾಹರಣೆಗೆ ಒಂದು ವಚನ ಹೀಗಿದೆ…
ಲಿಂಗವಿದ್ದಲ್ಲಿ ನಿಂದೆಯಿರದು, ನಿಂದೆಯಿದ್ದಲ್ಲಿ ಲಿಂಗವಿರದು ಅವರೆಂತಿದ್ದಡೇನು? ಹೇಗಿದ್ದಡೇನು? ಲಿಂಗವಂತ ರವರು, ಉಪಮಿಸಬಾರದು ಮಹಾಘನವು ಕೂಡಲಸಂಗನ ಶರಣರು ವಚನ ಸಂಖ್ಯೆ:1314

-ಪಂಚಪೀಠಗಳಿಗೆ, ಪಂಚಪೀಠಾಧೀಶರಿಗೆ ಇತಿಹಾಸವಿಲ್ಲ ಇದು ಪುರಾಣ ಕಲ್ಪಿತ ಇತಿಹಾಸ.

1) ಕ್ರಿ.ಶ.15-16 ನೇ ಶತಮಾನದಲ್ಲಿ ಕೊಲ್ಲಿಪಾಕಿಯ ಸೋಮೇಶ್ವರ ಲಿಂಗದಲ್ಲಿ ಉದ್ಬವಿಸಿದ ರೇಣುಕಾಚಾರ್ಯರು ಬಾಳೆ ಹಳ್ಳಿಯಲ್ಲಿ ಪೀಠ ಸ್ಥಾಪನೆ ಮಾಡಿದರು.
2) ಮರುಳಸಿದ್ದರು ವಟ ಕ್ಷೇತ್ರದಲ್ಲಿ ಸಿದ್ದೇಶ್ವರ ಲಿಂಗದಲ್ಲಿ ಉದ್ಬವಿಸಿ ಉಜ್ಜಿನಿಯಲ್ಲಿ ಪೀಠ ಸ್ಥಾಪಿಸಿದರು.
3) ಏಕೋರಾಮ ದ್ರಾಕ್ಷಾರಾಮ ಕ್ಷೇತ್ರದ ರಾಮನಾಥ ಲಿಂಗದಲ್ಲಿ ಉದ್ಬವಿಸಿ ಹಿಮಾಲಯದಲ್ಲಿ ಕೇದಾರ ಪೀಠ ಸ್ಥಾಪಿಸಿದರು.
4) ಪಂಡಿತಾರಾಧ್ಯರು ಸುಧಾ ಕುಂಡ ಕ್ಷೇತ್ರದ ಮಲ್ಲಿಕಾರ್ಜುನ ಲಿಂಗದಲ್ಲಿ ಉದ್ಬವಿಸಿ ಶ್ರೀಶೈಲ ಪೀಠ ಸ್ಥಾಪಿಸಿದರು.
5) ವಿಶ್ವಾರಾಧ್ಯರು ಕಾಶಿಯ ವಿಶ್ವನಾಥ ಲಿಂಗದಲ್ಲಿ ಉದ್ಬವಿಸಿ ಕಾಶಿಪೀಠ ಸ್ಥಾಪಿಸಿದರು.

ಇವೆಲ್ಲವನ್ನು ಕಟ್ಟು ಕಥೆಯಲ್ಲದೇ ಮತ್ತೇನೆಂದು ಕರೆಯಲು ಸಾಧ್ಯ? ಬಲ್ಲವರೇ ಹೇಳಬೇಕು.

ಮೊದಲು ಚತುರಾಚಾರ್ಯರು ಇದ್ದಿದ್ದು ಎಂದು ಪುರಾಣಗಳಲ್ಲಿ ಕಾಣುತ್ತೇವೆ. ಇದಕ್ಕೆ ಈ ಕೆಳಗಿನ ಶ್ಲೋಕವೇ ಸಾಕ್ಷಿ

ರೇವಣಶ್ಯ ಗುರು: ಪೂರ್ವಂ ಮರುಲಸ್ತದ ನಂತರಂ ರಾಮದೇವ ಮುನಿ ಶ್ರೀಮಾನ ಪಂಡಿತಾರಾಧ್ಯ ದೇಶಿಕ.

ತದನಂತರ ಕಾಶಿಯ ಪೀಠಕ್ಕೆ ವಿಶ್ವಾರಾಧ್ಯನ್ನು ಸೇರಿಸಿಕೊಂಡಿದ್ದಾರೆಂದು ಸ್ಪಷ್ಟವಾಗುತ್ತದಲ್ಲವೇ? ಇದರಿಂದ ನಮಗೆ ತಿಳಿಯುವುದೇನೆಂದರೆ ಬಸವ ಪೂರ್ವದಲ್ಲಿ ವೀರಶೈವ ಇರಲಿಲ್ಲ, ಶೈವ ಇತ್ತು. ಇದೂಂದು 15-16 ನೇ ಶತಮಾನದಲ್ಲಿ ಕಟ್ಟಿದ ಪುರಾಣ ಕಲ್ಪನೆಯ ಕಥೆ.

ಮೈಸೂರು ಪ್ರಾಂತ್ಯದ Extract census of India 1891 volume xxv Mysore part -|| — Imperial census India . Index of caste V. N. Iyengar press 1893 Book No . 315-487 Ind. 1891 Volume -2 caste No. , 56 page No. 309 ರ ಪ್ರಕಾರ ವೀರಶೈವ ಎಂಬುದು ಲಿಂಗಾಯತ ಧರ್ಮದ ಒಂದು ಒಳಪಂಗಡ ಇದನ್ನು 38 ನೇ ಸಂಖ್ಯೆಯಲ್ಲಿ ದಾಖಲಿಸಿದೆ ಇದಕ್ಕೆ ಸ್ವತಂತ್ರ ಅಸ್ತಿತ್ವ ಇಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಯುಕ್ತ ಲಿಂಗಾಯತ ಸ್ವತಂತ್ರ, ವೀರಶೈವ ಅತಂತ್ರ ಕಾರಣ ವೀರಶೈವಕ್ಕೂ ಲಿಂಗಾಯತಕ್ಕೂ ಸಂಬಂಧವಿಲ್ಲ ಇವೆರಡು ಬೇರೆ ಬೇರೆ ಇಷ್ಟವಿದ್ದರೆ ಚರ್ಚೆಗೆ ಬನ್ನಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
Leave a comment

Leave a Reply

Your email address will not be published. Required fields are marked *

ಸಂಸ್ಥಾಪಕ ಅಧ್ಯಕ್ಷ ಹಾಗೂ ಪದಾಧಿಕಾರಿಗಳು, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು.