ಹಾವೇರಿ:
ಜಿಲ್ಲೆಯ ಸುಕ್ಷೇತ್ರ ನರಸೀಪುರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಇವರ ವತಿಯಿಂದ ಜನೇವರಿ 11, 2026 ಭಾನುವಾರ ಬೆಳಿಗ್ಗೆ 9-30 ಗಂಟೆಗೆ ಶ್ರೀ ಗಂಗಾಧರ ನಂದಿ ಜಿಲ್ಲಾ ಕನ್ನಡ ಸಾಹಿತ್ಯ ಭವನ, ವಿನಾಯಕ ನಗರ ಬಿ ಬ್ಲಾಕ್, ಡಿ.ಸಿ. ಆಫೀಸ್ ರಸ್ತೆ, ಹಾವೇರಿ ಇಲ್ಲಿ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿದೆ.
ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ-2026, ವಚನಗ್ರಂಥ ಮಹಾ ರಥೋತ್ಸವ ನಿಮಿತ್ಯ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯ ನಿಯಮಗಳು:
1) ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳನ್ನು ಮಾತ್ರ ಹೇಳಬೇಕು, ಪೂರ್ತಿಯಾಗಿ ವಚನಗಳನ್ನು ಹೇಳಬೇಕು.
2) ತಾವು ಹೇಳುವ ವಚನಗಳನ್ನು ನೋಟಬುಕ್ ಒಂದರಲ್ಲಿ ಬರೆದುಕೊಂಡು ಬರಬೇಕು, ಸ್ಪರ್ಧೆಗೆ ಮುನ್ನ ಸಮಿತಿ ಕಡೆ ಒಪ್ಪಿಸಬೇಕು.
3) ಪ್ರವೇಶ ಫೀ ಒಬ್ಬರಿಗೆ 20 ರೂಪಾಯಿಗಳು.
4) ಮಧ್ಯಾಹ್ನದ ಪ್ರಸಾದ ವ್ಯವಸ್ಥೆ ಮಾಡಲಾಗುವುದು
5) ವಚನ ನೆನಪಿಸಿಕೊಳ್ಳಲು ಮಧ್ಯದಲ್ಲಿ 30 ಸೆಕೆಂಡು ಮಾತ್ರ ಕಾಲಾವಕಾಶ ಇರುತ್ತದೆ.
6) ಹಿಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಥಮಸ್ಥಾನ ಗಳಿಸಿದ ವಿಜೇತರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
7) ಓದುತ್ತಿರುವ ತರಗತಿ ಬಗ್ಗೆ ಶಾಲೆ/ಕಾಲೇಜಿನ ಮುಖ್ಯಸ್ಥರಿಂದ ಪ್ರಮಾಣಪತ್ರ ತರುವುದು ಕಡ್ಡಾಯವಿರುತ್ತದೆ.
8) ತೀರ್ಪುಗಾರರ ನಿರ್ಣಯವೇ ಅಂತಿಮ ನಿರ್ಣಯವಾಗಿರುತ್ತದೆ.
9) ಬಹುಮಾನ ವಿತರಣೆಯನ್ನು ಜನೇವರಿ 14, 2026 ರ ಬುಧವಾರ, ಮಧ್ಯಾಹ್ನ 12 ಗಂಟೆಗೆ, ನರಸೀಪುರದ (ಗುತ್ತಲ ಸಮೀಪ) ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಜರುಗುವ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ವೇದಿಕೆಯಲ್ಲಿ ವಿತರಿಸಲಾಗುವುದು.
ವಿಜೇತರಿಗೆ ಬಹುಮಾನ:
ಶಾಲಾ ಹಂತ
ಪ್ರಥಮ ಬಹುಮಾನ 5000 /- ದ್ವಿತೀಯ ಬಹುಮಾನ 3000 /- ತೃತೀಯ ಬಹುಮಾನ 2000 /-
ಕಾಲೇಜು ಹಂತ
ಪ್ರಥಮ ಬಹುಮಾನ 5000 /- ದ್ವಿತೀಯ ಬಹುಮಾನ 3000 /- ತೃತೀಯ ಬಹುಮಾನ 2000 /- (ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ,
ಡಾ. ಕಾಂತೇಶ ಎನ್. ಅಂಬಿಗೇರ-8095226282
ಮಹಾಂತೇಶ ಬಿ. ನಿಟ್ಟೂರು-9901979890
ಸಿದ್ಧರಾಮ ದೇವರು-7259424148
