ಭಾಲ್ಕಿ
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ದಸರಾ ದರ್ಬಾರ್ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ಬಸವಕಲ್ಯಾಣ ನಗರದಲ್ಲಿ ಜರುಗಲಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಈಶ್ವರ ಖಂಡ್ರೆ ಅವರ ಭಾಲ್ಕಿ ಪಟ್ಟಣದ ನಿವಾಸದಲ್ಲಿ ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಸಾನಿಧ್ಯದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ಸಭೆಯಲ್ಲಿ ದಸರಾ ದರ್ಬಾರ್ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಈಶ್ವರ ಖಂಡ್ರೆ ಅವರನ್ನು ನೇಮಕ ಮಾಡಿದ ಪತ್ರ ಅವರಿಗೆ ಸಲ್ಲಿಸಲಾಯಿತು. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಪ್ರಯತ್ನಿಸುವೆ ಎಂದು ಸಚಿವ ಖಂಡ್ರೆ ಹೇಳಿದರು.
ಸಭೆಯಲ್ಲಿ ಬಸವಕಲ್ಯಾಣ ಗವಿಮಠದ ಪೂಜ್ಯ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಸಂಸದರಾದ ಸಾಗರ ಖಂಡ್ರೆ, ಬಸವಕಲ್ಯಾಣದ ಶಾಸಕರಾದ ಶರಣು ಸಲಗರ, ಸದ್ಬೋಧನಾ ಸಂಸ್ಥೆ ತಾಲೂಕ ಘಟಕದ ಅಧ್ಯಕ್ಷರಾದ ಬಸವರಾಜ ಸ್ವಾಮಿ, ಮುಖಂಡರಾದ ಶಶಿಕಾಂತ ದುರ್ಗೆ, ಸುನೀಲ ಪಾಟೀಲ, ರಾಜಕುಮಾರ ಬಿರಾದಾರ ಸಿರಗಾಪೂರ, ಮೇಘರಾಜ ನಾಗರಾಳೆ ಹಾರಕೂಡ, ರಮೇಶ ರಾಜೋಳೆ, ವೀರಣ್ಣ ಶೀಲವಂತ, ದಿಲೀಪಕುಮಾರ ಸ್ವಾಮಿ, ಸಿದ್ರಾಮ ಕವಳೆ ಸೇರಿದಂತೆ ಸ್ವಾಗತ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.