ಗೊರುಚ ಅವಹೇಳನಕ್ಕೆ ರಂಭಾಪುರಿ ಶ್ರೀ ಕ್ಷಮೆ ಕೇಳಲಿ: ಲಿಂಗಾಯತ ಮಹಾಸಭಾ

ಬಸವ ಮೀಡಿಯಾ
ಬಸವ ಮೀಡಿಯಾ

ಮಂಡ್ಯ

ನಾಡೋಜ ಗೊರು ಚನ್ನಬಸಪ್ಪನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ರಂಭಾಪುರಿ ಶ್ರೀಗಳು ಕ್ಷಮೆಯಾಚಿಸಬೇಕೆಂದು ಲಿಂಗಾಯತ ಮಹಾಸಭಾ ಆಗ್ರಹಿಸಿದೆ.

ಇಂದು ನಗರದಲ್ಲಿ ಸುದ್ದಿಘೋಷ್ಠಿಯಲ್ಲಿ ಮಾತನಾಡುತ್ತಾ ಓಂಕಾರೇಶ್ವರ ಸ್ವಾಮೀಜಿ ಫೆಬ್ರವರಿ 27ರಂದು ‘ಮಿಥ್ಯ ಸತ್ಯ’ ಗ್ರಂಥ ಬಿಡುಗಡೆ ಸಂದರ್ಭದಲ್ಲಿ ಗೊರುಚ ವೀರಶೈವ ಪದ ಬೇಡ, ಲಿಂಗಾಯತ ಪದವನ್ನೇ ಬಳಸುವಂತೆ ಹೇಳಿದ್ದಾರೆ.

ಆ ಸತ್ಯ ಅರಗಿಸಿಕೊಳ್ಳಲಾಗದ ಪಂಚಪೀಠದ ರಂಭಾಪುರಿ, ಕೇದಾರ ಶ್ರೀಗಳು ಗೊರುಚ ಅವರನ್ನು ಏಕವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ.

ಕಲ್ಲಿನ ಲಿಂಗದಲ್ಲಿ ರೇಣುಕಾಚಾರ್ಯರು ಜನಿಸಿ ಜಗದ್ಗುರುವಾದರು ಎಂದು ಪಂಚಪೀಠದ ಗುರುಗಳು ಅನಾದಿಕಾಲದಿಂದಲೂ ಜನರನ್ನು ಕಪೋಲಕಲ್ಪಿತ ಕಥೆಯನ್ನು ಕಟ್ಟಿ ಧಾರ್ಮಿಕವಾಗಿ ದಿಕ್ಕುತಪ್ಪಿಸುತ್ತಿದ್ದಾರೆ.

ರೇಣುಕಾಚಾರ್ಯರೆಂಬ ಕಾಲ್ಪನಿಕ ವ್ಯಕ್ತಿಯನ್ನು ಇಟ್ಟುಕೊಂಡು ಕಾಗಕ್ಕ ಗುಬ್ಬಕ್ಕನ ಕಥೆಯಂತಿರುವ ಪುರಾಣವನ್ನೇ ಇತಿಹಾಸ ಎಂದು ತಿಳಿದಿರುವ ನಿಮ್ಮ ತಪ್ಪು ಕಲ್ಪನೆಯನ್ನು ಬಿಟ್ಟು ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡಿ, ತತ್ವ ವಿಚಾರಕ್ಕೆ ಒಪ್ಪಿ ಬಂದು ಲಿಂಗಾಯತ ಧರ್ಮದ ಒಳಗಡೆ ಸೇರಿಕೊಳ್ಳಿ. ಇಲ್ಲ ಎಂದಾದರೆ ನಿಮ್ಮ ಪಾಡಿಗೆ ನೀವು ಇದ್ದುಬಿಡಿ, ಜನರಲ್ಲಿ ಗೊಂದಲ ಸೃಷ್ಟಿ ಮಾಡಬೇಡಿ.

ಜನರನ್ನು ದಿಕ್ಕು ತಪ್ಪಿಸುವ ಕೆಲಸ ಈಗಲಾದರೂ ಬಿಡಿ, ನಿಮಗೂ ವಯಸ್ಸಾಗಿದೆ, ಈಗಲಾದರೂ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿ. ಪಂಚಾಚಾರ್ಯರಾದ ನೀವುಗಳೇ ಬಸವಣ್ಣನವರ ಜಯಂತಿಯನ್ನು ಮಾಡದೆ, ಬಸವಣ್ಣನವರ ಭಾವಚಿತ್ರವನ್ನು ಇಡದೆ ಧರ್ಮದ್ರೋಹಿ ಕೆಲಸವನ್ನು ಮಾಡುತ್ತಿದ್ದೀರಿ, ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಂ.ಎಸ್. ಮಂಜುನಾಥ ಅದ್ಯಕ್ಷರು, ಲಿಂಗಾಯತ ಮಹಾಸಭಾ, ಮಂಡ್ಯ ಜಿಲ್ಲೆ, ಶಿವಲಿಂಗಪ್ಪ, ಉಪಾಧ್ಯಕ್ಷರು, ಮುಖಂಡರಾದ ಬೆಳ್ಳಪ್ಪ, ಎಲ್.ಡಿ. ನಂದೀಶ, ಕುಮಾರ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IxxC2m7AXyW84KPf73t5iL

Share This Article
6 Comments
  • ಓಂಕಾರೇಶ್ವರ ಶ್ರೀಗಳು ಸ್ಪಷ್ಟವಾಗಿ ಲಿಂಗಾಯತ ಧರ್ಮದ ಬಗ್ಗೆ ಹೇಳಿಕೆಯನ್ನು ನೀಡಿರುವವರು ರಂಭಾಪುರಿಯವರೆಗೂ ಕೂಡ ಲಿಂಗಾಯತ ಮತ್ತು ವೀರಶೈವದ ಬಗ್ಗೆ ಸ್ಪಷ್ಟವಾಗಿ ಮನವರಿಕೆ ಮಾಡಿದ ಶ್ರೀಗಳಿಗೆ ಅಭಿನಂದನೆಗಳು 💐🙏🏻🙏🏻

  • ರಂಭಾಪುರಿ ಶ್ರೀಗಳು ಹೇಳಿದ್ದು ಸರಿ ಇದೆ ಲಿಂಗಾಯತರು ಅನ್ನುವ ಪದ ಆಡುಭಾಷೆ ಅಷ್ಟೇ ಅದ್ರಲ್ಲಿ ಎನ್ ತಪ್ಪು

  • ಗೊರಚ ಅವರು ಯಾವತ್ತೂ ಯಾರನ್ನೂ ಕರಿತು ಏಕವಚನ ಬಳಸದ ಕಾವಿರಹಿತ ಜ್ಞಾನಿ ಸಂತರು!!,ಆದರೆ ಕಾವಿಧಾರಿ ಶ್ರೀಗಳು ಸತ್ಯ ಅರಗಿಸಿಕೊಳ್ಳಲಾಗದೆ, ವೈಜ್ಞಾನಿಕ/ವೈಚಾರಿಕವಾಗಿ ಉತ್ತರಿಸಲಾಗದೆ ಉದ್ವೇಗದಿಂದ ವಯೊವೃದ್ಏಧರಿಗೆ ಏಕವಚನ
    ಬಳಸಿರುವುದು ಕಾವಿಗೇ ಅವಮಾನ

  • ರಂಭಾಪುರಿಯವರು ತಮ್ಮ ಶಾಲಾ ದಾಖಲೆಗಳನ್ನು ನೋಡಿಲ್ವೆ ಅದರಲ್ಲಿ ಸ್ಪಷ್ಟವಾಗಿ ಲಿಂಗಾಯತ ಅಂತಾ ಇದೆ ದತ್ತಕ್ಕೆಂದು ಬೇರೆ ಕಡೆ ಹೋದರೆ ಆ ಮನೆಯ ಹೆಸರನ್ನು ಹೇಳಿಕೊಳ್ಳಲಿ ಬೇಡ ಎನಲಾಗದು ಆದರೆ ಹಡೆದ ತಂದೆ ತಾಯಿಗಳ ಧರ್ಮವೇ ಇಲ್ಲಾ ಎಂದರೆ ಅದು ಅವರು ಹಡೆದ ತಂದೆ ತಾಯಿಗಳಿಗೆ ತೋರುವ ಅಗೌರವ ಅಷ್ಟೇ ಅಲ್ಲ ಬಸವಾದಿ ಶರಣರ ಹೆಸರಿನಿಂದ ಪಡೆದ ತುತ್ತು ಪ್ರಸಾದಕ್ಕೆ ಮಾಡುವ ಮಾಹಾ ದ್ರೋಹದ ಕಾರಣವೆಂದರೆ ತಪ್ಪಾಗಲಾರದು. ಒಂದು ವೇಳೆ ಲಿಂಗಾಯತ ಮತ್ತು ಇವರು ಹೇಳುವ ವೀರಶೈವ ಎರಡೂ ಒಂದೇ ಇದ್ದರೆ ಶರಣರು ಹೇಳಿದಂತೆ ಏಕ ದೇವೋಪಾಸಕರಾಗಿ ಶರಣರಂತೆ ನಡೆದು ತೋರಲಿ.

  • ಸಿ ಎನ್ ಹಿರೇಮಠ ,ನಿಮ್ಮ ರಂಭಾಪೂರಿ ಯುವರ ಶಾಲಾ ದಾಖಲೆಯಲ್ಲಿ ಲಿಂಗಾಯತ ಎಂಬುದಾಗಿದೆ ,ಹಾಗಾದರೆ ವೀರಶೈವ ಆಗ ಯಲ್ಲಿ ಮಲಗಿತ್ತು?

  • ಗುರುಲಿಂಗಪ್ಪ ಹೊಗತಾಪುರ ಬೀದರನಗರ ಬೀದರಜಿಲ್ಲೆ says:

    ಇವರ ಅಡ್ಡಪಲ್ಲಕಿಯಿಂದ ಕೆಳಗೆ ಇಳಿದು ಸಮಾಜದ ಕಡೆಗೆ ಮುಖಮಾಡಲಿ. ಲಿಂಗಾಯತ ಧರ್ಮದ ಅಡಿಯಲ್ಲಿ ಬಂದು ಧರ್ಮ ಬೆಳೆಸಿರಿ. ಬರಡು ಪುರಾಣದ ಕಥೆಯನ್ನು ಹೇಳಿ ಗೇಲಿಗೊಳಗಾಗಬೇಡಿ.

Leave a Reply

Your email address will not be published. Required fields are marked *