ಗದಗ ಜಿಲ್ಲೆ, ರೋಣ ತಾಲೂಕು, ಅಬ್ಬಿಗೇರಿ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಶ್ರೀಗಳ 33ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ, ಅಕ್ಟೋಬರ್ 03 ರಿಂದ 12 ರವರೆಗೆ ಗ್ರಾಮದ ಅನ್ನದಾನಿಶ್ವರ ಪ್ರೌಢಶಾಲೆ ಆವರಣದಲ್ಲಿ ನಿರ್ಮಿಸಲಾದ ಮಾನವಧರ್ಮ ಮಂಟಪದಲ್ಲಿ ನಡೆಯಲಿದೆ.
ಅ. 03ರಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಸಮ್ಮೇಳನ ಉದ್ಘಾಟಿಸುವರು.
04ರಂದು ಸಹಕಾರ ಸಚಿವ ಕೆ. ಎನ್. ರಾಜಣ್ಣ ‘ರಂಭಾಪುರಿ ಬೆಳಗು’ ಕೃತಿ ಬಿಡುಗಡೆ ಮಾಡುವರು.
05ರಂದು ‘ಗುರು ಇಂಗ್ಲೀಷ್’ ಕೃತಿಯನ್ನು ಗೃಹ ಸಚಿವ ಜಿ. ಪರಮೇಶ್ವರ್ ಬಿಡುಗಡೆ ಮಾಡುವರು.
06 ರಂದು ನಡೆಯುವ ಕಾರ್ಯಕ್ರಮದಲ್ಲಿ ಸಂಸದ ಜಗದೀಶ್ ಶೆಟ್ಟರ್, ವಿಜಯ ಸಂಕೇಶ್ವರ ಭಾಗವಹಿಸುವರು.
07ರಂದು ‘ಬಾಲಕ-ಪಾಲಕ-ಶಿಕ್ಷಕರ ನೀತಿ ಸಂಹಿತೆ’ ಕೃತಿಯನ್ನು ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಬಿಡುಗಡೆ ಮಾಡುವರು.
08ರಂದು ‘ಕಾವ್ಯ ಕುಸುಮ’ ಕೃತಿಯನ್ನು ಉಪಮುಖ್ಯಮಂತ್ರಿಯ ಡಿ.ಕೆ. ಶಿವಕುಮಾರ ಬಿಡುಗಡೆ ಮಾಡುವರು.
09ರಂದು ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಜರಾಗುವರು.
10ರ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಅಮರೇಗೌಡ ಬಯ್ಯಾಪುರ, ವೀರಣ್ಣ ಮತ್ತಿಕಟ್ಟಿ ಭಾಗವಹಿಸುವರು.
11ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ‘ರುದ್ರಗಣಾಧಿಪ ವೀರಭದ್ರ’ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ‘ಶ್ರೀ ಪೀಠದ ವಾರ್ತಾ ಸಂಕಲನ’ ಕೃತಿ ಬಿಡುಗಡೆ ಮಾಡುವರು.
ನಾಡಿನ ಶಿವಾಚಾರ್ಯರು, ರಾಜಕೀಯ ಧುರೀಣರು, ಸಾಹಿತಿ, ವಿದ್ವಾಂಸರು, ಸಮಾಜಚಿಂತಕರು, ಕವಿ ಕಲಾವಿದರು ಪ್ರತಿದಿನದ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಸಮ್ಮೇಳನದಲ್ಲಿ ರೋಣ ತಾಲೂಕ ಶಾಸಕ, ರಾಜ್ಯ ಖನಿಜ ಅಭಿವೃದ್ಧಿ ನಿಗಮ ಮಂಡಳಿ, ಬೆಂಗಳೂರು ಅಧ್ಯಕ್ಷರಾದ ಜಿ.ಎಸ್. ಪಾಟೀಲ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ಮಾಜಿ ಸಚಿವ ಕಳಕಪ್ಪ ಬಂಡಿ ದಾಸೋಹ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.